ಯಲ್ಲಾಪುರ : ಗಂಗಾಧರ ಕೊಳಗಿ ಸೇರಿ ಮೂವರಿಗೆ ‘ವನರಾಗ ಪುಸ್ತಕ ಪ್ರಶಸ್ತಿ’ ಪ್ರದಾನ

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಜಿಲ್ಲಾಮಟ್ಟದ ಸಾಹಿತ್ಯ ಮತ್ತು ಗಮಕ ಅಧಿವೇಶನದ ಮೊದಲ ಅವಧಿಯ ವೇಳೆ ಸ್ವರ್ಣಿಮಾ ಭಾರತಿ ಸಾಹಿತ್ಯ ಸಮ್ಮಾನ ಮತ್ತು ಸಾಹಿತಿಗಳಿಗೆ ‘ವನರಾಗ ಪುಸ್ತಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸಿದ್ದಾಪುರದ ಗಂಗಾಧರ ಕೊಳಗಿ ಅವರ ಮಿಸ್ಡ್ ಕಾಲ್ ಕಥಾಸಂಕಲನ, ಸಿದ್ದಾಪುರದ ಟಿ.ಎಂ.ರಮೇಶ ದಶಕದ ಕಥೆಗಳು-ಕಥಾಸಂಕಲನ ಹಾಗೂ ಬೆಳಗಾವಿಯ ಡಾ.ಶೋಭಾ ನಾಯಕ ಅವರ ಶಯ್ಯಾಗೃಹದ ಸುದ್ದಿಗಳು- ಕಥಾ ಸಂಕಲನಕ್ಕೆ ವನರಾಗ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ದಾಂಡೇಲಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯ್ಕ ಮಾತನಾಡಿ, ಕೆಲವರ ಅರ್ಹತೆ ಆಧರಿಸಿ ಪ್ರಶಸ್ತಿಗಳು ತಾವಾಗಿಯೇ ಅರಸಿ ಬರುತ್ತವೆ. ಇದಕ್ಕೆ ಇಂದು ಪ್ರಶಸ್ತಿ ಪುರಸ್ಕೃತರೇ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು. ಪ್ರಶಸ್ತಿ ಪ್ರಾಯೋಜಕರಾದ ವನರಾಗ ಶರ್ಮಾ ಕುಟುಂಬದವರು ಸಾಹಿತ್ಯದೊಂದಿಗೆ ಶುದ್ಧ ಜೀವನ ದೃಷ್ಟಿಯನ್ನು ಕಾದುಕೊಂಡು ಬದ್ಧತೆಯಿಂದ ಕಾಯ್ದುಕೊಂಡು ಬಂದವರು ಎಂದರು.

ಪ್ರಮುಖ ಸುದ್ದಿ :-   ಪತಿ ಸಾವಿನ ಸುದ್ದಿ ತಿಳಿದ ನಂತರವೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಪತ್ನಿ

ಶ್ರೀರಂಗ ಕಟ್ಟಿ, ಅರವಿಂದ ಶರ್ಮಾ, ಶಂಕರ ಭಟ್, ಗಣಪತಿ ಕಂಚಿಪಾಲ ಉಪಸ್ಥಿತರಿದ್ದರು. ಪ್ರಶಸ್ತಿ ಪ್ರಾಯೋಜಕರಾದ ವನರಾಗ ಶರ್ಮಾ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಮದ್ಗುಣಿ ಸ್ವಾಗತಿಸಿದರು. ಸಿ.ಎಸ್.ಚಂದ್ರಶೇಖರ ನಿರ್ವಹಿಸಿದರು. ಶ್ರೀರಾಮ ಲಾಲಗುಳಿ ವಂದಿಸಿದರು. ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಉಪಸ್ಥಿತರಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement