ಕೋಚಿಂಗ್ ಸೆಂಟರ್‌ಗಳು 16 ವರ್ಷದೊಳಗಿನ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವಂತಿಲ್ಲ : ಕೇಂದ್ರ ಸರ್ಕಾರದಿಂದ ನೂತನ ಮಾರ್ಗಸೂಚಿ

ನವದೆಹಲಿ : ಕೋಚಿಂಗ್ ಸೆಂಟರ್‌ಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ದಾಖಲಿಸುವಂತಿಲ್ಲ ಮತ್ತು ಮಾಧ್ಯಮಿಕ ಶಾಲಾ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರವೇ ಪ್ರವೇಶ ಪ್ರಕ್ರಿಯೆಯನ್ನು ಅನುಮತಿಸಲಾಗುವುದು ಎಂದು ಶಿಕ್ಷಣ ಸಚಿವಾಲಯವು ಪ್ರಕಟಿಸಿದ ಹೊಸ ಮಾರ್ಗಸೂಚಿಗಳು ಹೇಳಿವೆ.
ಕೋಚಿಂಗ್ ಸಂಸ್ಥೆಗಳಿಗೆ ದಾರಿತಪ್ಪಿಸುವ ಭರವಸೆಗಳನ್ನು ನೀಡುವಂತಿಲ್ಲ ಮತ್ತು ರ್ಯಾಂಕ್‌ ಅಥವಾ ಉತ್ತಮ ಅಂಕಗಳ ಗ್ಯಾರಂಟಿ ನೀಡುವಂತಿಲ್ಲ ಎಂಬ ಷರತ್ತುಗಳು ಹೊಸ ಮಾರ್ಗಸೂಚಿಯನ್ನು ಕೇಂದ್ರ ಶಿಕ್ಷಣ ಮಂತ್ರಾಲಯ ಗುರುವಾರ ಬಿಡುಗಡೆ ಮಾಡಿದೆ.
ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಚಿವಾಲಯವು, ಖಾಸಗಿ ಕೋಚಿಂಗ್ ಕೇಂದ್ರಗಳ ಅನಿಯಂತ್ರಿತ ಬೆಳವಣಿಗೆಗೆ ಕಡಿವಾಣ ಹಾಕಲು ಹಾಗೂ ಇವುಗಳ ನಿಯಂತ್ರಂತ್ರಿಸಲು ಕಾನೂನು ಚೌಕಟ್ಟಿನೊಳಗೆ ತರುವ ಉದ್ದೇಶದಿಂದ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಕೋಚಿಂಗ್ ಸೆಂಟರ್‌ಗಳಿಗೆ ಸರ್ಕಾರ ಹೊಸ ಮಾರ್ಗಸೂಚಿಗಳು…
“ಯಾವುದೇ ಕೋಚಿಂಗ್ ಸೆಂಟರ್ ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ತೊಡಗಿಕೊಳ್ಳಬಾರದು. ಶಿಕ್ಷಣ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಲು ಸಂಸ್ಥೆಗಳು ಪೋಷಕರಿಗೆ ತಪ್ಪು ಭರವಸೆ ಅಥವಾ ಉತ್ತಮ ಶ್ರೇಣಿ ಅಥವಾ ಉತ್ತಮ ಅಂಕಗಳ ಗ್ಯಾರಂಟಿ ನೀಡುವಂತಿಲ್ಲ.
ಸಂಸ್ಥೆಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ದಾಖಲಿಸುವಂತಿಲ್ಲ. ಮಾಧ್ಯಮಿಕ ಶಾಲಾ ಪರೀಕ್ಷೆಯ ನಂತರ ಮಾತ್ರ ವಿದ್ಯಾರ್ಥಿಗಳ ದಾಖಲಾತಿ ಇರಬೇಕು.
ಯಾವುದೇ ಕೋಚಿಂಗ್ ಕೇಂದ್ರಗಳು ತಮ್ಮ ಫಲಿತಾಂಶ ಅಥವಾ ತಮ್ಮ ಕೇಂದ್ರದ ವಿದ್ಯಾರ್ಥಿಯ ಫಲಿತಾಂಶ ಆಧರಿಸಿ ಸಂಸ್ಥೆಯ ಶಿಕ್ಷಣ ಗುಣಮಟ್ಟ ಕುರಿತು ಯಾವುದೇ ಜಾಹೀರಾತು ನೀಡುವಂತಿಲ್ಲ.
ಕಲಿಕೆಯಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕದಂತೆಯೂ ಕೋಚಿಂಗ್‌ ಕೇಂದ್ರಗಳು ನೋಡಿಕೊಳ್ಳಬೇಕು. ಅಲ್ಲದೆ ಮನೋವೈದ್ಯರು ಮತ್ತು ನುರಿತ ಸಮಾಲೋಚಕರ ಹೆಸರು ಮತ್ತು ಅವರು ಲಭ್ಯವಿರುವ ಸಮಯದ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೀಡಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಮಾರ್ಗದರ್ಶನ ಸಿಗುವಂತೆ ನೋಡಿಕೊಳ್ಳಬೇಕು.
ಸರ್ಕಾರದ ಮಾರ್ಗಸೂಚಿ ಒಳಗೊಂಡ ಕೌನ್ಸಲಿಂಗ್‌ ನಡೆಸದ ಸಂಸ್ಥೆಗಳ ನೋಂದಣಿಯಾಗುವುದಿಲ್ಲ

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

ಪ್ರತಿ ಕೋಚಿಂಗ್‌ ಕೇಂದ್ರಗಳು ತಮ್ಮದೇ ಆದ ವೆಬ್‌ಸೈಟ್‌ ಹೊಂದಿರಬೇಕು. ಅದರಲ್ಲಿ ತನ್ನ ಎಲ್ಲ ಬೋಧಕರ ಅರ್ಹತೆ, ಲಭ್ಯವಿರುವ ಕೋರ್ಸ್‌ಗಳು, ಅದರ ಅವಧಿ, ಪಠ್ಯಕ್ರಮ, ಹಾಸ್ಟೆಲ್‌ ಸೌಲಭ್ಯ, ಪರಿಷ್ಕರಿಸಿದ ಶುಲ್ಕ ವಿವರಗಳನ್ನು ಪ್ರಕಟಿಸಬೇಕು.
ವಿವಿಧ ಕೋರ್ಸ್‌ಗಳಿಗೆ ವಿಧಿಸುವ ಬೋಧನಾ ಶುಲ್ಕ ನ್ಯಾಯೋಚಿತ ಮತ್ತು ಸಮಂಜಸವಾಗಿರಬೇಕು. ಈ ಶುಲ್ಕಕ್ಕೆ ರಸೀದಿಗಳನ್ನು ನೀಡಬೇಕು.
ಯಾವುದೇ ಕೋರ್ಸ್‌ಗೆ ಪೂರ್ಣ ಶುಲ್ಕ ಪಾವತಿಸಿದ ವಿದ್ಯಾರ್ಥಿಯೂ ಕೋರ್ಸ್‌ ಅನ್ನು ಅರ್ಧಕ್ಕೆ ಮೊಟಕುಗೊಳಿಸಿದರೆ, ಉಳಿದ ಮೊತ್ತವನ್ನು ಲೆಕ್ಕ ಹಾಕಿ, 10 ದಿನಗಳಲ್ಲಿ ಮರುಪಾವತಿಸಬೇಕು. ಅಂತೆಯೇ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರೆ ಹಾಸ್ಟೆಲ್‌ ಶುಲ್ಕ, ಮೆಸ್ ಶುಲ್ಕ ಇತ್ಯಾದಿಗಳನ್ನೂ ಮರು ಪಾವತಿಸಬೇಕು.
ಅತಿಯಾದ ಶುಲ್ಕ ವಿಧಿಸುವ, ವಿದ್ಯಾರ್ಥಿಗಳ ಆತ್ಮಹತ್ಯೆ ಅಥವಾ ಇತರ ದುಷ್ಕೃತ್ಯಗಳಿಗೆ ಕಾರಣವಾಗುವ ಕೋಚಿಂಗ್‌ ಕೇಂದ್ರಗಳಿಗೆ ₹ 1 ಲಕ್ಷ ದಂಡ ವಿಧಿಸಲು ಅಥವಾ ಕೇಂದ್ರದ ನೋಂದಣಿಯನ್ನು ರದ್ದುಗೊಳಿಸಲು ಮಾರ್ಗಸೂಚಿಯಲ್ಲಿ ಅವಕಾಶ.

ಕೋಚಿಂಗ್‌ ಕೇಂದ್ರಗಳ ಚಟುವಟಿಕೆಗಳ ಮೇಲೆ ನಿಗಾ, ಮೇಲ್ವಿಚಾರಣೆ, ನೋಂದಣಿಯ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳದ್ದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕೋಚಿಂಗ್ ಸೆಂಟರ್‌ನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಕೋಚಿಂಗ್ ಸೆಂಟರ್‌ನ ನೋಂದಣಿ ಮತ್ತು ತೃಪ್ತಿದಾಯಕ ಚಟುವಟಿಕೆಗಳ ಅಗತ್ಯವಿರುವ ಅರ್ಹತೆಗಳನ್ನು ಪೂರೈಸುವ ಕುರಿತು ಯಾವುದೇ ಕೋಚಿಂಗ್ ಸೆಂಟರ್‌ನ ಬಗ್ಗೆ ವಿಚಾರಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಹೊಂದಿರುತ್ತದೆ.
“+2 ಹಂತದ ಶಿಕ್ಷಣದ ನಿಯಂತ್ರಣವು ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಪರಿಗಣಿಸಿ, ಈ ಸಂಸ್ಥೆಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಉತ್ತಮವಾಗಿ ನಿಯಂತ್ರಿಸುತ್ತವೆ” ಎಂದು ಡಾಕ್ಯುಮೆಂಟ್ ಹೇಳಿದೆ.

ಪ್ರಮುಖ ಸುದ್ದಿ :-   ಸೋಮವಾರಪೇಟೆ : ವಿದ್ಯಾರ್ಥಿನಿ ತಲೆ ಕಡಿದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement