ಕುಮಟಾ : ಬಾಳಿಗಾ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಸಂಭವನೀಯ ಅಪಾಯದಿಂದ ಪಾರಾಗುವ ಬಗ್ಗೆ ಪ್ರಾತ್ಯಕ್ಷಿಕೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ. ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಂಭವನೀಯ ಅಪಾಯದಿಂದ ಪಾರಾಗುವ ಕುರಿತು ಸೋಮವಾರ ಮಾಹಿತಿ ನೀಡಲಾಯಿತು.
ಅಗ್ನಿಶಾಮಕ ದಳದ ಎಸ್. ಪಿ. ರಾಘವೇಂದ್ರ ಪಟಗಾರ ಮಾಹಿತಿ ನೀಡಿ, ಎಲ್ ಪಿ ಜಿ ಗ್ಯಾಸ್, ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ರಾಸಾಯನಿಕ ಅನಿಲದಿಂದ ಆಗುವ ಅಪಾಯ, ಮನೆಗೆ ಬೀಳುವ ಬೆಂಕಿಯಿಂದ ಜನರನ್ನು ರಕ್ಷಿಸುವ ವಿಧಾನ ಹಾಗೂ ಸಂಭವನೀಯ ಅಪಾಯದಿಂದ ಪಾರಾಗುವ ವಿಧಾನವನ್ನು ವೇದಿಕೆಯಲ್ಲಿ ಪ್ರಾಯೋಗಿಕವಾಗಿ ಪ್ರದರ್ಶಿಸಿದರು.

ಕುಮಟಾ ಪಿ ಎಸ್ ಐ ನವೀನ ನಾಯ್ಕ ಅವರು, ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು, ಪೋಕ್ಸೋ ಕಾಯಿದೆ, ಸಾಮಾಜಿಕ ಜಾಲತಾಣದ ಅಪಾಯಗಳು, ಬ್ಯಾಂಕ್ ಖಾತೆಗಳ ಹ್ಯಾಕ್ ಆಗುವಿಕೆ, ಗಾಂಜಾ, ಅಫೀಂಉ, ಸಿಗರೇಟ್. ಕೊಕೇನ್‌ ಇತ್ಯಾದಿ ಮಾದಕ ಪದಾರ್ಥದಿಂದ ಉಂಟಾಗುವ ಅಪಾಯಗಳು, ಕಾನೂನು ಕ್ರಮ ಇತ್ಯಾದಿಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಇತ್ತೀಚಿಗೆ ಸಾಮಾಜಿಕ ಜಾಲತಾಣ ಎಷ್ಟು ಉಪಯುಕ್ತವಾಗಿದೆಯೋ ಅಷ್ಟೇ ಅಪಾಯಕರವಾಗಿದೆ. ವಾಟ್ಸಾಪ್‌, ಫೇಸ್ಬುಕ್, ಇನ್ಸ್ಟಾಗ್ರಾಂ ಉಪಯೋಗಿಸುವಾಗ ಹಾಗೂ ಸ್ಟೇಟಸ್ ಹಾಕಿಕೊಳ್ಳುವವರು ಹೇಗೆಲ್ಲ ಅಪಾಯಕ್ಕೆ ಸಿಲುಕುತ್ತಾರೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಗೋಪಾಲಕೃಷ್ಣ ಭಟ್ಟ ನಿಧನ

ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಇರುವವರೊಂದಿಗೆ ಮಾತ್ರ ಸಂಪರ್ಕ ಹೊಂದಿರಬೇಕು. ಜಾಲತಾಣದಲ್ಲಿ ವೈಯಕ್ತಿಕ ಮಾಹಿತಿ ಬೇರೆಯವರಿಗೆ ಸಿಗದ ರೀತಿ ಲಾಕ್ ಮಾಡಿರಬೇಕು. ಅಪರಾಧಕ್ಕೆ ಸಿಲುಕಿಸುವವರು ಅಶ್ಲೀಲ ಚಿತ್ರ, ವೀಡಿಯೊ ಕಳುಹಿಸುತ್ತಾರೆ, ಆನ್‌ಲೈನ್‌ ಕರೆ ಮಾಡುತ್ತಾರೆ, ಅದಕ್ಕೆ ಸ್ಪಂದಿಸಿದರೆ ಅಪಾಯಕ್ಕೆ ಒಳಗಾಗುವುದು ನಿಶ್ಚಿತ ಎಂದು ಈ ಬಗ್ಗೆ ಅನೇಕ ಪೊಲೀಸ್ ದೂರು ದಾಖಲಾಗಿರುವುದನ್ನು ಉದಾಹರಣೆ ಸಹಿತ ತಿಳಿಸಿದರು. ವಿದ್ಯಾರ್ಥಿಗಳು ಜಾಲತಾಣ ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ವಿವರಿಸಿದರು.

ಕಿಡ್ನೆಸ್ ಫ್ರೀ ಎನ್ ಜಿ ಒ ಸಂಸ್ಥೆಯ ವಿದೂಷಿ ಪಾಂಡಯೆ ಮಾತನಾಡಿ ವಿದ್ಯಾರ್ಥಿಗಳು ಹೇಗೆ ದ್ರಢ ಮನಸ್ಥಿತಿ ಹೊಂದಿರಬೇಕು. ಮಾನಸಿಕ ವಿಚಲನೆಗೆ ಒಳಗಾಗಬಾರದು, ಯೋಗ ಚಟುವಟಿಕೆ ನಡೆಸಬೇಕು ಎಂದರು. ಆರೋಗ್ಯ ಸಮಸ್ಯೆ ಉಂಟಾದರೆ ಏನು ಮಾಡಬೇಕು..? ವೈದ್ಯರ ಸಂಪರ್ಕ ಹೇಗೆ ಮಾಡಬೇಕು…? ಇತ್ಯಾದಿ ಸಂಗತಿಗಳ ಬಗ್ಗೆ ಜೀವನದ ಮಾನಸಿಕ ದುರ್ಬಲತೆಯ ಅಪಾಯದ ವಿದ್ಯಾರ್ಥಿಗಳು ಎದುರಿಸುವ ಬಗೆಯನ್ನು ತಿಳಿಸಿದರು. ವಿದ್ಯಾರ್ಥಿಗಳು ಯಾಔುದೇ ಸಮಯದಲ್ಲಿಯೂ ತಮ್ಮ ಸಂಸ್ಥೆ ಸಂಪರ್ಕಿಸಿ ಪ್ರಯೋಜನ ಪಡೆಯಬಹುದು ಎಂದರು.
ಕಲಾ ವಿಜ್ಞಾನ ವಿದ್ಯಾಲಯದ ಪ್ರಾಚಾರ್ಯ ವೀಣಾ ಕಾಮತ್ ಅವರು ಕಾರ್ಯಕ್ರಮದ ಪ್ರಯೋಜನ ಪಡೆಯಲು ತಿಳಿಸಿದರು. ವಾಣಿಜ್ಯ ಪ್ರಾಚಾರ್ಯರು ಪ್ರೊ. ಎನ್. ಜಿ. ಹೆಗಡೆ ಸ್ವಾಗತಿಸಿದರು. ಎನ್‌ಜಿಒದ ಶಿಲ್ಪಾ ಡಿಸೋಜ ವಂದಿಸಿದರು.ವಿದ್ಯಾರ್ಥಿಗಳಾದ ಶ್ರೀಶಾ ಆಚಾರ್ಯ ಮತ್ತು ದೀಪಿಕಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

ಪ್ರಮುಖ ಸುದ್ದಿ :-   ಗೋಪಾಲಕೃಷ್ಣ ಭಟ್ಟ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement