ವೀಡಿಯೊ: ಮುಂಬೈನ ನೂತನ ಅಟಲ್‌ ಸೇತುವೆ ಮೇಲೆ ಭಯಾನಕವಾಗಿ ತಿರುಗುತ್ತ ಸೇತುವೆ ರೇಲಿಂಗ್‌ ಭೀಕರವಾಗಿ ಅಪ್ಪಳಿಸಿ ಪಲ್ಟಿಯಾದ ಕಾರು…

ಮುಂಬೈನ ನೂತನ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಸೇತುವೆ (ಅಟಲ್‌ ಸೇತುವೆ) ಮೇಲೆ ವಾಹನವೊಂದರ ನಾಟಕೀಯ ಅಪಘಾತದ ದೃಶ್ಯ ವೈರಲ್‌ ಆಗಿದೆ. ಅದು ಸೇತುವೆಯ ರೇಲಿಂಗ್‌ಗೆ ಡಿಕ್ಕಿ ಹೊಡೆದು ಸ್ಥಗಿತಗೊಳ್ಳುವ ಮೊದಲು ಅದು ಸ್ಕಿಡ್‌ ಆಗಿ ಹಲವಾರು ಪಲ್ಟಿ ಹೊಡೆದಿದೆ. 16.5 ಕಿಮೀ ಸಮುದ್ರದ ಮೂಲಕ ಹಾದು ಹೋಗುವ ಒಟ್ಟು 21.8 ಕಿಮೀ ಉದ್ದದ ಷಟ್ಪಥ ಅಟಲ್‌ ಸೇತುವೆ ಇತ್ತೀಚೆಗೆ ಉದ್ಘಾಟನೆಗೊಂಡ ನಂತರ ಇದು ಮೊದಲ ಅಪಘಾತವಾಗಿದೆ.
ಎನ್‌ಡಿಟಿವಿ ವರದಿ ಪ್ರಕಾರ, ಈ ಘಟನೆ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಕಾರಿನ ಡ್ಯಾಶ್‌ಕ್ಯಾಮ್ ಫೂಟೇಜ್ ವಾಹನವು ಲೇನ್‌ಗಳಿಗೆ ಅಡ್ಡಲಾಗಿ ಹೋಗಿ ರೇಲಿಂಗ್‌ಗೆ ಡಿಕ್ಕಿ ಹೊಡೆಯುವುದನ್ನು ತೋರಿಸಿದೆ.
ಕಾರು ಚಿರ್ಲೆಗೆ (ರಾಯಗಢ ಜಿಲ್ಲೆಯ ಉರಾನ್ ತಾಲೂಕಿನ ಗ್ರಾಮ) ತೆರಳುತ್ತಿತ್ತು. ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಅಟಲ್ ಸೇತು ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 12 ರಂದು ಮುಂಬೈನಲ್ಲಿ ಅಟಲ್ ಸೇತುವನ್ನು ಉದ್ಘಾಟಿಸಿದ್ದರು. ಇದು ಭಾರತದ ಅತಿ ಉದ್ದದ ಸೇತುವೆಯಾಗಿದೆ ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಒದಗಿಸುವ ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ.
ಸೇವ್ರಿಯಿಂದ ಆರಂಭಗೊಂಡು ನ್ಹವಾ ಶೇವಾದಲ್ಲಿ ಕೊನೆಗೊಳ್ಳುವ ಸೇತುವೆಯು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಮುಂಬೈ-ಗೋವಾ ಹೆದ್ದಾರಿಯಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

21,200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆಯು ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರಿನ ನಡುವಿನ ಸಂಪರ್ಕದ ಸಮಯವನ್ನು ಎರಡು ತಾಸುಗಳ ಬದಲು ಈಗ ಕೇವಲ 15-20 ನಿಮಿಷ ತೆಗೆದುಕೊಳ್ಳುತ್ತದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement