ಸಂಸತ್‌ ಭದ್ರತೆ ಉಲ್ಲಂಘನೆ ಪ್ರಕರಣ: ಘಟನೆ ಹಿಂದೆ 18 ತಿಂಗಳ ಯೋಜನೆ, ʼಭಗತ್ ಸಿಂಗ್ ಫ್ಯಾನ್ ಕ್ಲಬ್ʼ ಎಂಬ ಸಾಮಾನ್ಯ ಸಂಪರ್ಕ

ನವದೆಹಲಿ: ಬುಧವಾರ ಸಂಸತ್ತಿನಲ್ಲಿ ನಡೆದ ಭದ್ರತೆ ಉಲ್ಲಂಘಿಸಿ ಒಳನುಗ್ಗಿದ ಘಟನೆಯಲ್ಲಿ ಭಾಗಿಯಾಗಿದ್ದವರು ಕನಿಷ್ಠ 18 ತಿಂಗಳುಗಳಿಂದ ನಿಖರವಾದ ಯೋಜನೆ ರೂಪಿಸಿದ್ದರು ಮತ್ತು ಆರೋಪಿಗಳ ನಡುವೆ ಹಲವಾರು ಸಭೆಗಳು ನಡೆದಿದ್ದವು ಎಂದು ವರದಿಯೊಂದು ತಿಳಿಸಿದೆ.
ಸಂಸತ್ತಿನಲ್ಲಿ ಬುಧವಾರ ಭದ್ರತಾ ಲೋಪದ ಘಟನೆಯಲ್ಲಿ ಭಾಗಿಯಾದವರು ವಿವಿಧ ರಾಜ್ಯಗಳಿಂದ ಬಂದವರು ಆದರೆ ಅವರೆಲ್ಲ ‘ಭಗತ್ ಸಿಂಗ್’ ಎಂಬ ಸಾಮಾಜಿಕ ಮಾಧ್ಯಮ ಪುಟ ಅಭಿಮಾನಿಗಳ ಸಂಘ'(Bhagat Singh Fan Club’) ಎಂಬ ಒಂದೇ ಲಿಂಕ್‌ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2001 ರಲ್ಲಿ ಸಂಸತ್ತಿನ ದಾಳಿಯ ಕರಾಳ ವರ್ಷಾಚರಣೆ ದಿನದಂದು ತೆರೆದುಕೊಂಡ ಆಘಾತಕಾರಿ ದೃಶ್ಯಗಳು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶೂನ್ಯ ವೇಳೆಯಲ್ಲಿ ಸಾಗರ ಶರ್ಮಾ ಮತ್ತು ಮನೋರಂಜನ್ ಡಿ ಎಂಬವರು ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿಯುವುದನ್ನು ತೋರಿಸಿದೆ. ಇಬ್ಬರೂ ಹಳದಿ ಹೊಗೆಯನ್ನು ಹೊಂದಿರುವ ಡಬ್ಬಿಗಳನ್ನು ಎಸೆದರು ಮತ್ತು ಶರ್ಮಾ ಎಂಬಾತ ಸಂಸದರು ಸೆರೆ ಹಿಡಿದು ಥಳಿಸುವ ಮೊದಲು ಸ್ಪೀಕರ್ ಕುರ್ಚಿಯ ಕಡೆಗೆ ಡೆಸ್ಕ್‌ಗಳ ಮೇಲೆ ಜಿಗಿಯುತ್ತ ಸಾಗಿದರು.
ಇದೇ ವೇಳೆ ಸಂಸತ್ತಿನ ಹೊರಗೆ ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಹಳದಿ ಮತ್ತು ಕೆಂಪು ಹೊಗೆಯ ಡಬ್ಬಿಗಳನ್ನು ಬಳಸಿ ‘ತಾನಾ ಶಾಹಿ (ಸರ್ವಾಧಿಕಾರಿತನ) ವಿರುದ್ಧ ಘೋಷಣೆಗಳನ್ನು ಕೂಗಿದರು. ಶರ್ಮಾ ಲಕ್ನೋ ನಿವಾಸಿಯಾಗಿದ್ದರೆ, ಮನೋರಂಜನ್ ಮೈಸೂರಿನವರು, ನೀಲಂ ಹರಿಯಾಣದವರು ಮತ್ತು ಶಿಂಧೆ ಮಹಾರಾಷ್ಟ್ರದವರು.

ಇತರ ಇಬ್ಬರು ಆರೋಪಿಗಳೆಂದರೆ ಲಲಿತ್ ಝಾ ಎಂಬಾತ ಸಂಸತ್ತಿನ ಹೊರಗೆ ಡಬ್ಬಿಗಳನ್ನು ಬಳಸಿ ಹಳದಿ-ಕೆಂಪು ಹೊಗೆಯ ಹಾರಿಸಿದ ನೀಲಂ ಮತ್ತು ಶಿಂಧೆ ವೀಡಿಯೊಗಳನ್ನು ಚಿತ್ರೀಕರಿಸಿದ್ದಾನೆ ಮತ್ತು ನಂತರ ತಮ್ಮ ಸೆಲ್‌ಫೋನ್‌ಗಳೊಂದಿಗೆ ಪರಾರಿಯಾಗಿದ್ದಾನೆ ಮತ್ತು ದಾಳಿಯ ಮೊದಲು ಆರೋಪಿಗಳು ವಿಕ್ಕಿ ಶರ್ಮಾ ಎಂಬಾತನ ಮನೆಯಲ್ಲಿಯೇ ಇದ್ದರು. ಲಲಿತ್ ಝಾ ಬಿಹಾರದವನಾಗಿದ್ದರೆ, ವಿಕ್ಕಿ ಶರ್ಮಾ ಗುರುಗ್ರಾಮ ಮೂಲದವನಾಗಿದ್ದಾನೆ.
ದೆಹಲಿ ಪೊಲೀಸರ ತನಿಖೆಯ ಪ್ರಕಾರ, ಆರೋಪಿಗಳ ಮೊದಲ ಸಭೆ ಸುಮಾರು 18 ತಿಂಗಳ ಹಿಂದೆ ಮೈಸೂರಿನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಅವರು ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರದ ಹಿಂಸಾಚಾರ ಸೇರಿದಂತೆ ಸಂಸತ್ತು ಚರ್ಚಿಸಬೇಕು ಎಂದು ಅವರು ನಂಬಿರುವ ವಿಷಯಗಳನ್ನು ಹೈಲೈಟ್ ಮಾಡುವ ವಿವಿಧ ವಿಧಾನಗಳ ಕುರಿತು ಮಾತನಾಡಿದರು.
ಒಂಬತ್ತು ತಿಂಗಳ ಹಿಂದೆ, ಈ ವರ್ಷದ ಮಾರ್ಚ್‌ನಲ್ಲಿ ಮತ್ತೊಂದು ಸಭೆ ನಡೆಸಲಾಯಿತು ಮತ್ತು ವಿವರವಾದ ಯೋಜನೆ ರೂಪುಗೊಂಡಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಚಂಡೀಗಢ ವಿಮಾನ ನಿಲ್ದಾಣದ ಬಳಿ ಈ ಸಭೆ ನಡೆದಿದ್ದು, ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದರ ಸುಮಾರು ನಾಲ್ಕು ತಿಂಗಳ ನಂತರ, ಜುಲೈನಲ್ಲಿ, ಸಂಸತ್ತಿನ ಸಂಕೀರ್ಣದ ವಿಚಕ್ಷಣವನ್ನು ನಡೆಸಲು ಶರ್ಮಾ ಲಕ್ನೋದಿಂದ ನವದೆಹಲಿಗೆ ತೆರಳಿದ್ದ.
ಸೆಪ್ಟೆಂಬರ್‌ನಲ್ಲಿ ನೂತನ ಸಂಸತ್ತಿನ ಕಟ್ಟಡದಲ್ಲಿ ಮೊದಲ ಅಧಿವೇಶನ ನಡೆಯುವುದಕ್ಕೂ ಮುನ್ನ ಶರ್ಮಾನಿಗೆ ಅದರೊಳಗೆ ಪ್ರವೇಶಕ್ಕೆ ಅನುಮತಿ ಸಿಗಲಿಲ್ಲ. ಆತ ಹೊರಗಿನಿಂದ ಕಟ್ಟಡದ ಬಗ್ಗೆ ಪರವೀಕ್ಷಣೆ ನಡೆಸಿದ್ದಾನೆ ಹಾಗೂ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಗಮನಿಸಿದ್ದಾನೆ ಮತ್ತು ನಂತರ ಗುಂಪಿನ ಉಳಿದವರಿಗೆ ವರದಿ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಎಫ್‌ಐಆರ್ ದಾಖಲು

  ಬಣ್ಣದ ಹೊಗೆಯ ಡಬ್ಬಿ ವಿತರಣೆ
ಸಂಸತ್ತಿನ ದಾಳಿಯ ಕರಾಳ ಘಟನೆಯ ವಾರ್ಷಿಕ ದಿನ ಭದ್ರತೆ ಭೇದಿಸಿ ಒಳನುಗ್ಗಲು ನಿರ್ಧರಿಸಿದ ನಂತರ, ಶರ್ಮಾ, ಮನೋರಂಜನ್, ನೀಲಂ ಮತ್ತು ಶಿಂಧೆ ಡಿಸೆಂಬರ್ 10ರ ಭಾನುವಾರ ದೆಹಲಿಯನ್ನು ತಲುಪಿದರು ಮತ್ತು ಗುರುಗ್ರಾಮದಲ್ಲಿರುವ ವಿಕ್ಕಿ ಶರ್ಮಾ ಎಂಬಾತನ ಮನೆಗೆ ತೆರಳಿದರು, ಅಲ್ಲಿ ಅವರು ಬುಧವಾರದವರೆಗೆ ಇದ್ದರು.
ಬುಧವಾರ, ಆರೋಪಿಗಳು ಇಂಡಿಯಾ ಗೇಟ್‌ನಲ್ಲಿ ಜಮಾಯಿಸಿದರು ಮತ್ತು ಇಲ್ಲಿಯೇ ಶಿಂಧೆ ಉಳಿದ ಆರೋಪಿಗಳಿಗೆ ಬಣ್ಣದ ಹೊಗೆಯ ಡಬ್ಬಿಗಳನ್ನು ವಿತರಿಸಿದ್ದಾನೆ. ಆತ ಮಹಾರಾಷ್ಟ್ರದ ತಮ್ಮ ಊರಿನಿಂದ ಡಬ್ಬಿಗಳನ್ನು ಖರೀದಿಸಿ ದೆಹಲಿಗೆ ತಂದಿದ್ದ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರಂಭಿಕ ಯೋಜನೆಯು ಎಲ್ಲಾ ಆರು ಮಂದಿ ಸಂಸತ್ತಿನ ಒಳಗೆ ಹೋಗುವುದನ್ನು ಒಳಗೊಂಡಿತ್ತು, ಆದರೆ ಶರ್ಮಾ ಮತ್ತು ಮನೋರಂಜನ್‌ ಮಾತ್ರ ಪಾಸ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಸಾಗರ ಶರ್ಮಾ ಮತ್ತು ಮನೋರಂಜನ್ ಮಧ್ಯಾಹ್ನದ ಹೊತ್ತಿಗೆ ಸಂಸತ್ತಿನ ಸಂಕೀರ್ಣವನ್ನು ಪ್ರವೇಶಿಸಿದರು ಮತ್ತು ಸುಮಾರು ಒಂದು ಗಂಟೆಯ ನಂತರ ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರಿಗೆ ಹಾರಿ ಗದ್ದಲ ಎಬ್ಬಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ವಸಾಗರ ಶರ್ಮಾ, ಮನೋರಂಜನ, ನೀಲಂ ಮತ್ತು ಶಿಂಧೆ ಅವರನ್ನು ಬಂಧಿಸಲಾಗಿದೆ ಮತ್ತು ವಿಕ್ಕಿ ಶರ್ಮಾ ಮತ್ತು ಆತನ ಪತ್ನಿಯನ್ನೂ ಬಂಧಿಸಲಾಗಿದೆ. ನೀಲಂ ಮತ್ತು ಶಿಂಧೆ ಡಬ್ಬಿಗಳನ್ನು ನಿಯೋಜಿಸುವ ಕೆಲವು ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದ ಲಲಿತ್ ಝಾ ಸಹ ಈ ಘಟನೆಯಲ್ಲಿ ಭಾಗಿಯಾಗಿದ್ದು, ಈತ ಪ್ರತಿಯೊಬ್ಬರ ಸೆಲ್‌ಫೋನ್‌ಗಳೊಂದಿಗೆ ಪರಾರಿಯಾಗಿದ್ದಾನೆ ಮತ್ತು ಆತನನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಬಂಧಿತರಾಗಿರುವ ನಾಲ್ವರ ವಿರುದ್ಧ ಕಠಿಣ ಭಯೋತ್ಪಾದನಾ-ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿ, ಹಾಗೆಯೇ ಭಾರತೀಯ ದಂಡ ಸಂಹಿತೆಯ ಅಪರಾಧ ಸಂಚು ಮತ್ತು ದ್ವೇಷವನ್ನು ಉತ್ತೇಜಿಸುವ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಅವರೆಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ವಿವಾದ ; ಮಲಿವಾಲ್‌ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ, ಪ್ರಶ್ನೆಗೆ ಉತ್ತರಿಸದೆ ಮೈಕ್‌ ಮತ್ತೊಬ್ಬರಿಗೆ ಕೊಟ್ಟ ಕೇಜ್ರಿವಾಲ್

ತನಿಖೆ ವೇಳೆ ಅನೇಕ ಸಂಗತಿಗಳು ಬಹಿರಂಗ…
ಎಲ್ಲಾ ಆರೋಪಿಗಳು ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಎಂಬ ಸಾಮಾಜಿಕ ಮಾಧ್ಯಮ ಪುಟದೊಂದಿಗೆ ಸಂಬಂಧ ಹೊಂದಿದ್ದರು
ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾದರು ಮತ್ತು ನಂತರ ಪರಸ್ಪರ ಮಾತನಾಡಲು ಸಿಗ್ನಲ್ ಅಪ್ಲಿಕೇಶನ್ ಅನ್ನು ಬಳಸಲು ಪ್ರಾರಂಭಿಸಿದರು
ಒಂದೂವರೆ ವರ್ಷಗಳ ಹಿಂದೆ ಎಲ್ಲರೂ ಮೈಸೂರಿನಲ್ಲಿ ಭೇಟಿಯಾಗಿದ್ದರು
ಕೆಲ ತಿಂಗಳ ಹಿಂದೆ ಮತ್ತೆ ಸಭೆ ಸೇರಿ ಯೋಜನೆ ರೂಪಿಸಿದ್ದರು
ಜುಲೈನಲ್ಲಿ ಸಾಗರ ಲಕ್ನೋದಿಂದ ಬಂದಿದ್ದರೂ ಸಂಸತ್ ಭವನದ ಒಳಗೆ ಹೋಗಲು ಆತನಿಗೆ ಸಾಧ್ಯವಾಗಲಿಲ್ಲ
ಡಿಸೆಂಬರ್ 10 ರಂದು ಎಲ್ಲರೂ ತಮ್ಮ ತಮ್ಮ ರಾಜ್ಯಗಳಿಂದ ದೆಹಲಿ ತಲುಪಿದರು
ಡಿಸೆಂಬರ್ 10ರ ರಾತ್ರಿ ಗುರುಗ್ರಾಮದಲ್ಲಿರುವ ವಿಕ್ಕಿ ಮನೆಗೆ ಎಲ್ಲರೂ ತಲುಪಿದ್ದರು
ಲಲಿತ್ ಝಾ ಕೂಡ ತಡರಾತ್ರಿ ಗುರುಗ್ರಾಮ ತಲುಪಿದ್ದ.
ಅಮೋಲ್ ಮಹಾರಾಷ್ಟ್ರದಿಂದ ಬಣ್ಣದ ಡಬ್ಬಿಗಳನ್ನು ತಂದಿದ್ದ.
ಇಂಡಿಯಾ ಗೇಟ್‌ನಲ್ಲಿ ಎಲ್ಲರೂ ಭೇಟಿಯಾದರು, ಅಲ್ಲಿ ಎಲ್ಲರಿಗೂ ಬಣ್ಣದ ಹೊಗೆಯ ಡಬ್ಬಿಗಳನ್ನು ವಿತರಿಸಲಾಯಿತು
ಇಬ್ಬರೂ ಆರೋಪಿಗಳು ಮಧ್ಯಾಹ್ನ 12 ಗಂಟೆಗೆ ಸಂಸತ್ ಭವನ ಪ್ರವೇಶಿಸಿದರು
ಗಲಾಟೆ ವೇಳೆ ಲಲಿತ್ ಹೊರಗಿನಿಂದ ವೀಡಿಯೊ ಮಾಡುತ್ತಿದ್ದ
ಗೊಂದಲದ ಗೂಡಾದ ತಕ್ಷಣ ಲಲಿತ್ ಆರೋಪಿಗಳ ಮೊಬೈಲ್ ಸಮೇತ ಪರಾರಿಯಾಗಿದ್ದಾನೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement