ಭಗವಾನ್‌ ರಾಮಲಲ್ಲಾ ವಿಗ್ರಹದ ಹಣೆಗೆ ಪ್ರತಿ ʼರಾಮನವಮಿʼಗೆ ಸೂರ್ಯನ ಬೆಳಕಿನ ತಿಲಕ : ʼಸೂರ್ಯ ತಿಲಕʼಕ್ಕಾಗಿ ವಿಜ್ಞಾನಿಗಳಿಂದ ಕನ್ನಡಿ-ಮಸೂರ ವ್ಯವಸ್ಥೆ; ಇದರ ವಿಶೇಷತೆ ಇಲ್ಲಿದೆ

ನವದೆಹಲಿ : ವರ್ಷಕ್ಕೊಮ್ಮೆ ವಿಶೇಷವಾದ ‘ಸೂರ್ಯ ತಿಲಕ’ ಅಯೋಧ್ಯೆ ರಾಮ ಮಂದಿರದ ರಾಮಲಲ್ಲಾನ ಹಣೆಯನ್ನು ಅಲಂಕರಿಸುತ್ತದೆ. ಪ್ರತಿ ರಾಮ ನವಮಿಯಂದು ಅಥವಾ ಜನ್ಮದಿನದಂದು ರಾಮಲಲ್ಲಾನಿಗಾಗಿ ಭಾರತೀಯ ವಿಜ್ಞಾನಿಗಳು ವಿನ್ಯಾಸಗೊಳಿಸಿದ ವಿಶೇಷ ʼಸೂರ್ಯ ತಿಲಕʼವನ್ನು ವಿನ್ಯಾಸಗೊಳಿಸಿದ್ದಾರೆ.
ಉನ್ನತ ಸರ್ಕಾರಿ ಸಂಸ್ಥೆಯ ವಿಜ್ಞಾನಿಗಳು ವಿಶೇಷ ಕನ್ನಡಿ ಮತ್ತು ಮಸೂರ ಆಧಾರಿತ ಉಪಕರಣವನ್ನು ವಿನ್ಯಾಸಗೊಳಿಸಿದ್ದಾರೆ, ಇದು ಪ್ರತಿ ರಾಮನವಮಿ ದಿನ ಮಧ್ಯಾಹ್ನ ಸೂರ್ಯನ ಕಿರಣವು ಅಯೋಧ್ಯೆಯ ರಾಮ ಮಂದಿರದ ‘ಬಾಲ ರಾಮ’ನ ವಿಗ್ರಹದ ಹಣೆಯ ಮೇಲೆ ನೇರವಾಗಿ ಬೀಳುವಂತೆ ಮಾಡುತ್ತದೆ. ಇದನ್ನು ಅಧಿಕೃತವಾಗಿ ‘ಸೂರ್ಯ ತಿಲಕ ಮೆಕೆನಿಸಂ (Surya Tilak mechanism)’ ಎಂದು ಕರೆಯಲಾಗುತ್ತದೆ.
“ಸಂಪೂರ್ಣ ದೇವಾಲಯ ನಿರ್ಮಾಣವಾದಾಗ ಈ ʼಸೂರ್ಯ ತಿಲಕʼ ಕಾರ್ಯವಿಧಾನವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ” ಎಂದು ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಬಿಆರ್‌ ಐ) ನಿರ್ದೇಶಕ ಡಾ ಪ್ರದೀಪಕುಮಾರ ರಾಮಂಚರ್ಲಾ ಹೇಳುತ್ತಾರೆ.

ರೂರ್ಕಿಯಲ್ಲಿರುವ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI) ಭಾರತದ ಉನ್ನತ ಸಂಸ್ಥೆಯಾಗಿದೆ, ಇದು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ನ ಭಾಗವಾಗಿದೆ. ಸದ್ಯ ಮೊದಲ ಮಹಡಿಯವರೆಗಿನ ರಚನೆ ಮಾತ್ರ ಮಾಡಲಾಗಿದೆ. ಗರ್ಭ ಗೃಹ ಮತ್ತು ನೆಲಮಹಡಿಯಲ್ಲಿ ಅಳವಡಿಸಬೇಕಿದ್ದ ಎಲ್ಲಾ ಉಪಕರಣಗಳು ಪೂರ್ಣಗೊಂಡಿವೆ ಎನ್ನುತ್ತಾರೆ ರಾಮಂಚಾರ್ಲ.
ಸೂರ್ಯ ತಿಲಕ ಕಾರ್ಯವಿಧಾನವನ್ನು ಸಿಬಿಆರ್‌ ಐ(CBRI)ಯ ವಿಜ್ಞಾನಿಗಳ ತಂಡವು ವಿನ್ಯಾಸಗೊಳಿಸಿದ್ದು, ಪ್ರತಿ ವರ್ಷ ರಾಮನವಮಿ ದಿನದಂದು ಮಧ್ಯಾಹ್ನ 12 ಗಂಟೆಗೆ ಭಗವಾನ್ ರಾಮನ ವಿಗ್ರಹದ ಹಣೆಯ ಮೇಲೆ ಸುಮಾರು ಆರು ನಿಮಿಷಗಳ ಕಾಲ ಸೂರ್ಯನ ಕಿರಣಗಳು ಬೀಳುವಂತೆ ಮಾಡುತ್ತದೆ. ಗೇರ್‌ಬಾಕ್ಸ್ ಮತ್ತು ಪ್ರತಿಫಲಿಸುವ ಕನ್ನಡಿಗಳು ಮತ್ತು ಲೆನ್ಸ್‌ಗಳನ್ನು ಜೋಡಿಸಲಾಗಿದೆ, ಅಂದರೆ ಸೂರ್ಯನ ಪಥವನ್ನು ಪತ್ತೆಹಚ್ಚುವ ಪ್ರಸಿದ್ಧ ತತ್ವಗಳನ್ನು ಬಳಸಿ ಶಿಖರದ ಬಳಿ ಮೂರನೇ ಮಹಡಿಯಿಂದ ಸೂರ್ಯನ ಕಿರಣಗಳನ್ನು ಗರ್ಭ ಗೃಹಕ್ಕೆ ತರಲಾಗುತ್ತದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಸಂಸ್ಥೆ ಸೂರ್ಯನ ಹಾದಿಯಲ್ಲಿ ತಾಂತ್ರಿಕ ಬೆಂಬಲವನ್ನು ಒದಗಿಸಿದೆ ಮತ್ತು ಬೆಂಗಳೂರು ಮೂಲದ ಕಂಪನಿಯಾದ ಆಪ್ಟಿಕ್ಸ್, ಮಸೂರಗಳು ಮತ್ತು ಹಿತ್ತಾಳೆಯ ಟ್ಯೂಬ್‌ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

ಈ ಸಾಧನದ ತಯಾರಿಕೆ ಮತ್ತು ಅವಳವಡಿಸುವುದನ್ನು ಆಪ್ಟಿಕ್ಸ್‌ ಎಂ.ಡಿ. ರಾಜೇಂದ್ರ ಕೊಟಾರಿಯಾ ನಿರ್ವಹಿಸುತ್ತಾರೆ. ಸಿಬಿಆರ್‌ಐ ತಂಡಕ್ಕೆ ಡಾ ಎಸ್. ಕೆ. ಪಾಣಿಗ್ರಾಹಿ ನೇತೃತ್ವ ವಹಿಸಿದ್ದಾರೆ. ಜೊತೆಗೆ ಡಾ ಆರ್ ಎಸ್ ಬಿಷ್ಟ್‌, ಕಾಂತಿಲಾಲ ಸೋಲಂಕಿ, ವಿ ಚಕ್ರಧರ, ದಿನೇಶ ಮತ್ತು ಸಮೀರ ಇದ್ದಾರೆ. ರಾಮಮಂದಿರದ ವಿನ್ಯಾಸದಲ್ಲಿ ಸಹಾಯ ಮಾಡಿದ ಸಿಬಿಆರ್‌ಐ ವಿಜ್ಞಾನಿ ಡಾ. ಪ್ರದೀಪ್ ಚೌಹಾಣ, “100 ಪ್ರತಿಶತ ʼಸೂರ್ಯ ತಿಲಕʼ ರಾಮಲಲ್ಲಾನ ವಿಗ್ರಹದ ಹಣೆಗೆ ಬೆಳಕಿನ ಅಭಿಷೇಕ ಮಾಡುತ್ತದೆ” ಎಂದು ಹೇಳುತ್ತಾರೆ. ರಾಮನವಮಿಯ ದಿನಾಂಕವನ್ನು ಚಂದ್ರನ ಕ್ಯಾಲೆಂಡರ್ ಬಳಸಿ ನಿಗದಿಪಡಿಸಲಾಗಿರುವುದರಿಂದ, ಇದು ನಡೆಯುವುದನ್ನು ಖಚಿತಪಡಿಸಿಕೊಳ್ಳಲು 19 ಗೇರ್‌ಗಳ ವಿಶೇಷ ವ್ಯವಸ್ಥೆಗಳನ್ನು ಹಾಕಬೇಕಾಗಿತ್ತು. “ಗೇರ್ ಆಧಾರಿತ ʼಸೂರ್ಯ ತಿಲಕʼ ಕಾರ್ಯವಿಧಾನದಲ್ಲಿ ಯಾವುದೇ ವಿದ್ಯುತ್ ಅಥವಾ ಬ್ಯಾಟರಿ ಅಥವಾ ಕಬ್ಬಿಣವನ್ನು ಬಳಸಲಾಗುವುದಿಲ್ಲ” ಎಂದು ಡಾ. ಚೌಹಾಣ ಹೇಳುತ್ತಾರೆ.

ಖಗೋಳಶಾಸ್ತ್ರದ ಬಗ್ಗೆ ಇರುವ ಭಾರತದ ಅಗ್ರಗಣ್ಯ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಚಂದ್ರ ಮತ್ತು ಸೌರ (ಗ್ರೆಗೋರಿಯನ್) ಕ್ಯಾಲೆಂಡರ್‌ಗಳ ದುಸ್ತರವಾದ ಜೋಡಣೆ ಮೂಲಕ ಇದಕ್ಕೆ ಪರಿಹಾರವನ್ನು ಕಂಡುಹಿಡಿದಿದೆ. “ನಾವು ಸ್ಥಾನಿಕ ಖಗೋಳಶಾಸ್ತ್ರದಲ್ಲಿ ಅಗತ್ಯವಾದ ಪರಿಣತಿಯನ್ನು ಹೊಂದಿದ್ದೇವೆ” ಎಂದು IIA ನ ನಿರ್ದೇಶಕಿ ಡಾ. ಅನ್ನಪೂರ್ಣಿ ಸುಬ್ರಮಣ್ಯಂ ಹೇಳುತ್ತಾರೆ. “ಈ ಡೊಮೇನ್ ಜ್ಞಾನವನ್ನು ಪರಿವರ್ತಿಸಿದ್ದರಿಂದ ಸೂರ್ಯ ತಿಲಕದ ರೂಪದಲ್ಲಿ ಸೂರ್ಯನ ಕಿರಣಗಳು ಪ್ರತಿ ರಾಮ ನವಮಿಯಂದು ರಾಮ ಲಲ್ಲಾನ ವಿಗ್ರಹವನ್ನು ಅಭಿಷೇಕಿಸಬಹುದು ಎಂದು ಅವರು ಹೇಳಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ದೃಗ್ವಿಜ್ಞಾನದಲ್ಲಿ ಪರಿಣತಿಯನ್ನು ಹೊಂದಿದೆ. ಏಕೆಂದರೆ ಅವರು ಭಾರತದ ಕೆಲವು ಅತ್ಯುತ್ತಮ ದೂರದರ್ಶಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಈ ಪೆರಿಸ್ಕೋಪ್ ತರಹದ ಸಾಧನವು ಸುತ್ತುವರಿದ ಗರ್ಭ ಗೃಹಕ್ಕೆ ಸೂರ್ಯನ ಬೆಳಕನ್ನು ತರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅದನ್ನು ವಿಸ್ತರಿಸಲಾಗಿದೆ. “ಇದು ಆಸಕ್ತಿದಾಯಕ ವೈಜ್ಞಾನಿಕ ಪ್ರಯೋಗವಾಗಿದ್ದು, ಎರಡು ಕ್ಯಾಲೆಂಡರ್‌ಗಳ 19 ವರ್ಷಗಳ ಪುನರಾವರ್ತಿತ ಚಕ್ರವು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿತು” ಎಂದು ಡಾ. ಅನ್ನಪೂರ್ಣಿ ಸುಬ್ರಮಣ್ಯಂ ಹೇಳುತ್ತಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

ಸೂರ್ಯನ ಶಕ್ತಿಯನ್ನು ಕೊಯ್ಲು ಮಾಡಿ (harvested) ರಾಮಲಲ್ಲಾನ ವಿಗ್ರಹದ ಹಣೆಗೆ ನಿರ್ದೇಶಿಸಲಾಗಿದ್ದರೂ ಸಹ, ರಾಮ ಮಂದಿರದ ಸಂಕೀರ್ಣವನ್ನು ಹಸಿರು ಮತ್ತು ನಿವ್ವಳ ಶೂನ್ಯಕ್ಕೆ ಹತ್ತಿರವಾಗಿಸುವ ಮತ್ತೊಂದು ಸಮಾನ ಮಹತ್ವಾಕಾಂಕ್ಷೆಯ ಯೋಜನೆಯಾದ ಸೌರಶಕ್ತಿ ಫಲಕಗಳನ್ನು ಬಳಸಿ ವಿದ್ಯುತ್ ಉತ್ಪಾದಿಸಲು ನಮಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ದೇಗುಲದ ಸಮುಚ್ಚಯದಲ್ಲಿ ಹಲವು ವಾನರ ಪಡೆಗಳ (ಮಂಗಗಳ) ಉಪಸ್ಥಿತಿ ಸೌರಶಕ್ತಿ ಯೋಜನೆಯನ್ನು ಕೈಬಿಡಲು ಕಾರಣವಾಯಿತು” ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳುತ್ತಾರೆ. “ಹಲವು ಕೋತಿಗಳಿವೆ, ಮತ್ತು ಅವೆಲ್ಲವೂ ಪೂಜ್ಯವಾಗಿವೆ. ಅವುಗಳು ಸೌರ ಫಲಕಗಳನ್ನು ಹಾನಿಗೊಳಿಸುತ್ತವೆ” ಎಂದು ಅವರು ಹೇಳುತ್ತಾರೆ.
ಇದೇ ರೀತಿಯ ಸೂರ್ಯ ತಿಲಕ ಕಾರ್ಯವಿಧಾನವು ಈಗಾಗಲೇ ಕೋನಾರ್ಕ್‌ನಲ್ಲಿರುವ ಸೂರ್ಯ ದೇವಾಲಯದಲ್ಲಿ ಹಾಗೂ ಕೆಲವು ಜೈನ ದೇವಾಲಯಗಳಲ್ಲಿ ಅಸ್ತಿತ್ವದಲ್ಲಿದೆ, ಆದರೆ ಅವುಗಳನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement