ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ

ನವದೆಹಲಿ: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರ ಬೆಳಗ್ಗೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಿದ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ಬೆಲೆ 39.50 ರೂ.ಗಳಷ್ಟು ಅಗ್ಗವಾಗಿದೆ.
ಈ ಕಡಿತವನ್ನು 19 ಕಿಲೋ ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ಮಾತ್ರ ಮಾಡಲಾಗಿದೆ. ಮನೆ ಬಳಕೆ ಗ್ಯಾಸ್‌ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಂಗಳೂರಿನಲ್ಲಿ ಇದೀಗ 19 ಕಿಲೋ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ 1,857 ರೂ. ಆಗಿದೆ. 14.2 ಕಿಲೋ ಮನೆ ಬಳಕೆ ಗ್ಯಾಸ್‌ ಸಿಲಿಂಡರ್‌ ಬೆಲೆ 905 ರೂ. ಇದೆ.
ಕಮರ್ಷಿಯಲ್ ಸಿಲಿಂಡರ್ ದೆಹಲಿಯಲ್ಲಿ 1757 ರೂ.ಗಳಾಗುತ್ತದೆ. ಈ ಮೊದಲು ಇದು 1796.50 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ ಅದೇ 19 ಕೆಜಿ ಸಿಲಿಂಡರ್ ಈಗ 1868.50 ರೂ. ಇದೆ. ಮುಂಬೈನಲ್ಲಿ ಸಿಲಿಂಡರ್ ಬೆಲೆ ಈಗ 1710 ರೂ.ಗಳಾದರೆ ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್ 1929 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement