ಕಾರ್ತಿಕ ಬಿಗ್​ಬಾಸ್​ ಸೀಸನ್​ 10ರ ವಿಜೇತ

ಬೆಂಗಳೂರು : ಕಾರ್ತಿಕ ಮಹೇಶ ಅವರನ್ನು ಬಿಗ್ ಬಾಸ್ ಕನ್ನಡ 10 ರ ಆವೃತ್ತಿಯ ವಿಜಯಶಾಲಿ ಎಂದು ಘೋಷಣೆ ಮಾಡಲಾಗಿದೆ. ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರೊಂದಿಗಿನ ಕಠಿಣ ಸ್ಪರ್ಧೆಯ ನಡುವೆಯೂ ಬಿಗ್ ಬಾಸ್ ಕನ್ನಡ 10 ರ ಸ್ಪರ್ಧೆಯಲ್ಲಿ ಕಾರ್ತಿಕ ಮಹೇಶ ಗೆದ್ದಿದ್ದಾರೆ. ಈ ಬಾರಿಯ ಟ್ರೋಫಿ ಮತ್ತು 50 ಲಕ್ಷ ರೂ. ಬಹುಮಾನ ಹಣವನ್ನು ಕಾರ್ತಿಕ​ ಮಹೇಶ​ ಪಡೆದಿದ್ದಾರೆ. ಫೈನಲಿಸ್ಟ್‌ಗಳಾದ ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರೊಂದಿಗೆ ಭಾರಿ ಪೈಪೋಟಿ ಇದ್ದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡ್ರೋನ್​ ಪ್ರತಾಪ​ ಪ್ರಥಮ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಸಂಗೀತಾ ಶೃಂಗೇರಿ 2ನೇ ರನ್ನರ್ ಅಪ್ ಆಗಿದ್ದಾರೆ. ಗ್ರ್ಯಾಂಡ್​ ಫಿನಾಲೆ ವಾರಕ್ಕೆ ತುಕಾಲಿ ಸಂತೋಷ​, ವರ್ತೂರು​ ಸಂತೋಷ​, ಡ್ರೋನ್​ ಪ್ರತಾಪ​, ಸಂಗೀತಾ ಶೃಂಗೇರಿ, ವಿನಯ​ ಗೌಡ ಹಾಗೂ ಕಾರ್ತಿಕ್​ ಮಹೇಶ​ ಪ್ರವೇಶ ಪಡೆದಿದ್ದರು. ಶನಿವಾರದ ಫಿನಾಲೆ ಎಪಿಸೋಡ್​ನಲ್ಲಿ ತುಕಾಲಿ ಸಂತೋಷ​ ಅವರು ಬಿಗ್‌ ಬಾಸ್‌ ಮನೆಯಿಂದ ಹೊರ ಬರುವ ಮೂಲಕ 5ನೇ ರನ್ನರ್​ ಅಪ್​ ಎನಿಸಿಕೊಂಡರು. ಭಾನುವಾರದ ಅಂತಿಮ ಫಿನಾಲೆ ಎಪಿಸೋಡ್​ನಲ್ಲಿ ಐವರು ಸ್ಪರ್ಧಿಗಳು ಉಳಿದುಕೊಂಡಿದ್ದರು.

ಪ್ರಮುಖ ಸುದ್ದಿ :-   ರಾಜ್ಯದ ಈ ಜಿಲ್ಲೆಗಳಲ್ಲಿ 6-7 ದಿನ ಮಳೆ ಸಾಧ್ಯತೆ

ಭಾನುವಾರದ ಗ್ರ್ಯಾಂಡ್​ ಫಿನಾಲೆ ಎಪಿಸೋಡ್​ನಲ್ಲಿ ವರ್ತೂರು​ ಸಂತೋಷ​ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿಯಾಗಿ 4ನೇ ರನ್ನರ್​ ಅಪ್​ ಆದರು. ನಂತರ ವಿನಯ ಗೌಡ ಹೊರಬರುವ ಮೂಲಕ 3ನೇ ರನ್ನರ್​ ಅಪ್​ ಆದರು. ಫೇವರಿಟ್‌ಗಳಲ್ಲಿ ಒಬ್ಬರಾಗಿದ್ದ ಸಂಗೀತಾ ಶೃಂಗೇರಿ ಕೂಡ ಎಲಿಮಿನೇಟ್​ ಆಗಿ 2ನೇ ರನ್ನರ್​ ಅಪ್​ ಆದರು.
ಅಂತಿಮವಾಗಿ ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ ಮಹೇಶ​ ಮತ್ತು ಡ್ರೋನ್ ಪ್ರತಾಪ​ ಉಳಿದುಕೊಂಡರು. ಅಂತಿಮವಾಗಿ ಕಾರ್ತಿಕ​ ಮಹೇಶ ಅವರ​ ಕೈಯನ್ನು ಮೇಲೆತ್ತುವ ಮೂಲಕ ಅಧಿಕೃತ ಘೋಷಣೆ ಮಾಡಿದರು. ವಿನ್ನರ್​ ಕಾರ್ತಿಕ್​ಗೆ 50 ಲಕ್ಷ ನಗದು ಮತ್ತು ಒಂದು ಕಾರು ಬಹುಮಾನವಾಗಿ ಸಿಗುತ್ತಿದೆ.

ನಟ ಕಾರ್ತಿಕ ಮಹೇಶ ಮೂಲತಃ ಮೈಸೂರಿನವರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ ಮುಗಿಸಿದ ನಂತರ ನಟನಾಗುವ ಹಂಬಲದೊಂದಿಗೆ ಬೆಂಗಳೂರಿಗೆ ಬಂದರು, ಮಾಡಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು ಅಕ್ಕ, ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ, ಅಂತರಪಟ ಮೊದಲಾದ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಸಾಗರ್ ಪುರಾಣಿಕ ತಮ್ಮ ನಿರ್ದೇಶನದ ‘ಡೊಳ್ಳು’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲರ ಹೃದಯಗೆದ್ದ ವಿಶೇಷಚೇತನ ಸಮಾಜ ಸೇವಕ ಬೆಂಗಳೂರಿನ ಡಾ.ರಾಜಣ್ಣ ; ವೀಡಿಯೊ ಭಾರೀ ವೈರಲ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement