ವೀಡಿಯೊ : ತಮಿಳುನಾಡಿನಲ್ಲಿ ಜನರಿಗೆ ಆಹಾರ-ಅಗತ್ಯ ವಸ್ತುಗಳನ್ನು ಹಾಕಿದ ಸೇನಾ ಹೆಲಿಕಾಪ್ಟರ್‌ಗಳು…

ನವದೆಹಲಿ: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಏರ್ ಡಿಸ್ಪ್ಲೇ ತಂಡ ಸಾರಂಗ್ ಈಗ ಪ್ರವಾಹ ಪೀಡಿತ ಟುಟಿಕೋರಿನ್, ತಿರುನಲ್ವೇಲಿ, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ‘ಐತಿಹಾಸಿಕ’ ಮಳೆಯಾಗಿದೆ.
ಐದು ಹೆಲಿಕಾಪ್ಟರ್‌ಗಳ ಮಿಲಿಟರಿ ಸಾಹಸ ಪ್ರದರ್ಶನದ ತಂಡವು ಜಲಾವೃತ ಪ್ರದೇಶಗಳಿಗೆ ಆಹಾರಗಳನ್ನು ಹಾಕುತ್ತಿದೆ. X ನಲ್ಲಿ ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ ತಂಡವು ಪೋಸ್ಟ್ ಮಾಡಿದ ವೀಡಿಯೊವು ಪ್ರವಾಹದಲ್ಲಿ ಮುಳುಗಿರುವ ಮನೆಗಳ ಟೆರೇಸ್‌ಗಳ ಮೇಲೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಬೀಳಿಸುವುದನ್ನು ತೋರಿಸಿದೆ. ದಕ್ಷಿಣ ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ಸ್ಥಳೀಯರು ಆಹಾರ ವಸ್ತುಗಳನ್ನು ಸ್ವೀಕರಿಸಲು ಛಾವಣಿಯ ಮೇಲೆ ನಿಂತಿದ್ದಾರೆ.

ತಮಿಳುನಾಡಿನ ನಾಲ್ಕು ಜಿಲ್ಲೆಗಳಾದ ತೆಂಕಶಿ, ಕನ್ಯಾಕುಮಾರಿ, ತಿರುನಲ್ವೇಲಿ ಮತ್ತು ಟುಟಿಕೋರಿನ್ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಜನಜೀವನವನ್ನು ಅಸ್ತವ್ಯಸ್ತಗೊಂಡಿದೆ.ತಿರುನೆಲ್ವೇಲಿ ಮತ್ತು ಟುಟಿಕೋರಿನ್ ಜಿಲ್ಲೆಗಳಲ್ಲಿ ಸುಮಾರು 40 ಲಕ್ಷ ಜನರು ದಾಖಲೆಯ ಮಳೆಯಿಂದ ಸಂತ್ರಸ್ತರಾಗಿದ್ದರೆ, ಶ್ರೀವೈಕುಂಟಂ ಮತ್ತು ತಿರುಚೆಂದೂರ್ ಬಳಿಯ ಹಳ್ಳಿಗಳು ಥಾಮಿರಬರಣಿ ನದಿಯ ಪ್ರವಾಹದಿಂದಾಗಿ ಹೆಚ್ಚಿನ ಹಾನಿಯನ್ನು ಅನುಭವಿಸಿವೆ.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

ಈ ಪ್ರದೇಶದಲ್ಲಿ ರೈಲು ಹಳಿಗಳು ಮುಳುಗಿದ ಕಾರಣ ದಕ್ಷಿಣ ರೈಲ್ವೆ ಈ ನಾಲ್ಕು ಜಿಲ್ಲೆಗಳ ಮೂಲಕ ಹಾದುಹೋಗುವ 19 ರೈಲುಗಳನ್ನು ರದ್ದುಗೊಳಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement