ಅಕ್ರಮ ಹಣ ವರ್ಗಾವಣೆ ಪ್ರಕರಣ: ಇ.ಡಿ. ಆರೋಪಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರು ಉಲ್ಲೇಖ

ನವದೆಹಲಿ: ಎನ್‌ಆರ್‌ಐ ಉದ್ಯಮಿ ಸಿ.ಸಿ. ಥಂಪಿ ಮತ್ತು ಬ್ರಿಟಿಷ್ ಪ್ರಜೆ ಸುಮಿತ್ ಚಡ್ಡಾ ವಿರುದ್ಧ ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮೊದಲ ಬಾರಿಗೆ ಹೆಸರಿಸಲಾಗಿದೆ. ರಾಬರ್ಟ್ ವಾದ್ರಾ ಮತ್ತು ಥಂಪಿ ಅವರಲ್ಲದೆ, ಪ್ರಿಯಾಂಕಾ ಗಾಂಧಿ ಕೂಡ ಫರಿದಾಬಾದ್‌ನಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿಲ್ಲ.

ಅಧಿಕಾರಿಗಳ ಪ್ರಕಾರ, ರಾಬರ್ಟ್ ವಾದ್ರಾ, 2006ರಲ್ಲಿ ಫರಿದಾಬಾದ್‌ನ ಅಮಿಪುರ್ ಗ್ರಾಮದಲ್ಲಿ ಆಸ್ತಿ ಡೀಲರ್ ಎಚ್‌ಎಲ್ ಪಹ್ವಾ ಮೂಲಕ ಸುಮಾರು 40.8 ಎಕರೆ ಭೂಮಿಯನ್ನು ಖರೀದಿಸಿದ್ದರು, ಅದನ್ನು ಡಿಸೆಂಬರ್ 2010 ರಲ್ಲಿ ಪಹ್ವಾಗೆ ಮಾರಾಟ ಮಾಡಲಾಗಿದೆ. ಅದೇ ರೀತಿ, ಏಪ್ರಿಲ್ 2006 ರಲ್ಲಿ ಅದೇ ಅಮಿಪುರ್ ಗ್ರಾಮದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರಿನಲ್ಲಿ ಮನೆಯೊಂದನ್ನು ಖರೀದಿಸಲಾಯಿತು, ಅದನ್ನು ಫೆಬ್ರವರಿ 2010 ರಲ್ಲಿ ಪಹ್ವಾಗೆ ಮಾರಾಟ ಮಾಡಲಾಯಿತು.
ಮೂಲಗಳ ಪ್ರಕಾರ ಪಹ್ವಾ ಅವರು ಥಂಪಿಗೆ ತುಂಬಾ ಹತ್ತಿರವಾಗಿದ್ದಾರೆ. ಪಹ್ವಾ ಅವರು ಅದೇ ಅಮಿಪುರ ಗ್ರಾಮದಲ್ಲಿ ಥಂಪಿ ಜಮೀನನ್ನು ಖರೀದಿಸಿದ್ದರು. ಥಂಪಿ ಮತ್ತು ವಾದ್ರಾ ನಡುವಿನ ಹಣಕಾಸು ಸಂಬಂಧದ ತನಿಖೆ ವೇಳೆ ಪ್ರಿಯಾಂಕಾ ಗಾಂಧಿ ಹೆಸರು ಬೆಳಕಿಗೆ ಬಂದಿದೆ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

ಇ.ಡಿ. ತನಿಖೆಯಿಂದ ಬಹಿರಂಗಗೊಂಡದ್ದೇನು?
ಅನಿವಾಸಿ ಭಾರತೀಯ ಉದ್ಯಮಿ ಸಿ.ಸಿ.ಥಂಪಿ ಎಂಬುವರಿಗೂ ಜಮೀನು ಮಾರಾಟ ಮಾಡಿದ ವ್ಯಕ್ತಿಯೇ ಏಜೆಂಟ್. ದೊಡ್ಡ ಪ್ರಕರಣವು ಪರಾರಿಯಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ ಭಂಡಾರಿಯನ್ನು ಒಳಗೊಂಡಿದೆ, ಅವರು ಅಕ್ರಮ ಹಣ ವರ್ಗಾವಣೆ, ವಿದೇಶಿ ವಿನಿಮಯ ಮತ್ತು ಕಪ್ಪು ಹಣದ ಕಾನೂನುಗಳ ಉಲ್ಲಂಘನೆ ಮತ್ತು ಅಧಿಕೃತ ರಹಸ್ಯಗಳ ಕಾಯಿದೆ ಉಲ್ಲಂಘಟನೆಗಾಗಿ ಅನೇಕ ತನಿಖಾ ಸಂಸ್ಥೆಗಳಿಂದ ತನಿಖೆಯಲ್ಲಿದ್ದಾರೆ. ಅವರು 2016 ರಲ್ಲಿ ಭಾರತದಿಂದ ಬ್ರಿಟನ್‌ಗೆ ಪಲಾಯನ ಮಾಡಿದ್ದಾರೆ. ಬ್ರಿಟಿಷ್ ಪ್ರಜೆ ಸುಮಿತ್ ಚಡ್ಡಾ ಜೊತೆಗೆ ಅಪರಾಧದ ಆದಾಯವನ್ನು ಮರೆಮಾಡಲು ಭಂಡಾರಿ ಅವರಿಗೆ ಅನುಕೂಲ ಮಾಡಿಕೊಟ್ಟ ಆರೋಪವನ್ನು ಥಂಪಿ ಮೇಲೆ ಹೊರಿಸಲಾಗಿದೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement