ಅಸ್ಸಾಂನಲ್ಲಿ ʼಹಿಂಸಾಚಾರ, ಹಲ್ಲೆʼ ನಡೆಸಿದ ಆರೋಪ : ರಾಹುಲ್ ಗಾಂಧಿ, ಇತರ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್

ಗುವಾಹತಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ ಮತ್ತು ಪಕ್ಷದ ಇತರ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಭಾರತ ಜೋಡೋ ನ್ಯಾಯ ಯಾತ್ರೆಗೆ ಅದರ ಪ್ರಮುಖ ಮಾರ್ಗಗಳ ಮೂಲಕ ಗುವಾಹತಿ ಪ್ರವೇಶಿಸಲು ಅನುಮತಿ ನಿರಾಕರಿಸಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ ಪ್ರಕರಣ ದಾಖಲಿಸಲಾಗಿದೆ.
ಇಂದು (ಜನವರಿ 23) ಕಾಂಗ್ರೆಸ್ ಸದಸ್ಯರು ಹಿಂಸಾಚಾರ, ಪ್ರಚೋದನೆ, ಸಾರ್ವಜನಿಕ ಆಸ್ತಿ ಹಾನಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ” ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಯಾತ್ರೆಗೆ ಗುವಾಹತಿ ನಗರದೊಳಕ್ಕೆ ಹೋಗುವ ಬದಲಾಗಿ ಗುವಾಹತಿ ಬೈಪಾಸ್ ಅನ್ನು ಬಳಸಲು ಸೂಚಿಸಿದ್ದರು. ನಂತರ ಯಾತ್ರೆಯನ್ನು ನಗರಕ್ಕೆ ಪ್ರವೇಶಿಸದಂತೆ ತಡೆಯಲಾಯಿತು, ಇದು ಪೊಲೀಸ್ ಸಿಬ್ಬಂದಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿದ್ದರಿಂದ ಪೊಲೀಸರು ಅವರನ್ನು ತಡೆಯಲು ಬಲಪ್ರಯೋಗ ಮಾಡಿದರು. ನಂತರ, ನಗರದ ಹೊರವಲಯದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬ್ಯಾರಿಕೇಡ್‌ಗಳನ್ನು ಉರುಳಿಸುವಷ್ಟು ಶಕ್ತಿಶಾಲಿಯಾದ “ಬಬ್ಬರ್ ಶೇರ್” (ಸಿಂಹ) ಎಂದು ಉಲ್ಲೇಖಿಸಿದರು. “ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ, ಆದರೆ ನಾವು ಕಾನೂನನ್ನು ಮುರಿಯುವುದಿಲ್ಲ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಹಿಮಂತ ಬಿಸ್ವಾ ಶರ್ಮಾ “ಜನಸಮೂಹವನ್ನು ಪ್ರಚೋದಿಸಿದ” ಆರೋಪದ ಮೇರೆಗೆ ರಾಹುಲ್‌ ಗಾಂಧಿ ವಿರುದ್ಧ ಪ್ರಕರಣವನ್ನು ದಾಖಲಿಸಲು ಸೂಚಿಸಿದರು.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement