ವೀಡಿಯೊ….| ರಾಹುಲ್ ಗಾಂಧಿ ಯಾತ್ರೆಗೆ ನಗರದೊಳಕ್ಕೆ ಪ್ರವೇಶ ನಿರಾಕರಣೆ : ಗುವಾಹತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ಪೊಲೀಸರ ಘರ್ಷಣೆ

ಗುವಾಹತಿ : ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂ ರಾಜಧಾನಿ ಗುವಾಹತಿ ಪ್ರಮುಖ ಮಾರ್ಗಗಳ ಮೂಲಕ ನಗರ ಪ್ರವೇಶಿಸಲು ಅನುಮತಿ ನಿರಾಕರಿಸಿದ ನಂತರ ಮಂಗಳವಾರ ಗುವಾಹಟಿತಿಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಿಂದ ಉದ್ವಿಗ್ನತೆ ಉಂಟಾಗಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ಯಾತ್ರೆಯನ್ನು ನಗರದಿಂದ ದೂರವಿರಿಸಲು ಮತ್ತು ಬದಲಾಗಿ ಗುವಾಹತಿ ಬೈಪಾಸ್ ಅನ್ನು ಬಳಸಲು ನಿರ್ದೇಶಿಸಿದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ಪೊಲೀಸರು ಯಾತ್ರೆಯನ್ನು ಗುವಾಹತಿ ನಗರದೊಳಕ್ಕೆ ಪ್ರವೇಶಿಸದಂತೆ ತಡೆದರು. ಇದನ್ನು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟಿಸಿದರು.
ವೀಡಿಯೊ ದೃಶ್ಯಗಳು ಧ್ವಜ ಹಿಡಿದ ಹಲವಾರು ಕಾಂಗ್ರೆಸ್ ಬೆಂಬಲಿಗರು, ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳವಾಡಿದರು ಮತ್ತು ರಾಹುಲ್ ಗಾಂಧಿ ದೂರದಿಂದ ನೋಡುತ್ತಿರುವಾಗ ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿದರು.

ಘಟನೆಯ ಹಿನ್ನೆಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, “ಬಜರಂಗದಳ ಮತ್ತು ಜೆಪಿ ನಡ್ಡಾ ಅವರ ರ್ಯಾಲಿಗಳಿಗೆ ಈ ಮಾರ್ಗವಾಗಿ ಹೋಗಲು ಅನುಮತಿ ನೀಡಲಾಗಿದೆ, ಆದರೆ ಅವರು ನಮ್ಮನ್ನು ತಡೆಯುತ್ತಿದ್ದಾರೆ, ನಾವು ಕಾಂಗ್ರೆಸ್ ಕಾರ್ಯಕರ್ತರು, ನಾವು ಪ್ರಬಲರು, ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ, ಆದರೆ ಕಾನೂನನ್ನು ಮುರಿಯವುದಿಲ್ಲ ಹಾಗೂ ಕೈಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

ಯಾತ್ರೆಯು ಕೇಂದ್ರ ಗುವಾಹತಿಯ ಮೂಲಕ ಹಾದುಹೋಗಲು ಕಾಂಗ್ರೆಸ್ ಯೋಜಿಸಿತ್ತು, ಆದರೆ ಅಧಿಕಾರಿಗಳು ಸಂಭಾವ್ಯ ಟ್ರಾಫಿಕ್ ಅಡೆತಡೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ಉಲ್ಲೇಖಿಸಿ ಈ ಮಾರ್ಗದಲ್ಲಿ ಯಾತ್ರೆಗೆ ಸಾಗಲು ಅನುಮತಿ ನೀಡದೆ ಬೇರೆ ಮಾರ್ಗದಲ್ಲಿ ಸಾಲು ಅನುಮತಿ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರವು ನಗರದ ಪ್ರವೇಶ ಬಿಂದುವಾದ ಖಾನಪಾರಾ ಕ್ರಾಸಿಂಗ್‌ನಲ್ಲಿ ಗಮನಾರ್ಹ ಪೊಲೀಸ್ ಉಪಸ್ಥಿತಿಗೆ ಕಾರಣವಾಯಿತು, ಅಲ್ಲಿ ಕಾಂಗ್ರೆಸ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು.

ಈಶಾನ್ಯ ರಾಜ್ಯಗಳ ಮೂಲಕ ಸಾಗುತ್ತಿರುವ ಭಾರತ ಜೋಡೋ ನ್ಯಾಯ ಯಾತ್ರೆಯು ಬಿಜೆಪಿ ಆಡಳಿತದ ಅಸ್ಸಾಂನಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದೆ. ನಾಗಾಂವ್ ಜಿಲ್ಲೆಯ ಶಂಕರದೇವರ ಜನ್ಮಸ್ಥಳದಲ್ಲಿರುವ ದೇಗುಲಕ್ಕೆ ರಾಹುಲ್ ಗಾಂಧಿಗೆ ಪ್ರವೇಶ ನಿರಾಕರಿಸಲಾಯಿತು.
ಮೇಲಾಗಿ, ಸ್ಥಳೀಯ ಅಧಿಕಾರಿಗಳು ಅನುಮತಿಯನ್ನು ಹಿಂಪಡೆದ ನಂತರ ಮೇಘಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಅಧಿವೇಶನವನ್ನು ರದ್ದುಗೊಳಿಸಲಾಯಿತು.
ಅಸ್ಸಾಂ ಸರ್ಕಾರವು ಯಾತ್ರೆಗೆ ಅನಗತ್ಯ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ ಮತ್ತು ರಾಹುಲ್‌ ಗಾಂಧಿ ಬೆಂಗಾವಲು ಪಡೆಗಳು ಮತ್ತು ಕಾಂಗ್ರೆಸ್‌ ನಾಯಕರ ವಿರುದ್ಧ ಗುರಿಯಾಗಿ ದಾಳಿ ನಡೆಸಲಾಗಿದೆ ಎಂದು ಅದು ಆರೋಪಿಸಿದೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement