ಅಯೋಧ್ಯಾ ರಾಮ ಮಂದಿರ ಉದ್ಘಾಟನೆ: 55 ದೇಶಗಳಿಂದ 100ಕ್ಕೂ ಹೆಚ್ಚು ಗಣ್ಯರ ಆಗಮನ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇದೇ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ 55 ದೇಶಗಳಿಂದ 100ಕ್ಕೂ ಹೆಚ್ಚು ಗಣ್ಯರು ಆಗಮಿಸಲಿದ್ದಾರೆ ಎಂದು ವಿಶ್ವ ಹಿಂದೂ ಫೌಂಡೇಶನ್‌ ಸಂಸ್ಥಾಪಕ ಮತ್ತು ಮುಖ್ಯಸ್ಥ ಸ್ವಾಮಿ ವಿಜ್ಞಾನಂದ ಹೇಳಿದ್ದಾರೆ.
55 ದೇಶಗಳಿಂದ ರಾಯಭಾರಿಗಳು, ಸಚಿವರು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲಿದ್ದಾರೆ. ಪ್ರಭು ಶ್ರೀ ರಾಮನ ವಂಶಸ್ಥೆ ಎಂದು ಹೇಳಿಕೊಳ್ಳುವ ಕೊರಿಯನ್‌ ರಾಣಿಗೂ ಆಹ್ವಾನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅರ್ಜೆಂಟೀನಾ, ಆಸ್ಟ್ರೇಲಿಯಾ. ಬೆಲರೂಸ್‌, ಬೊಟ್ಸ್‌ವಾನಾ, ಕೆನಡಾ, ಕೊಲಂಬಿಯಾ, ಡೆನ್ಮಾರ್ಕ್‌, ಡೊಮಿನಿಕಾ, ಡೆಮೊಕ್ರೆಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊ (ಡಿಆರ್‌ಸಿ), ಈಜಿಪ್ಟ್‌, ಇಥಿಯೋಪಿಯಾ, ಫಿಜಿ, ಇಟಲಿ, ಫಿನ್‌ಲ್ಯಾಂಡ್‌, ಫ್ರಾನ್ಸ್‌, ಜರ್ಮನಿ, ಘಾನಾ, ಗಯಾನಾ. ಹಾಂಗ್‌ಕಾಂಗ್‌, ಹಂಗೇರಿ, ಇಂಡೋನೇಷಿಯಾ, ಐರ್ಲೆಂಡ್‌, ಜಪಾನ್‌ ಸೇರಿದಂತೆ 55 ದೇಶಗಳಿಗೆ ಆಹ್ವಾನ ನೀಡಲಾಗಿದೆ.

ಎಲ್ಲಾ ವಿದೇಶಿ ಪ್ರತಿನಿಧಿಗಳು ಜನವರಿ 20ರಂದು ಲಕ್ನೋ ತಲುಪಲಿದ್ದು, ಜನವರಿ 21ರ ಸಂಜೆ ಅಯೋಧ್ಯೆಗೆ ಆಗಮಿಸಲಿದ್ದಾರೆ. ಹವಾಮಾನ ವೈಪರೀತ್ಯಗಳ ಕಾರಣದಿಂದ ವಿದೇಶಿ ಗಣ್ಯರು ಮುಂಚಿತವಾಗಿಯೇ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ವಿದೇಶಿ ಅತಿಥಿಗಳನ್ನು ಆಹ್ವಾನಿಸುವ ಆರಂಭಿಕ ಯೋಜನೆಗಳ ಹೊರತಾಗಿಯೂ ಲಭ್ಯವಿರುವ ಸೀಮಿತ ಸ್ಥಳದಿಂದಾಗಿ ಅತಿಥಿಗಳ ಪಟ್ಟಿಯನ್ನು ಕಡಿತಗೊಳಿಸುವ ಅಗತ್ಯವಿದೆ ಎಂದು ಸ್ವಾಮಿ ವಿಜ್ಞಾನಂದ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement