ಸಾಲದ ವಿಚಾರದಲ್ಲಿ ಮದುವೆಗೆಂದು ಕರೆದೊಯ್ದು ದೆಹಲಿ ಉನ್ನತ ಪೋಲೀಸ್ ಅಧಿಕಾರಿ ಮಗನ ಕೊಲೆ

ನವದೆಹಲಿ : ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹರ್ಯಾಣಾಕ್ಕೆ ತೆರಳಿದ್ದ ದೆಹಲಿ ಪೊಲೀಸ್‌ ಸಹಾಯಕ ಆಯುಕ್ತ ಯಶಪಾಲ ಸಿಂಗ್‌ ಅವರ ಪುತ್ರ 24ರ ಹರೆಯದ ಲಕ್ಷ್ಯ ಚೌಹಾಣ ಅವರ ಕೊಲೆಯಾಗಿದೆ. ಆತನ ದೇಹವು ಕಾಲುವೆಯಲ್ಲಿ ಕಂಡುಬಂದಿದೆ.
ತೀಸ್ ಹಜಾರಿ ನ್ಯಾಯಾಲಯದ ವಕೀಲರಾದ ಸಾಕ್ಷ್ಯ ಚೌಹಾಣ ಅವರನ್ನು ಅವರ ಇಬ್ಬರು ಸ್ನೇಹಿತರಾದ ವಿಕಾಸ ಭಾರದ್ವಾಜ ಮತ್ತು ಆತನ ಸಹಚರ ಅಭಿಷೇಕ ಎಂಬವರು ಹರ್ಯಾಣದಲ್ಲಿ ಕಾಲುವೆಗೆ ತಳ್ಳಿದ್ದಾರೆ ಎಂದು ಹೇಳಲಾಗಿದೆ.
ಸೋಮವಾರ ಲಕ್ಷ್ಯ ಚೌಹಾಣ ಅವರು ವಿಕಾಸ ಭಾರದ್ವಾಜ ಮತ್ತು ಅಭಿಷೇಕ ಎಂಬವರೊಂದಿಗೆ ಹರ್ಯಾಣದ ಸೋನೆಪತ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಮಾರನೇ ದಿನ ಅವರು ಮನೆಗೆ ಹಿಂದಿರುಗದಿದ್ದಾಗ ಎಸಿಪಿ ಯಶ್ಪಾಲ ಸಿಂಗ್ ಅವರು ತಮ್ಮ ಪುತ್ರ ಕಾಣೆಯಾದ ದೂರು ದಾಖಲಿಸಿದರು. ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದರು.

ತನಿಖೆ ಮುಂದುವರೆದಂತೆ, ಚೌಹಾಣ ಮತ್ತು ಭಾರದ್ವಾಜ ನಡುವಿನ ಹಣಕಾಸಿನ ವಿವಾದವು ಹೊರಬಿತ್ತು, ಆತನ ಚೌಹಾಣ ಅವರನ್ನು ಮುಗಿಸಲು ಸಂಚು ರೂಪಿಸಿದ. ಚೌಹಾಣ ಸಾಲವನ್ನು ತೆಗೆದುಕೊಂಡಿದ್ದರು ಮತ್ತು ಅದನ್ನು ಮರುಪಾವತಿಸಲು ನಿರಂತರವಾಗಿ ನಿರಾಕರಿಸಿದ್ದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಒಂದು ವಾರದ ಅವಧಿಯ ಹುಡುಕಾಟದ ನಂತರ ಬಂಧಿತನಾದ ಅಭಿಷೇಕ ಎಂಬಾತ, ವಿಕಾಸ ಭಾರದ್ವಾಜ ತನ್ನನ್ನು ಮದುವೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದನೆಂದು ಬಹಿರಂಗಪಡಿಸಿದ್ದಾನೆ. ಹಾಗೂ ಮದುವೆ ಮುಗಿಸಿ ವಾಪಸ್ಸಾಗುವಾಗ ಇಬ್ಬರು ಚೌಹಾಣ ಅವರನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

ಮಧ್ಯರಾತ್ರಿಯ ನಂತರ ಮದುವೆ ಕಾರ್ಯಕ್ರಮದಿಂದ ಹೊರಟ ಮೂವರು ಪ್ರಕೃತಿಯ ಕರೆಗೆ ಉತ್ತರಿಸಲು ಮುನಕ್ ಕಾಲುವೆಯ ಬಳಿ ನಿಂತರು. ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ಭಾರದ್ವಾಜ ಮತ್ತು ಅಭಿಷೇಕ ಅವರು ಚೌಹಾಣ ಅವರನ್ನು ಕಾಲುವೆಗೆ ತಳ್ಳಿ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.ದೆಹಲಿಗೆ ಹಿಂದಿರುಗಿದ ನಂತರ, ಭಾರದ್ವಾಜ ನಾಪತ್ತೆಯಾಗುವ ಮೊದಲು ಅಭಿಷೇಕನನ್ನು ನರೇಲಾದಲ್ಲಿ ಇಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಂತರ ಅಭಿಷೇಕನನ್ನು ಬಂಧಿಸಲಾಗಿದ್ದು, ಆತನ ಹೇಳಿಕೆ ಆಧರಿಸಿ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಭಾರದ್ವಾಜ ಪತ್ತೆಗೆ ಪೊಲೀಸರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement