ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್-ಎಲ್‌ಇಟಿ ಸಂಸ್ಥಾಪಕ ಸದಸ್ಯ ಹಫೀಜ್ ಅಬ್ದುಲ್ ಸಲಾಂ ಭುಟ್ಟವಿ ಸಾವು ದೃಢ : ವಿಶ್ವಸಂಸ್ಥೆ

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಎ-ತಯ್ಯಿಬಾ (ಎಲ್‌ಇಟಿ) ಸಂಸ್ಥಾಪಕ ಸದಸ್ಯ ಹಫೀಜ್ ಅಬ್ದುಲ್ ಸಲಾಂ ಭುಟ್ಟವಿ ‘ಮೃತಪಟ್ಟಿರುವುದು’ ದೃಢಪಟ್ಟಿದೆ. ಭುಟ್ಟವಿ ಎಲ್‌ಇಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಮತ್ತು ಹಫೀಜ್ ಸಯೀದ್‌ಗೆ ಹತ್ತಿರವಾಗಿದ್ದ.
ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸೈಟ್‌ನಲ್ಲಿ ನವೀಕರಿಸಿದ ಮಾಹಿತಿಯ ಪ್ರಕಾರ, ಭುಟ್ಟವಿ 29 ಮೇ 2023 ರಂದು ಪಂಜಾಬ್ ಪ್ರಾಂತ್ಯದ ಮುರಿಡ್ಕೆಯಲ್ಲಿ ಪಾಕಿಸ್ತಾನ ಸರ್ಕಾರದ ವಶದಲ್ಲಿದ್ದಾಗ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ. ಗಮನಾರ್ಹವಾಗಿ, ಭುಟ್ಟವಿಯನ್ನು ವಿಶ್ವ ಸಂಸ್ಥೆ ಭದ್ರತಾ ಮಂಡಳಿ(UNSC)ಯ ವಾಂಟೆಡ್ ಪಟ್ಟಿಯಲ್ಲಿ 2012 ರಲ್ಲಿ ಮೊದಲ ಬಾರಿಗೆ ಪಟ್ಟಿ ಮಾಡಲಾಯಿತು.

ಹಫೀಜ್ ಅಬ್ದುಲ್ ಸಲಾಂ ಭುಟ್ಟವಿ ಯಾರು?
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪ್ರಕಾರ, ಸಯೀದ್‌ನನ್ನು ಬಂಧಿಸಿದಾಗ ಕನಿಷ್ಠ ಎರಡು ಸಂದರ್ಭಗಳಲ್ಲಿ ಭುಟ್ಟವಿ ಎಲ್‌ಇಟಿ ಅಥವಾ ಜಮಾತ್-ಉದ್-ದವಾ (ಜೆಯುಡಿ) ಯ ಕಾರ್ಯನಿರ್ವಾಹಕ ಎಮಿರ್ ಆಗಿದ್ದ. ನವೆಂಬರ್ 2008 ರ ಮುಂಬೈ ದಾಳಿಯ ನಂತರ ಸಯೀದ್ ನನ್ನು ಬಂಧಿಸಲಾಯಿತು ಮತ್ತು ಜೂನ್ 2009 ರವರೆಗೆ ಬಂನಧದಲ್ಲಿದ್ದ. ಮೇ 2002ರಲ್ಲಿಯೂ ಸಯೀದ್‌ನನ್ನು ಬಂಧಿಸಲಾಗಿತ್ತು.
ಭುಟ್ಟವಿ ಎಲ್‌ಇಟಿ ಅಥವಾ ಜಮಾತ್-ಉದ್-ದವಾ (LeT/JuD)ಯ ಪ್ರಮುಖ ಸಲಹಾಕಾರನೂ ಆಗಿದ್ದ, ಅದರ ನಾಯಕರು ಮತ್ತು ಸದಸ್ಯರಿಗೆ ಸೂಚನೆ ನೀಡುತ್ತಿದ್ದ ಮತ್ತು ಎಲ್‌ಇಟಿ ಅಥವಾ ಜಮಾತ್-ಉದ್-ದವಾ (LeT/JuD) ಕಾರ್ಯಾಚರಣೆಗಳಿಗೆ ಅಧಿಕಾರ ನೀಡುವ ಫತ್ವಾಗಳನ್ನು ಹೊರಡಿಸಿದ್ದ. 2008ರ ನವೆಂಬರ್‌ನಲ್ಲಿ ಭಾರತದ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಕಾರ್ಯಾಚರಣೆಯನ್ನು ಸಿದ್ಧಪಡಿಸಲು ಸಹಾಯ ಮಾಡಿದ. ಮುಂಬೈ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಮತ್ತು ಅನೇಕರು ಗಾಯಗೊಂಡರು. ಭುಟ್ಟವಿ ಎಲ್‌ಇಟಿ ಅಥವಾ ಜಮಾತ್-ಉದ್-ದವಾದ ಮದರಸಾ (ಧಾರ್ಮಿಕ ಶಾಲೆ) ನೆಟ್‌ವರ್ಕ್‌ ಜವಾಬ್ದಾರಿ ಹೊತ್ತಿದ್ದ. 2002 ರ ಮಧ್ಯದಲ್ಲಿ, ಭುಟ್ಟವಿ ಪಾಕಿಸ್ತಾನದ ಲಾಹೋರ್‌ನಲ್ಲಿ ಎಲ್‌ಇಟಿ ಸಾಂಸ್ಥಿಕ ನೆಲೆಯನ್ನು ಸ್ಥಾಪಿಸುವ ಉಸ್ತುವಾರಿ ವಹಿಸಿದ್ದ.

ಪ್ರಮುಖ ಸುದ್ದಿ :-   ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

ಭುಟ್ಟವಿ ಹೇಗೆ ಸತ್ತ…?
ಆತನ ಸಾವಿನ ಸುದ್ದಿ ಪ್ರಕಟವಾಗುತ್ತಿರುವುದು ಇದೇ ಮೊದಲಲ್ಲ ಎಂಬುದು ಉಲ್ಲೇಖಾರ್ಹ. ಕಳೆದ ವರ್ಷದ ಮೇ ತಿಂಗಳಲ್ಲಿ, ಸುದ್ದಿ ಸಂಸ್ಥೆ ಪಿಟಿಐ ಭಯೋತ್ಪಾದಕನ ಸಾವಿನ ಬಗ್ಗೆ ವರದಿ ಮಾಡಿತ್ತು ಮತ್ತು ವಿಶ್ವಸಂಸ್ಥೆ ಸೈಟ್‌ನಲ್ಲಿ ಈಗ ಉಲ್ಲೇಖಿಸಿರುವ ಅದೇ ಕಾರಣವನ್ನು ಹೇಳಿತ್ತು. “77 ವರ್ಷದ ಭುಟ್ಟವಿ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಅಕ್ಟೋಬರ್ 2019 ರಿಂದ ಲಾಹೋರ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಜಿಲ್ಲಾ ಜೈಲು ಶೇಖುಪುರದಲ್ಲಿ ಬಂಧನದಲ್ಲಿದ್ದ. ಮೇ 29 ರಂದು, ತೀವ್ರವಾದ ಎದೆ ನೋವನ್ನು ಅನುಭವಿಸಿದ ಮತ್ತು ಆತನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆಸ್ಪತ್ರೆಗೆ ಬರುವಾಗಲೆ ಹೃದಯ ಸ್ತಂಭನದಿಂದಾಗಿ ಮೃತಪಟ್ಟ ಎಂದು ಘೋಷಿಸಲಾಯಿತು, ಎಂದು ಪಿಟಿಐ ವರದಿ ಮಾಡಿತ್ತು.

ಮುರಿಡ್ಕೆಯಲ್ಲಿರುವ ಎಲ್‌ಇಟಿ ಅಥವಾ ಜಮಾತ್-ಉದ್-ದವಾ (ಜೆಯುಡಿ) ಪ್ರಧಾನ ಕಚೇರಿಯಲ್ಲಿ ಅಂತ್ಯಕ್ರಿಯೆ ನಡೆಯಿತು, ಇದರಲ್ಲಿ ಹೆಚ್ಚಿನ ಸಂಖ್ಯೆಯ ನಿಷೇಧಿತ ಸಂಘಟನೆಯ ಬೆಂಬಲಿಗರು ಹೆಚ್ಚಿನ ಭದ್ರತೆಯ ನಡುವೆ ಭಾಗವಹಿಸಿದ್ದರು. 2019ರಿಂದ ಬಹು ಶಿಕ್ಷೆಯನ್ನು ಅನುಭವಿಸುತ್ತಿರುವ ಕೋಟ್ ಲಖ್ಪತ್ ಜೈಲಿನಲ್ಲಿರುವ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್, ಭುಟ್ಟವಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತನಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಅನುಮತಿ ನೀಡಲಾಗಿಲ್ಲ ಎಂದು ವರದಿಯಾಗಿತ್ತು.

ಪ್ರಮುಖ ಸುದ್ದಿ :-   S-400 ಬಿಡಿ ; ವಾಯು ರಕ್ಷಣೆ ಹೆಚ್ಚಿಸಲು ಭಾರತ ಶೀಘ್ರವೇ ರಷ್ಯಾದ ಘಾತಕ S-500 ಖರೀದಿಸಬಹುದು ; ಎರಡರ ಮಧ್ಯದ ಪ್ರಮುಖ ವ್ಯತ್ಯಾಸ ಇಲ್ಲಿದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement