ಕರ್ನಾಟಕದಲ್ಲಿ 34 ಜೆಎನ್.1 ಕೋವಿಡ್ ವೈರಸ್ ರೂಪಾಂತರ ಪ್ರಕರಣಗಳು ದೃಢ

ಬೆಂಗಳೂರು: ರಾಜ್ಯದಲ್ಲಿ 34 ಜನರಿಗೆ ಕೋವಿಡ್‌-19 ಜೆಎನ್‌ 1 ರೂಪಾಂತರಿ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ರೂಪಾಂತರಿ ಹರಡುವ ಸೂಚನೆ ನೀಡಿದೆ.
ರಾಜ್ಯದಲ್ಲಿ 3 ಮಂದಿ ಸಾವಿಗೀಡಾಗಿದ್ದಾರೆ.
ಸೋಮವಾರ 3,155 ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಹೊಸದಾಗಿ 125 ಜನರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಈಗ ಒಟ್ಟು 436 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 323 ಜನರು ಗೃಹ ಆರೈಕೆಯಲ್ಲಿದ್ದು, 21 ಮಂದಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಏಳು ಮಂದಿ ಐಸಿಯುನಲ್ಲಿ ಹಾಗೂ 14 ಜನರು ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ.
ರಾಜ್ಯದಲ್ಲಿ 192 ಸೋಂಕಿತರ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 60 ಮಾದರಿಗಳ ಫಲಿತಾಂಶ ಲಭ್ಯವಾಗಿದ್ದು, 34 ಮಂದಿಯಲ್ಲಿ ಹೊಸ ವೈರಾಣು ಜೆಎನ್‌ 1 ಪತ್ತೆಯಾಗಿದೆ. ಈ ಪೈಕಿ ಈಗಾಗಲೇ ಮೂರು ಮಂದಿ ಸಾವಿಗೀಡಾಗಿದ್ದಾರೆ. 31 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು – 20, ಮೈಸೂರು – 4, ಮಂಡ್ಯ – 3, ರಾಮನಗರ – 1, ಬೆಂಗಳೂರು ಗ್ರಾಮಾಂತರ – 1, ಕೊಡಗು – 1, ಚಾಮರಾಜನಗರ – 1 ಜೆಎನ್‌ 1 ರೂಪಾಂತರಿ ಸೋಂಕು ಪತ್ತೆಯಾಗಿದೆ.
ಹೊಸವರ್ಷದ ಆಚರಣೆ, ಕ್ರಿಸ್‌ಮಸ್‌ ವೇಳೆ ಪ್ರವಾಸಿಗರು ಬರುವುದರಿಂದ ಈ ಸಂದರ್ಭದಲ್ಲಿ60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಒಳಾಂಗಣ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕೋವಿಡ್‌ ಗುಣಲಕ್ಷಣಗಳನ್ನು ಪರಿಶೀಲಿಸಿ ಒಳಗೆ ಬಿಡಬೇಕು. ಹೊರಾಂಗಣ ಕಾರ್ಯಕ್ರಮದಲ್ಲಿ60 ವರ್ಷ ದಾಟಿದವರು ಮಾಸ್ಕ್‌ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement