ಈ ಖರ್ಗೆ-ಪರ್ಗೆ ಯಾರು..? ವಿಪಕ್ಷಗಳ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ‘ನಿತೀಶಕುಮಾರ’ : ಜೆಡಿಯು ಶಾಸಕ

ನವದೆಹಲಿ: ನವದೆಹಲಿಯಲ್ಲಿ ನಡೆದ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ (I.N.D.I.A) ಬ್ಲಾಕ್‌ನ ನಾಲ್ಕನೇ ಸಭೆಯ ನಂತರ, ಜೆಡಿಯು ಶಾಸಕರೊಬ್ಬರು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು, ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ಪ್ರಶ್ನಾರ್ಥಕ ಚಿಹ್ನೆಗೆ ಕಾರಣವಾಗಿದೆ.
ಜೆಡಿಯು ಶಾಸಕ ಗೋಪಾಲ ಮಂಡಲ್ ಮಾತನಾಡಿ, ಸಾಮಾನ್ಯ ಜನರಿಗೆ ಖರ್ಗೆ ಅವರ ಪರಿಚಯವಿಲ್ಲ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದಾರೆ.
“ಈ ‘ಖರ್ಗೆ ಪರ್ಗೆ’ ಯಾರು? ಸಾರ್ವಜನಿಕರಿಗೆ ಅವರು ತಿಳಿದಿಲ್ಲ, ಅವರು ಕಾಂಗ್ರೆಸ್ ಅಧ್ಯಕ್ಷರು ಎಂದು ನನಗೆ ತಿಳಿದಿರಲಿಲ್ಲ … ನನಗೆ ನಿಮ್ಮ (ಮಾಧ್ಯಮ) ಮೂಲಕ ತಿಳಿದಿದೆ … ಜನಸಾಮಾನ್ಯರಿಗೆ ತಿಳಿದಿಲ್ಲ. ನಿತೀಶಕುಮಾರ ಅವರು ಯಾರೆಂಬುದು ಸಾರ್ವಜನಿಕರಿಗೆ ತಿಳಿದಿದೆ. ನಿತೀಶಕುಮಾರ ಅವರು ಪ್ರಧಾನಿಯಾಗಬೇಕು. ಅವರು ಭಾರತದಾದ್ಯಂತ ಜನಪ್ರಿಯರಾಗಿದ್ದಾರೆ” ಎಂದು ಅವರು ತಿಳಿಸಿದರು.

ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ರಚನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದವರು ನಮ್ಮ ಜೆಡಿಯು ಪಕ್ಷದ ಅಧ್ಯಕ್ಷ ನಿತೀಶಕುಮಾರ ಎಂದು ಗೋಪಾಲಪುರ ವಿಧಾನಸಭೆಯ ಜೆಡಿಯು ಶಾಸಕ ಗೋಪಾಲ ಮಂಡಲ್‌ ಹೇಳಿದ್ದಾರೆ. “ಎಲ್ಲವನ್ನೂ ನಿತೀಶಕುಮಾರ ಮಾಡಿದ್ದಾರೆ. ಮೈತ್ರಿಗೆ ಐಎನ್‌ಡಿಐಎ ಎಂದು ಹೆಸರಿಸುವಾಗ ನಿತೀಶಕುಮಾರ ಸಂಚಾಲಕನ ಪಾತ್ರವನ್ನು ನಿರ್ವಹಿಸಿದರು. ಅವರು ಎಲ್ಲಾ ಪ್ರಾದೇಶಿಕ ನಾಯಕರನ್ನು ಒಟ್ಟುಗೂಡಿಸಿ ಅವರು ಮತ್ತೆ ಮತ್ತೆ ಸಭೆಗಳಿಗೆ ಬರುವಂತೆ ಮಾಡಿದರು. ಅವರು ನಿತೀಶಕುಮಾರ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಮಂಡಲ್ ಅವರು ಕಾಂಗ್ರೆಸ್ ಅನ್ನು ಗುರಿಯಾಗಿಟ್ಟುಕೊಂಡು ಸಾರ್ವಜನಿಕರಿಂದ ನಂಬಲಾಗದ ಪಕ್ಷ ಎಂದು ಹೇಳಿದರು. “ಕಾಂಗ್ರೆಸ್ ಪಕ್ಷ ನಂಬಲು ಯೋಗ್ಯವಲ್ಲ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಜನರು ಹಣದುಬ್ಬರ ಮತ್ತು ಬೆಲೆ ಏರಿಕೆಯ ಹೊಡೆತ ಎದುರಿಸಿದರು. ಅವರ ಕಳಪೆ ನೀತಿಗಳಿಂದ ಬಿಜೆಪಿ ಅಧಿಕಾರಕ್ಕೆ ಬಂದಿತು. ಈಗ, ಬಿಜೆಪಿ ಹಣದುಬ್ಬರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಹಾಗಾದರೆ ಹಳೆಯ ಮುಖವನ್ನು ಏಕೆ ಆರಿಸಬೇಕು? ಹೊಸ ಮುಖಗಳನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು.

ಡಿಸೆಂಬರ್ 19 ರಂದು ನಡೆದ ಬಣದ ನಾಲ್ಕನೇ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದ ನಂತರ ಜೆಡಿಯು ಶಾಸಕರ ಹೇಳಿಕೆ ಹೊರಬಿದ್ದಿದೆ. ಆದರೆ, ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗುವ ಸಲಹೆಗಳನ್ನು ನಿರಾಕರಿಸಿದರು. “ಮೊದಲು ನಾವೆಲ್ಲರೂ ಗೆಲ್ಲಬೇಕು, ಗೆಲುವಿಗೆ ಏನು ಮಾಡಬೇಕು ಎಂದು ಯೋಚಿಸಬೇಕು, ಯಾರು ಪ್ರಧಾನಿಯಾಗುತ್ತಾರೆ ಎಂಬುದು ನಂತರ ನಿರ್ಧಾರವಾಗುತ್ತದೆ, ಕಡಿಮೆ ಸಂಸದರಿದ್ದರೆ, ಪ್ರಧಾನಿ ಬಗ್ಗೆ ಮಾತನಾಡುವುದು ಯಾತಕ್ಕೆ? ಒಗ್ಗೂಡುವ ಮೂಲಕ ನಮ್ಮ ಸಂಖ್ಯೆಯನ್ನು ಹೆಚ್ಚಿಸಿ ಬಹುಮತವನ್ನು ತರಲು ಪ್ರಯತ್ನಿಸುತ್ತೇವೆ. ಮೊದಲು ನಾವು ಗೆಲ್ಲಬೇಕು ಎಂದು ಖರ್ಗೆ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement