ದೆಹಲಿಯಲ್ಲಿ ದಟ್ಟವಾದ ಮಂಜು, ಶೂನ್ಯ ಸಮೀಪ ಗೋಚರತೆ : 110 ವಿಮಾನಗಳು, 25 ರೈಲುಗಳ ಸಂಚಾರದ ಮೇಲೆ ಪರಿಣಾಮ

ನವದೆಹಲಿ: ಬುಧವಾರ ಬೆಳಗ್ಗೆ ಉತ್ತರ ಭಾರತದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಗೋಚರತೆ ಕೇವಲ 50 ಮೀಟರಿಗೆ ಕುಸಿದಿದೆ. ಇದು ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ 110 ಕ್ಕೂ ಹೆಚ್ಚು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿವೆ. ದೆಹಲಿಗೆ ತೆರಳುವ 25 ರೈಲುಗಳು ವಿಳಂಬವಾಗಿವೆ ಎಂದು ಉತ್ತರ ರೈಲ್ವೆ ತಿಳಿಸಿದೆ.
ಶೀತ ಅಲೆಯ ಪರಿಸ್ಥಿತಿಗಳು ಮುಂದುವರಿದಿರುವ ಕಾರಣ ರಾಷ್ಟ್ರ ರಾಜಧಾನಿಯಲ್ಲಿ “ಅತ್ಯಂತ ದಟ್ಟವಾದ ಮಂಜು” ಆವರಿಸುವ ಬಗ್ಗೆ ಹವಾಮಾನ ಕಚೇರಿ ರೆಡ್ ಅಲರ್ಟ್ ನೀಡಿದೆ.
ರಸ್ತೆಗಳಲ್ಲಿ ಮಂಜು ಆವರಿಸಿದ್ದರಿಂದ, ಉತ್ತರ ಪ್ರದೇಶದಾದ್ಯಂತ ರಸ್ತೆಗಳಲ್ಲಿ ಹಲವಾರು ಅಪಘಾತಗಳು ವರದಿಯಾಗಿವೆ. ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಬಹು ವಾಹನಗಳು ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಬರೇಲಿಯಲ್ಲಿ, ಬರೇಲಿ-ಸುಲ್ತಾನ್‌ಪುರ ಹೆದ್ದಾರಿಯ ಬಳಿ ವೇಗವಾಗಿ ಬಂದ ಟ್ರಕ್ ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ.

ಭಾರತೀಯ ಹವಾಮಾನ ಇಲಾಖೆ (IMD)ಯು ಪಂಜಾಬ್, ಹರಿಯಾಣ, ದೆಹಲಿ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮೇಲೆ “ದಟ್ಟವಾದ ಮಂಜಿನ ಪರಿಸ್ಥಿತಿಗಳು” ಉದ್ಭವಿಸಬಹುದು ಎಂದು ಭವಿಷ್ಯ ನುಡಿದಿದೆ. ದೆಹಲಿಯ ಹೊರತಾಗಿ, ಉತ್ತರ ಭಾರತದ ಹಲವಾರು ನಗರಗಳಲ್ಲಿ ಮಂಜಿನ ವಾತಾವರಣದಿಂದ ಗೋಚರತೆಯನ್ನು ಕಡಿಮೆಯಾಗಿವೆ. ಪಟಿಯಾಲ, ಲಕ್ನೋ ಮತ್ತು ಪ್ರಯಾಗರಾಜದಲ್ಲಿ 25 ಮೀಟರ್‌ನಷ್ಟು ಕಡಿಮೆ ಗೋಚರತೆ ದಾಖಲಾಗಿದ್ದರೆ, ಅಮೃತಸರದಲ್ಲಿ ಅದು 0 ಮೀಟರ್‌ಗೆ ಇಳಿದಿದೆ.
ದೆಹಲಿಯಲ್ಲಿ, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಪಾಲಂ ವೀಕ್ಷಣಾಲಯವು 125 ಮೀಟರ್ ಗೋಚರತೆಯ ಮಟ್ಟವನ್ನು ದಾಖಲಿಸಿದರೆ, ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಅದು ಕೇವಲ 50 ಮೀಟರ್‌ಗೆ ಇಳಿದಿದೆ. ದೆಹಲಿಯ ಹಲವಾರು ಭಾಗಗಳಲ್ಲಿ ಪ್ರಯಾಣಿಕರು ಇನ್ನೂ ಕಡಿಮೆ ಗೋಚರತೆಯನ್ನು ವರದಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ಗಾಳಿಯ ಗುಣಮಟ್ಟವು ತೀವ್ರ ಕುಸಿತವನ್ನು ದಾಖಲಿಸಿದೆ. ಸರಾಸರಿ ಗಾಳಿಯ ಗುಣಮಟ್ಟವು 381 ಕ್ಕೆ ಇಳಿದಿದೆ, ವಾಯು ಗುಣಮಟ್ಟ ಸೂಚ್ಯಂಕದಲ್ಲಿ “ಅತ್ಯಂತ ಕಳಪೆ”ಯಾಗಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಏರ್ ಬುಲೆಟಿನ್ ಪ್ರಕಾರ, ಆನಂದ್ ವಿಹಾರ್ 441 AQI ಅನ್ನು ದಾಖಲಿಸಿದರೆ, ಮಧ್ಯ ದೆಹಲಿಯ ಲೋಧಿ ರಸ್ತೆಯಲ್ಲಿ 327 AQI ದಾಖಲಾಗಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಗಾಳಿಯ ಗುಣಮಟ್ಟವು 368 ರಷ್ಟಿತ್ತು. ನೆರೆಯ ಗಾಜಿಯಾಬಾದ್ ಮತ್ತು ನೋಯ್ಡಾ AQI ಪ್ರಮಾಣ ಕ್ರಮವಾಗಿ 336 ಮತ್ತು 363 ಅನ್ನು ದಾಖಲಿಸಿದೆ.ಮುನ್ಸೂಚನೆಯ ಪ್ರಕಾರ, ಮುಂದಿನ ವಾರದಲ್ಲಿ ಗಾಳಿಯ ಗುಣಮಟ್ಟ ಇನ್ನೂ ಕಡಿಮೆಯಾಗಲಿದೆ
ಹವಾಮಾನ ಕಚೇರಿಯ ಪ್ರಕಾರ, ಗೋಚರತೆಯು 0 ಮತ್ತು 50 ಮೀಟರ್‌ಗಳ ನಡುವೆ, 51 ಮತ್ತು 200 ಮೀಟರ್‌ಗಳ ನಡುವೆ ದಟ್ಟವಾಗಿರುತ್ತದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಷೇರು ಮಾರುಕಟ್ಟೆಯಲ್ಲಿ ಭಾರತದ ರಕ್ಷಣಾ ಕಂಪನಿಗಳಿಗೆ ಹೆಚ್ಚಿದ ಬೇಡಿಕೆ, ಚೀನಾ-ಟರ್ಕಿ ಕಂಪನಿಗಳ ಬೇಡಿಕೆ ಕುಸಿತ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement