ಚೆನ್ನೈ: ತಮಿಳುನಾಡಿನಲ್ಲಿ 24 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಜನ್ಮದಿನದ ಮುನ್ನಾದಿನದಂದು ಆಕೆಯನ್ನು ಮದುವೆಯಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ಆಕೆಯ ಮಾಜಿ ಸಹಪಾಠಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಆಕೆಯನ್ನು ಸರಪಳಿಯಿಂದ ಬಂಧಿಸಿ, ಬ್ಲೇಡ್‌ನಿಂದ ಕೊಚ್ಚಿ ಮತ್ತು ಜೀವಂತವಾಗಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈನ ದಕ್ಷಿಣ ಉಪನಗರವಾದ ಕೆಲಂಬಾಕ್ಕಂ ಬಳಿಯ ತಲಂಬೂರ್‌ನಲ್ಲಿ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ವರದಿಗಳ ಪ್ರಕಾರ, 26 ವರ್ಷದ ವೆಟ್ರಿಮಾರನ್ ಅಲಿಯಾಸ್ ಪಾಂಡಿ ಮಹೇಶ್ವರಿ, ಜನ್ಮದಿನದ ಸರ್ಪ್ರೈಸ್ ನೆಪದಲ್ಲಿ, 24 ವರ್ಷದ ಆರ್. ನಂದಿನಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ್ದಾನೆ ಮತ್ತು ಪೆಟ್ರೋಲ್ ಸುರಿದು ಬೆಂಕಿ ಹಂಚಿದ್ದಾನೆ.
ಮಧುರೈ ಮೂಲದ ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನಂದಿನಿ ಚೆನ್ನೈನಲ್ಲಿ ಸಂಬಂಧಿಕರೊಂದಿಗೆ ನೆಲೆಸಿದ್ದರು. ವೆಟ್ರಿಮಾರನ್ ತನ್ನ ಹೆಸರನ್ನು ಬದಲಾಯಿಸಿಕೊಂಡಿರುವ ಪಾಂಡಿ ಮಹೇಶ್ವರಿ ಜನ್ಮದಿನದ ಆಚರಣೆಯ ನೆಪದಲ್ಲಿ ನಂದಿನಿಯನ್ನು ತನ್ನ ಮಾರಣಾಂತಿಕ ಬಲೆಗೆ ಬೀಳಿಸಿದ್ದಾನೆ.
“ಅವರಿಬ್ಬರು ಚೆನ್ನೈನಲ್ಲಿ ಸ್ನೇಹಿತರಾಗಿದ್ದರು ಮತ್ತು ಒಟ್ಟಿಗೆ ವಾಸಿಸುತ್ತಿದ್ದರು. ಯಾವುದೇ ಲೈಂಗಿಕ ದೌರ್ಜನ್ಯದ ಸುಳಿವು ಇನ್ನೂ ಕಂಡುಬಂದಿಲ್ಲ. ವೆಟ್ರಿಮಾರನ್ ಈ ಹಿಂದೆ ಹಿಂಸಾತ್ಮಕ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ತನಿಖೆ ನಡೆಯುತ್ತಿದೆ” ಎಂದು ತಾಂಬರಂ ಪೊಲೀಸ್ ಕಮಿಷನರ್ ಅಮಲ್ರಾಜ್ ತಿಳಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಮಧುರೈನಲ್ಲಿ ಒಟ್ಟಿಗೆ ಓದಿದ ನಂದಿನಿ, ವೆಟ್ರಿಮಾರನ್ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರವೂ ಸ್ನೇಹವನ್ನು ಮುಂದುವರೆಸಿದರು. ಇವರಿಬ್ಬರೂ ತೊರೈಪಾಕ್ಕಂನಲ್ಲಿರುವ ಖಾಸಗಿ ಐಟಿ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಭೀಕರ ಕೃತ್ಯದ ಹಿಂದಿನ ಉದ್ದೇಶವು ನಂದಿನಿ ಇತರರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದೆ ಎಂಬ ವೆಟ್ರಿಮಾರನ್ ಅನುಮಾನ ಈ ಕೃತ್ಯಕ್ಕೆ ಕಾರಣವಾಗಿದೆ.
. ಪೊಲೀಸರ ಪ್ರಕಾರ, ಸ್ಥಳೀಯ ನಿವಾಸಿಗಳು ನಂದಿನಿಯನ್ನು ಇನ್ನೂ ಸರಪಳಿಯಲ್ಲಿ ಬಂಧಿಸುರುವುದನ್ನು ಮತ್ತು ಸುಡುತ್ತಿರುವುದನ್ನು ಕಂಡು, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ, ಆದರೆ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಇದೀಗ ಕೊಲೆ ಆರೋಪ ಎದುರಿಸುತ್ತಿರುವ ವೆಟ್ರಿಮಾರನ್‌ನನ್ನು ಪೊಲೀಸರು ಕ್ಷಿಪ್ರವಾಗಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ