ಪದವಿಪೂರ್ವ ಹಂತದ ಕೋರ್ಸ್‌ಗಳಿಗೆ 12 ಭಾರತೀಯ ಭಾಷೆಗಳಲ್ಲಿ ಪುಸ್ತಕ ಬರೆಯಲು ಲೇಖಕರನ್ನು ಆಹ್ವಾನಿಸಿದ ಯುಜಿಸಿ

ನವದೆಹಲಿ : ವಿಶ್ವವಿದ್ಯಾನಿಲಯ ಅನುದಾನ ಆಯೋಗ(UGC)ವು ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಸಮಾಜ ವಿಜ್ಞಾನಗಳ ಪದವಿಪೂರ್ವ ಹಂತದ ಕೋರ್ಸ್‌ಗಳಿಗೆ 12 ಭಾರತೀಯ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಬರೆಯಲು ಲೇಖಕರು, ವಿಮರ್ಶಕರು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಆಸಕ್ತ ಅಧ್ಯಾಪಕರನ್ನು ಆಹ್ವಾನಿಸಿದೆ.
ಆಯೋಗವು ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪುಸ್ತಕಗಳನ್ನು ಬರೆಯಲು ಅರ್ಜಿಗಳನ್ನು ಆಹ್ವಾನಿಸಿದೆ.
ಪದವಿಪೂರ್ವ ಹಂತದ ಕಲಿಕೆಯಲ್ಲಿ 12 ಭಾರತೀಯ ಭಾಷೆಗಳಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಪಠ್ಯಪುಸ್ತಕಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಶುಕ್ರವಾರ ತಿಳಿಸಿದೆ.

ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಈ ಪುಸ್ತಕಗಳು ಲಭ್ಯವಿದ್ದು, ದೇಶಾದ್ಯಂತ ಇರುವ ವಿಶ್ವವಿದ್ಯಾಲಯಗಳಲ್ಲಿ ಅಳವಡಿಸಲಾಗುವುದು ಎಂದು ಯುಜಿಸಿ ಹೇಳಿದೆ. ಆದಾಗ್ಯೂ ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆ ಎಂದು ಯುಜಿಸಿ ಹೇಳಿದೆ.
“ನಾವು ವಿವಿಧ ರಾಜ್ಯಗಳಲ್ಲಿ ನೋಡಲ್ ವಿಶ್ವವಿದ್ಯಾನಿಲಯಗಳನ್ನು ಗುರುತಿಸುತ್ತಿದ್ದೇವೆ, ಅವರು ಭಾರತೀಯ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳನ್ನು ಬರೆಯುವ ಲೇಖಕರ ತಂಡಗಳನ್ನು ರಚಿಸುವ ಪ್ರಕ್ರಿಯೆಯನ್ನು ಸಂಯೋಜಿಸುತ್ತಾರೆ” ಎಂದು ಯುಜಿಸಿ ಅಧ್ಯಕ್ಷ ಪ್ರೊ.ಮಾಮಿದಾಳ ಜಗದೇಶಕುಮಾರ ಹೇಳಿದ್ದಾರೆ. ಭಾರತೀಯ ಭಾಷೆಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ಒದಗಿಸುವ ಎನ್‌ಇಪಿ (NEP)2020 ರ ಉದ್ದೇಶದೊಂದಿಗೆ ಈ ಪ್ರಯತ್ನವು ಸರಿಹೊಂದುತ್ತದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಜನಾಂಗೀಯ ಕಾಮೆಂಟ್‌ ವಿವಾದದ ಬೆನ್ನಲ್ಲೇ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್‌ ಪಿತ್ರೋಡಾ

ಆಸಕ್ತ ಲೇಖಕರನ್ನು ಗುರುತಿಸಿ ಯುಜಿಸಿಯಲ್ಲಿ ನೋಂದಾಯಿಸಲು ಯುಜಿಸಿ ಪತ್ರ ಬರೆದಿದ್ದು, ಅವರು ಈ ಪ್ರಯತ್ನದಲ್ಲಿ ಭಾಗವಹಿಸಬಹುದು ಎಂದು ಹೇಳಿದರು. ಪದವಿಪೂರ್ವ (UG) ಮಟ್ಟದ ಕೋರ್ಸ್‌ಗಳಿಗೆ 12 ಭಾರತೀಯ ಭಾಷೆಗಳಲ್ಲಿ ಕಲೆ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ವಿವಿಧ ವಿಷಯಗಳ ಮೂಲ ಪಠ್ಯಪುಸ್ತಕಗಳನ್ನು ಬರೆಯಲು ಆಸಕ್ತ ಲೇಖಕರು, ವಿಮರ್ಶಕರು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ (HEls) ಅಧ್ಯಾಪಕರಿಂದ ಆಸಕ್ತಿಯ ಅಭಿವ್ಯಕ್ತಿ (Eol) ಅನ್ನು ಪತ್ರವು ಆಹ್ವಾನಿಸುತ್ತದೆ. ಆಸಕ್ತ ಲೇಖಕರು, ವಿಮರ್ಶಕರು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ (HEls) ನ ಅಧ್ಯಾಪಕರು ಆಯೋಗಕ್ಕೆ ತಮ್ಮ ಸ್ವೀಕೃತಿಯನ್ನು ಕಳುಹಿಸಬೇಕು ಮತ್ತು ಜನವರಿ 30 (ಮಧ್ಯರಾತ್ರಿ) ರೊಳಗೆ ತಮ್ಮ ಆಸಕ್ತಿಯ ಅಭಿವ್ಯಕ್ತಿ (EOI) ಅನ್ನು ಒದಗಿಸಬೇಕು ಎಂದು ಅವರು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement