ರಾಮ ಮಂದಿರ ಪ್ರಾಣ ಪ್ರತಿಷ್ಠೆ : 11 ದಿನಗಳ ಕಠಿಣ ನಿಯಮ ಪಾಲಿಸುತ್ತಿರುವ ಪ್ರಧಾನಿ ಮೋದಿ, ಬರೀ ನೆಲದ ಮೇಲೆ ಮಲಗುತ್ತಾರೆ, ಎಳೆ ನೀರು ಮಾತ್ರ ಸೇವಿಸ್ತಾರೆ….

ನವದೆಹಲಿ: ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ನಿಯಮಗಳು ಮತ್ತು ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ಪ್ರಧಾನಿ ಮೋದಿ ವ್ರತಾಚರಣೆಗಳಿಗಾಗಿ “ಯಮ-ನಿಯಮಗಳನ್ನು” ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಜನವರಿ 12 ರಂದು ಮೋದಿ ವ್ರತಾಚರಣೆ ಆರಂಭಿಸಿದ್ದು, ಪ್ರಾಣ ಪ್ರತಿಷ್ಠೆಯ “ಐತಿಹಾಸಿಕ” ಮತ್ತು “ಶುಭ” ಸಂದರ್ಭಕ್ಕೆ ಸಾಕ್ಷಿಯಾಗಲು ನಾನು ಅದೃಷ್ಟಶಾಲಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು 11 ದಿನಗಳ ಕಾಲ ‘ಯಮ ನಿಯಮ’ಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಧರ್ಮಗ್ರಂಥಗಳಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಯಮ ನಿಯಮ’ವು ತನ್ನ ಸಾಧಕರಿಗೆ ಯೋಗ, ಧ್ಯಾನ ಮತ್ತು ವಿವಿಧ ಅಂಶಗಳಲ್ಲಿ ಶಿಸ್ತು ಸೇರಿದಂತೆ ಹಲವಾರು ಕಠಿಣ ನಿಯಮಗಳನ್ನು ವಿವರಿಸುತ್ತದೆ. ಪ್ರಧಾನಿ ಮೋದಿ ಅವರು ತಮ್ಮ ದೈನಂದಿನ ಜೀವನದಲ್ಲಿ ಸೂರ್ಯೋದಯಕ್ಕೂ ಮುನ್ನ ಶುಭ ಸಮಯದಲ್ಲಿ ಏಳುವುದು, ಧ್ಯಾನ ಮತ್ತು ಸಾತ್ವಿಕ ಆಹಾರವನ್ನು ಸೇವಿಸುವುದು ಸೇರಿದಂತೆ ಹಲವು ನಿಯಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವರ ವಿಗ್ರಹದಲ್ಲಿ ದೈವಿಕ ಪ್ರಜ್ಞೆಯ ಅಭಿವ್ಯಕ್ತಿ ಎಂದು ಪವಿತ್ರೀಕರಣವನ್ನು ವಿವರಿಸಲಾಗಿದೆ. ಪವಿತ್ರ ಗ್ರಂಥಗಳು ಪವಿತ್ರೀಕರಣದ ಮೊದಲು ಉಪವಾಸದ ನಿಯಮಗಳಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತವೆ. ಅದು ಧ್ಯಾನ ಮತ್ತು ವಿಶೇಷ “ಸಾತ್ವಿಕ” ಆಹಾರದೊಂದಿಗೆ ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸುವುದನ್ನು ಒಳಗೊಂಡಿರುತ್ತದೆ, ಅದು ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಲವಾರು ಇತರ ವಸ್ತುಗಳನ್ನು ನಿರ್ಬಂಧಿಸುತ್ತದೆ. ಪ್ರಧಾನಿಯವರು ನೆಲದ ಮೇಲೆ ಮಲಗುತ್ತಿದ್ದಾರೆ, ಕೇವಲ ಹೊದಿಕೆ ಮಾತ್ರ ಹೊದೆಯುತ್ತಾರೆ ಮತ್ತು ಎಳೆ ನೀರನ್ನು ಮಾತ್ರ ಕುಡಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಜನವರಿ 12 ರಿಂದ ದೇವಾಲಯದ ಮಹಾಮಸ್ತಕಾಭಿಷೇಕದ ವಿಧಿವಿಧಾನಗಳು ಆರಂಭಗೊಂಡಿವೆ. ಜನವರಿ 22 ರಂದು ಪ್ರಧಾನಿ ಮೋದಿ ‘ಪ್ರಾಣ ಪ್ರತಿಷ್ಠೆʼ ಪೂಜಾ ಕಾರ್ಯ ನೆರವೇರಿಸಲಿದ್ದಾರೆ. ಲಕ್ಷ್ಮೀಕಾಂತ ದೀಕ್ಷಿತ್ ನೇತೃತ್ವದ ಅರ್ಚಕರ ತಂಡವು ಪ್ರಾಣ ಪ್ರತಿಷ್ಠೆಯ ಪ್ರಮುಖ ವಿಧಿವಿಧಾನಗಳನ್ನು ನೆರವೇರಿಸಲಿದೆ.
“ಪ್ರಾಣ ಪ್ರತಿಷ್ಠಾ’ ಎಂದರೆ ವಿಗ್ರಹವನ್ನು ದೈವಿಕ ಪ್ರಜ್ಞೆಯಿಂದ ತುಂಬುವುದು ಮತ್ತು ದೇವಾಲಯದಲ್ಲಿ ಪೂಜಿಸುವ ಪ್ರತಿಯೊಂದು ವಿಗ್ರಹಕ್ಕೂ ಇದು ಅತ್ಯಗತ್ಯವಾಗಿರುತ್ತದೆ. ರಾಮ ಮಂದಿರದಲ್ಲಿ ಅದರ ಶುಭ ಸಮಯ ಜನವರಿ 22 ರಂದು ಮಧ್ಯಾಹ್ನ 12:30 ಆಗಿದೆ ಎಂದು ದೇವಾಲಯದ ಸಮಿತಿ ತಿಳಿಸಿದೆ.

ಮೈಸೂರು ಮೂಲದ ಶಿಲ್ಪಿ ಅರುಣ ಯೋಗಿರಾಜ ಅವರು ಕೆತ್ತಿಸಿದ ಕಪ್ಪು ಕಲ್ಲಿನಲ್ಲಿ ಐದು ವರ್ಷ ವಯಸ್ಸಿನ ರಾಮನ ವಿಗ್ರಹವನ್ನು ಬುಧವಾರ ರಾತ್ರಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ವಿಶೇಷ ಪೂಜೆ ಸಮಾರಂಭದ ನಂತರ ಅದನ್ನು ಗರ್ಭಗುಡಿಯಲ್ಲಿ ಇರಿಸಲಾಯಿತು ಎಂದು ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ದೇವಾಲಯದ ಟ್ರಸ್ಟ್‌ನಿಂದ ವಿಶೇಷವಾಗಿ ಆಹ್ವಾನಿಸಲ್ಪಟ್ಟ ದೇಶ ಮತ್ತು ವಿದೇಶಗಳಿಂದ 11,000 ಅತಿಥಿಗಳು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಕೇಂದ್ರ ಸರ್ಕಾರ ತನ್ನ ಎಲ್ಲಾ ಕಚೇರಿಗಳನ್ನು ಅರ್ಧ ದಿನ ಮುಚ್ಚುವುದಾಗಿ ಘೋಷಿಸಿದೆ.

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement