ವೀಡಿಯೊ…| ಹಾರಾಟದ ವೇಳೆ ಆಕಾಶದಲ್ಲಿ ಇಂಜಿನ್‌ ಗೆ ಬೆಂಕಿ ಹೊತ್ತಿಕೊಂಡ ನಂತರ ತುರ್ತು ಭೂಸ್ಪರ್ಶ ಮಾಡಿದ ವಿಮಾನ

ಇಂಜಿನ್‌ಗೆ ಬೆಂಕಿ ತಗುಲಿದ ನಂತರ US ಬೋಯಿಂಗ್ ಕಾರ್ಗೋ ವಿಮಾನದಿಂದ ಜ್ವಾಲೆಗಳು ಹೊರಬಂದವು ಅಟ್ಲಾಸ್ ಏರ್ ಕಾರ್ಗೋ ವಿಮಾನವು ಹಾರಾಟ ಮಾಡಿದ ಕೆಲವೇ ಹೊತ್ತಿನಲ್ಲಿ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ಅಟ್ಲಾಸ್ ಏರ್ ಬೋಯಿಂಗ್ ಕಾರ್ಗೋ ವಿಮಾನವು ಹೊರಟ ಸ್ವಲ್ಪ ಸಮಯದ ನಂತರ ಇಂಜಿನ್ ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ನಂತರ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

“ಸಿಬ್ಬಂದಿ ಎಲ್ಲಾ ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಿದರು ಮತ್ತು ಸುರಕ್ಷಿತವಾಗಿ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(MIA)ಕ್ಕೆ ಮರಳಿದರು” ಎಂದು ಅಟ್ಲಾಸ್ ಏರ್ ಹೇಳಿಕೆಯಲ್ಲಿ ತಿಳಿಸಿದೆ, ಗುರುವಾರ ತಡವಾಗಿ ಸಂಭವಿಸಿದ ಘಟನೆಯ ಕಾರಣವನ್ನು ನಿರ್ಧರಿಸಲು ತಪಾಸಣೆ ನಡೆಸುವುದಾಗಿ ಹೇಳಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪರಿಶೀಲಿಸದ ವೀಡಿಯೊಗಳು ಹಾರಾಟದ ಸಮಯದಲ್ಲಿ ವಿಮಾನದ ಎಡ ರೆಕ್ಕೆಯಿಂದ ಬೆಂಕಿಯ ಜ್ವಾಲೆಗಳನ್ನು ತೋರಿಸಿದೆ. ವೀಡಿಯೊಗಳ ದೃಢೀಕರಿಸಲು ತಕ್ಷಣವೇ ಸಾಧ್ಯವಾಗಲಿಲ್ಲ ಎಂದು ರಾಯಿಟರ್ಸ್ ಹೇಳಿದೆ.
ವಿಮಾನವು ಬೋಯಿಂಗ್ 747-8 ಎಂದು ಫ್ಲೈಟ್‌ವೇರ್ ಡೇಟಾ ತೋರಿಸಿದೆ. ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ವಿಮಾನ ನಿಲ್ದಾಣ ತಿಳಿಸಿದೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement