ಬಿಹಾರದಲ್ಲಿ ಮತ್ತೆ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ: ಜನವರಿ 28ಕ್ಕೆ ಸಿಎಂ ಆಗಿ ನಿತೀಶ ಪ್ರಮಾಣ ವಚನ..?!

ನವದೆಹಲಿ: ನಿತೀಶಕುಮಾರ ಅವರು ಬಿಜೆಪಿಯ ಬೆಂಬಲದೊಂದಿಗೆ ಭಾನುವಾರ ಒಂಬತ್ತನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿ ಪ್ರಕಾರ, ಬಿಜೆಪಿಗೆ ಅವರು ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ನಿತೀಶಕುಮಾರ ಅವರು ನಾಳೆ ಶನಿವಾರ ಬೆಳಗ್ಗೆ 10 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸರ್ಕಾರದಲ್ಲಿ ಮುಂಬರುವ ಬದಲಾವಣೆಯ ವರದಿಗಳ ನಡುವೆ ಬಿಹಾರದಲ್ಲಿ ಜಿಲ್ಲಾಧಿಕಾರಿಗಳ ದೊಡ್ಡ ಪ್ರಮಾಣದ ವರ್ಗಾವಣೆ ನಡೆಯುತ್ತಿದೆ.
ಈ ಸಮಯದಲ್ಲಿ ವಿಧಾನಸಭೆ ವಿಸರ್ಜಿಸುವುದಿಲ್ಲ ಮತ್ತು ಮತದಾನವೂ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಹೇಗಾದರೂ ಮುಂದಿನ ವರ್ಷ ಮತದಾನ ನಡೆಯಲಿದೆ, ಆದ್ದರಿಂದ ಎರಡೂ ಪಕ್ಷಗಳು ಅವಸರದಲ್ಲಿಲ್ಲ ಎನ್ನಲಾಗಿದೆ. ಏಪ್ರಿಲ್‌/ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೆ ಈ ಪಕ್ಷಗಳು ತಕ್ಷಣದ ಗಮನ ಕೇಂದ್ರೀಕರಿಸಲಿದೆ.

ಬಿಜೆಪಿ ಮತ್ತು ನಿತೀಶ ಅವರ ಜೆಡಿಯು ಎರಡೂ ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರನ್ನು ಕರೆಸಿ ಒಪ್ಪಂದವನ್ನು ಮುಕ್ತಾಯಗೊಳಿಸುತ್ತವೆ, ಪ್ರತಿ ವರ್ಷ ಗಣರಾಜ್ಯೋತ್ಸವದಂದು ಆಯೋಜಿಸಲಾಗುವ ಚಹಾ ಕೂಟದ ಅಂಗವಾಗಿ ಮುಖ್ಯಮಂತ್ರಿ ನಿತೀಶಕುಮಾರ ಇಂದು, ಶುಕ್ರವಾರ ಸಂಜೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾದರು, ಸರ್ಕಾರದ ಭಾಗವಾಗಿರುವ ರಾಷ್ಟ್ರೀಯ ಜನತಾದಳ ಪಕ್ಷದ ನಾಯಕ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಗೈರು ಹಾಜರಾಗಿದ್ದರು.
ಆರ್‌ಜೆಡಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ್ ತಿವಾರಿ ಅವರು ನಿತೀಶ ಅವರ ಕುರಿತು, “ಗುರುವಾರ ನಾವು ಅಪಾಯಿಂಟ್ಮೆಂಟ್ ಕೇಳಿದ್ದೇವೆ ಆದರೆ, ಈವರೆಗೆ, ನಿತೀಶಜೀ ನಮಗೆ ಸಮಯ ನೀಡಿಲ್ಲ, ಅವರು ಮತ್ತೆ ಅಂತಹ ತಪ್ಪು ಮಾಡುತ್ತಾರೆ ಎಂದು ನಾವು ನಂಬುವುದಿಲ್ಲ ಎಂದು ಹೇಳಿದರು.
ನಿತೀಶಕುಮಾರ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವುದು ಸೇರಿದಂತೆ ಜನವರಿ 28 ರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

ಬಿಜೆಪಿ ಘರ್ ವಾಪ್ಸಿಯು ಬಿಹಾರದ ರಾಜಕೀಯ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಮತ್ತು ಮೂಲಗಳ ಪ್ರಕಾರ, ನಿತೀಶಕುಮಾರ ಅವರ ಪಕ್ಷದೊಳಗೆ ಭಿನ್ನಾಭಿಪ್ರಾಯ ಉಂಟಾಗಿದೆ. ಕಳೆದ ತಿಂಗಳು ನಿತೀಶ್‌ರಿಂದ ಜೆಡಿಯು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡ ಲಲ್ಲನ್‌ ಸಿಂಗ್, ಆರ್‌ಜೆಡಿ ಜೊತೆಗೆ ಮೈತ್ರಿ ಮುರಿದುಕೊಳ್ಳುವುದಕ್ಕೆ ವಿರೋಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಸಂಜಯ್ ಝಾ ಮತ್ತು ಅಶೋಕ್ ಚೌಧರಿ ನೇತೃತ್ವದ ಗುಂಪು ಬಿಜೆಪಿಯೊಂದಿಗೆ ಮೈತ್ರಿಗೆ ಒತ್ತಾಯಿಸುತ್ತಿದೆ ಎನ್ನಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement