ಭಿಂದ್ರನ್‌ವಾಲೆ ಸೋದರಳಿಯ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಸಾವು : ಈತ ಯಾಕೆ ಭಾರತದಿಂದ ಓಡಿಹೋಗಿದ್ದ..?

ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ ಎಂದು ಅವರ ಸಹೋದರ ಜಸ್ಬೀರ್ ಸಿಂಗ್ ರೋಡ್ ಖಚಿತಪಡಿಸಿದ್ದಾರೆ.
ನಿಷೇಧಿತ ಸಂಘಟನೆಗಳಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಮತ್ತು ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್‌ನ ಸ್ವಯಂ-ಘೋಷಿತ ಮುಖ್ಯಸ್ಥ 72 ವರ್ಷದ ಲಖ್ಬೀರ್ ಸಿಂಗ್ ರೋಡ್ ಹಲವಾರು ವರ್ಷಗಳಿಂದ ಪಾಕಿಸ್ತಾನದಿಂದ ತನ್ನ ಕಾರ್ಯಾಚರಣೆ ನಡೆಸುತ್ತಿದ್ದ.
ಲಖ್ಬೀರ್ ಸಿಂಗ್ ರೋಡ್ ಹತ್ಯೆಗೀಡಾದ ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆಯ ಸೋದರಳಿಯ, ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆದೇಶದ ನಂತರ ನಡೆದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಸಮಯದಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್‌ ನಲ್ಲಿ ಭಾರತೀಯ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದ.

ಲಖ್ಬೀರ್ ಸಿಂಗ್ ರೋಡ್ ನನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಭಾರತ ಸರ್ಕಾರವು ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ. ಆತ ಆರಂಭದಲ್ಲಿ ಭಾರತದಿಂದ ದುಬೈಗೆ ಓಡಿಹೋಗಿದ್ದ ಮತ್ತು ನಂತರ ಪಾಕಿಸ್ತಾನಕ್ಕೆ ತೆರಳಿದ್ದ.
ರೋಡ್ ಹಲವಾರು ವರ್ಷಗಳಿಂದ ಪಾಕಿಸ್ತಾನದಿಂದ ನಿಷೇಧಿತ ಸಂಘಟನೆಯಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ (KLF) ಅನ್ನು ನಡೆಸುತ್ತಿದ್ದ ಮತ್ತು ಲಾಹೋರ್‌ನಿಂದ ಅವರ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಎಂದು ಶಂಕಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ....| ವಿಚ್ಛೇದನ ಪಡೆದ ಮಗಳನ್ನು ವಾದ್ಯಗಳ ಸಮೇತ ಮನೆಗೆ ಕರೆತಂದ ತಂದೆ...!

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸೂಚನೆ ಮೇರೆಗೆ ಪಂಜಾಬ್‌ನಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಲಖ್ಬೀರ್ ಸಿಂಗ್ ರೋಡ್ ಭಾಗಿಯಾಗಿದ್ದ ಎಂದು ಈತನ ಮೇಲೆ ಆರೋಪವಿದೆ. ಅಕ್ಟೋಬರ್‌ನಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಯೋತ್ಪಾದನಾ ವಿರೋಧಿ ಏಜೆನ್ಸಿಯ ದಾಳಿಯ ನಂತರ ರೋಡ್‌ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಪಂಜಾಬ್‌ನ ಮೋಗಾದಲ್ಲಿ ದಾಳಿ ನಡೆಸಲಾಗಿತ್ತು.
2021 ಮತ್ತು 2023 ರ ನಡುವೆ ಭಯೋತ್ಪಾದನೆ-ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ರೋಡ್ ವಿರುದ್ಧ ಆರು ಪ್ರಕರಣಗಳನ್ನು ತನಿಖೆ ನಡೆಸುತ್ತಿರುವಾಗ ಭಯೋತ್ಪಾದನಾ ವಿರೋಧಿ ಏಜೆನ್ಸಿಯ ಕ್ರಮವು ಬಂದಿತ್ತು.

ಭಾರತದಲ್ಲಿ ನಿಷೇಧಿತ ಸಂಘಟನೆಯಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ (KLF) ಮುಖ್ಯಸ್ಥನಾಗಿದ್ದ ಲಖ್ಬೀರ್ ಸಿಂಗ್ ರೋಡ್ ಭಾರತ-ನೇಪಾಳ ಗಡಿಯ ಬಳಿ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಸೆಲ್‌ನ ಪ್ರಾಥಮಿಕ ಸಂಘಟಕನಾಗಿದ್ದ ಹಾಗೂ ಗಲಭೆಗಳನ್ನು ಸೃಷ್ಟಿಸಲು ಕಾರಣನಾಗಿದ್ದ.
ಭಾರತದ ವಿರುದ್ಧ ದಾಳಿ ನಡೆಸಲು ಪಾಕಿಸ್ತಾನ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ರೋಡ್ ಹಲವು ಬಾರಿ ತಪ್ಪೊಪ್ಪಿಕೊಂಡಿದ್ದ. 20 ಕೆಜಿ ಆರ್‌ಡಿಎಕ್ಸ್‌ ಸಮೇತ ಆತನನ್ನು ಬಂಧಿಸಲಾಗಿತ್ತು, ವಿಚಾರಣೆ ವೇಳೆ ಅದನ್ನು ಕಠ್ಮಂಡುವಿನ ಪಾಕಿಸ್ತಾನಿ ರಾಯಭಾರಿ ಕಚೇರಿಯ ಕೌನ್ಸಿಲರ್ ನೀಡಿದ್ದಾನೆ ಎಂದು ಹೇಳಿದ್ದ.

ಪ್ರಮುಖ ಸುದ್ದಿ :-   ಒಂದೇ ಕಡೆ ಒಟ್ಟುಗೂಡಿದ 150 ಜೋಡಿ ಅವಳಿ-ತ್ರಿವಳಿಗಳು...!

1985ರ ಜೂನ್ 23ರಂದು ಪಂಜಾಬ್ ಪೊಲೀಸರಿಗೆ ಉಗ್ರಗಾಮಿ ತಲ್ವಿಂದರ್ ಸಿಂಗ್ ಪರ್ಮಾರ್ ತಪ್ಪೊಪ್ಪಿಗೆ ನೀಡಿದ ಸಂದರ್ಭದಲ್ಲಿ ಲಖ್ಬೀರ್ ಸಿಂಗ್ ನನ್ನು ಏರ್ ಇಂಡಿಯಾ 182 ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಎಂದು ಹೆಸರಿಸಲಾಗಿತ್ತು. ಆದಾಗ್ಯೂ, ಇದು ಇನ್ನೂ ಸಾಬೀತಾಗಿಲ್ಲ.
ಲಖ್ಬೀರ್ ಸಿಂಗ್ ಕುರಿತ ಭಾರತ ಸರ್ಕಾರದ ದಾಖಲೆಯ ಪ್ರಕಾರ, ಭಾರತದಾದ್ಯಂತ ವಿವಿಐಪಿಗಳನ್ನು ಗುರಿಯಾಗಿಸಲು ಗಡಿಯುದ್ದಕ್ಕೂ ಪಂಜಾಬ್‌ಗೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಕಳ್ಳಸಾಗಣೆ ಮತ್ತು ಸರಬರಾಜು ಮಾಡುವ ಜವಾಬ್ದಾರಿ ಹೊಂದಿದ್ದ.

ಲಖ್ಬೀರ್ ಸಿಂಗ್ ಪುತ್ರ ಭಗ್ಗು ಬ್ರಾರ್ ಪ್ರಸ್ತುತ ಕೆನಡಾದಲ್ಲಿ ವಾಸಿಸುತ್ತಿದ್ದಾನೆ ಮತ್ತು ಪಂಜಾಬ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ತಂದೆಗೆ ಶಸ್ತ್ರಾಸ್ತ್ರ ಮತ್ತು ಹಣವನ್ನು ಒದಗಿಸಲು ನಿಯಮಿತವಾಗಿ ಪಾಕಿಸ್ತಾನಕ್ಕೆ ಹೋಗುತ್ತಿದ್ದ. ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪವೂ ಆತನ ಮೇಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement