ಬಾಲಿವುಡ್‌ ನಟ ಜೂನಿಯರ್ ಮೆಹಮೂದ್ ನಿಧನ

ಮುಂಬೈ: ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಹಿರಿಯ ನಟ ಜೂನಿಯರ್ ಮೆಹಮೂದ್ ಅವರು ಗುರುವಾರ ರಾತ್ರಿ ಮುಂಬೈನಲ್ಲಿ ತಮ್ಮ 67 ನೇ ವಯಸ್ಸಿನಲ್ಲಿ ನಿಧನರಾರಾಗಿದ್ದಾರೆ.
ಗುರುವಾರ ರಾತ್ರಿ ಅವರ ಸ್ಥಿತಿ ಹದಗೆಟ್ಟಿತು. ಅವರು ಮುಂಬೈನ ತಮ್ಮ ಮನೆಯಲ್ಲಿ ನಿಧನರಾದರು. ಅವರು ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ 250 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಜೂನಿಯರ್ ಮೆಹಮೂದ್ ಅವರ ಹೆಸರು ನಯೀಮ್ ಸಯ್ಯದ್, ಆದರೆ ಅವರು ಸಿನೆಮಾದಲ್ಲಿ ಜೂನಿಯರ್‌ ಮೆಹಮೂದ್‌ ಎಂದೇ ಚಿರಪರಿಚಿತರು. ಅವರು ಕಟಿ ಪತಂಗ್, ಮೇರಾ ನಾಮ್ ಜೋಕರ್, ಪರ್ವರೀಶ್ ಮತ್ತು ದೋ ಔರ್ ದೋ ಪಾಂಚ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಂಜೀವ ಕುಮಾರ್, ಹಿರಿಯ ನಟ ಬಾಲರಾಜ ಸಾಹ್ನಿ ಮತ್ತು ಇಂದ್ರಾಣಿ ಮುಖರ್ಜಿ ನಟಿಸಿದ ‘ನೌನಿಹಾಲ್’ ಚಿತ್ರದ ಮೂಲಕ ಅವರು ಬಾಲ ನಟರಾಗಿ ಸಿನೆಮಾದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1967 ರಲ್ಲಿ ಬಿಡುಗಡೆಯಾದ ‘ನೌನಿಹಾಲ್’ ನಿಂದ ಇಲ್ಲಿಯವರೆಗೆ ಅವರು ಹೆಸರನ್ನು ಜೂನಿಯರ್ ಮೆಹಮೂದ್ ಎಂದು ಇಟ್ಟುಕೊಂಡರ. 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಅವರು ಹಲವಾರು ಮರಾಠಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಇತ್ತೀಚೆಗೆ, ಹಾಸ್ಯನಟ ಮತ್ತು ನಟ ಜಾನಿ ಲೀವರ್ ಜೂನಿಯರ್ ಮೆಹಮೂದ್ ಅವರನ್ನು ಭೇಟಿಯಾಗಿದ್ದರು, ನಂತರ ಅವರು ನಟರಾದ ಜೀತೇಂದ್ರ ಮತ್ತು ಸಚಿನ್ ಪಿಲ್ಗಾಂವ್ಕರ್ ಅವರನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. ಇಬ್ಬರೂ ನಟರು ಅವರನ್ನು ಭೇಟಿಯಾದರು. ಹಿರಿಯ ನಟ ಜೀತೇಂದ್ರ ಮತ್ತು ಸಚಿನ್ ಪಿಲ್ಗಾಂವ್ಕರ್ ಅವರೊಂದಿಗೆ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಚಲನಚಿತ್ರಗಳ ಹೊರತಾಗಿ, ಅವರು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸ್ಟೇಜ್ ಶೋಗಳ ಭಾಗವಾಗಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement