ತೆಲಂಗಾಣದಲ್ಲಿ ನಟ ಪವನ್ ಕಲ್ಯಾಣ ಪಕ್ಷಕ್ಕೆ ಹೀನಾಯ ಸೋಲು : ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಅಭ್ಯರ್ಥಿಗಳು…!

ಹೈದರಾಬಾದ್‌ : ಈ ಬಾರಿ ತೆಲಂಗಾಣ ಚುನಾವಣೆಯಲ್ಲಿ ತೆಲುಗು ಸೂಪರ್‌ ಸ್ಟಾರ್‌ ಜನಸೇನಾ ಪಕ್ಷವು ಸ್ಪರ್ಧಿಸಿದ್ದು, ತಾನು ಸ್ಪರ್ಧಿಸಿದ್ದ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಕಳಪೆ ಸಾಧನೆ ಮಾಡಿದೆ.
ಆಶ್ವರಪೇಟೆ ಮತ್ತು ವೈರಾ ಕ್ಷೇತ್ರಗಳಲ್ಲಿ ಜನಸೇನಾ ಪಕ್ಷವು ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿದೆ. ಮೂರನೇ ಸ್ಥಾನ ಪಡೆದ ಕುಕಟ್‌ಪಲ್ಲಿ ಕ್ಷೇತ್ರದಲ್ಲಿ ಮಾತ್ರ ಜನಸೇನಾ ಪಕ್ವು ಉತ್ತಮ ಸಾಧನೆ ಮಾಡಿದೆ. ಆದರೆ ಇದಕ್ಕೆ ಕಾರಣ ಅಭ್ಯರ್ಥಿ ಘೋಷಣೆಗೂ ಎರಡು ದಿನ ಮೊದಲು ಜನಸೇನಾ ಸೇರಿದ್ದ ಬಿಜೆಪಿ ಮುಖಂಡ ಮುನ್ನೂರು ಪ್ರೇಮಕುಮಾರ ಅವರು ಈ ಸಾಧನೆ ಮಾಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿರುವ 8 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಕುಕಟ್‌ಪಲ್ಲಿಯಲ್ಲಿ ಜನಸೇನೆ ಅಭ್ಯರ್ಥಿ  5306 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಈಗಾಗಲೇ ಫಲಿತಾಂಶ ಪ್ರಕಟವಾಗಿರುವ ಅಶ್ವರಾವ್‌ಪೇಟೆ ಕ್ಷೇತ್ರದಲ್ಲಿ ಜನಸೇನೆಗೆ 682 ಮತಗಳು ಚಲಾವಣೆಯಾಗಿವೆ. ವೈರಾ ಕ್ಷೇತ್ರದಲ್ಲಿ ಜನಸೇನಾ ಅಭ್ಯರ್ಥಿ 498 ಮತಗಳನ್ನು ಪಡೆದರೆ ನೋಟಾಗೆ 321 ಮತಗಳು ಬಂದಿವೆ. ತಾಂಡೂರು ಕ್ಷೇತ್ರದಲ್ಲಿ ಜನಸೇನಾ ಅಭ್ಯರ್ಥಿಗೆ 95 ಹಾಗೂ ನೋಟಾಗೆ 21 ಮತಗಳು, ಖಮ್ಮಂ ಕ್ಷೇತ್ರದಲ್ಲಿ ಜನಸೇನೆಗೆ 88 ಹಾಗೂ ನೋಟಾಗೆ 64 ಮತಗಳು ಲಭಿಸಿವೆ. ಕೋತಗುಡೆಂನಲ್ಲಿ ಜನಸೇನಾ ಅಭ್ಯರ್ಥಿಗೆ 118 ನೋಟಾ ವಿರುದ್ಧ 112 ಮತಗಳು ಚಲಾವಣೆಯಾಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ. ನಾಗರ್ ಕರ್ನೂಲ್ ಕ್ಷೇತ್ರದಲ್ಲಿ ಜನಸೇನೆ 310 ಮತಗಳನ್ನು ಪಡೆದಿದ್ದರೆ ನೋಟಾ 187 ಮತಗಳನ್ನು ಪಡೆದಿದೆ.

ಪ್ರಮುಖ ಸುದ್ದಿ :-   ವಿಡಿಯೋ | ಭತ್ತದ ಗದ್ದೆಗೆ ಬಂದ ಬೃಹತ್‌ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ತಂದ ರೈತ....!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement