‘2029ರ ಚುನಾವಣೆಗೆ ಸಿದ್ಧತೆ’: ಭಾರತ ಜೋಡೋ ನ್ಯಾಯ ಯಾತ್ರೆ ಬಗ್ಗೆ ಸ್ವಪಕ್ಷವನ್ನೇ ಟೀಕಿಸಿದ ಕಾಂಗ್ರೆಸ್ ಮುಖಂಡ

ನವದೆಹಲಿ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ ಕೃಷ್ಣಂ ಅವರು ಸೋಮವಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು “ರಾಜಕೀಯ ಪ್ರವಾಸೋದ್ಯಮ” ಎಂದು ಕರೆದಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಇತರ ಪಕ್ಷಗಳು ತಯಾರಿ ನಡೆಸುತ್ತಿರುವಾಗ ತಮ್ಮ ಪಕ್ಷವು “ಪ್ರಯಾಣ” ಮಾಡುತ್ತಿದೆ ಎಂದು ಅವರು ಸ್ವಪಕ್ಷವನ್ನೇ ಟೀಕಿಸಿದ್ದಾರೆ.
“ಕಾಂಗ್ರೆಸ್ ಪಕ್ಷವು ಕೆಲವು ಶ್ರೇಷ್ಠ ಮತ್ತು ಬುದ್ಧಿವಂತ ನಾಯಕರನ್ನು ಹೊಂದಿದೆ. ಒಂದೆಡೆ ಎಲ್ಲಾ ರಾಜಕೀಯ ಪಕ್ಷಗಳು 2024ರ ಚುನಾವಣೆಗೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಇಡೀ ಕಾಂಗ್ರೆಸ್ ಪಕ್ಷವು ರಾಜಕೀಯ ಪ್ರವಾಸೋದ್ಯಮ ಮಾಡುತ್ತಿದೆ; ಅವರು ಟ್ರಾವೆಲ್‌ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವಾಸ್ತವವಾಗಿ, 2024ರ ಲೋಕಸಭೆ ಚುನಾವಣೆ ನಂತರ 2024 ರ ಚುನಾವಣೆಗಳನ್ನು ಗೆಲ್ಲುವುದು ಹೇಗೆ ಎಂದು ನಾವು ಲೆಕ್ಕಾಚಾರ ಮಾಡುತ್ತೇವೆ. 2029 ರ ಚುನಾವಣೆಗೆ ನಾವು ನಮ್ಮನ್ನು ತಯಾರಿ ಮಾಡಿಕೊಳ್ಳುತ್ತಿರುವಂತೆ ತೋರುತ್ತಿದೆ. ನಾವು 2024 ಕ್ಕೆ ತಯಾರಿ ನಡೆಸಿದ್ದರೆ, ಇದು ಸಂಭವಿಸುತ್ತಿರಲಿಲ್ಲ ಎಂದು ಅವರು ಹೇಳಿದರು.
ಜನವರಿ 14 ರಂದು ಮಣಿಪುರದಿಂದ ಪ್ರಾರಂಭವಾದ ಭಾರತ ಜೋಡೋ ನ್ಯಾಯ ಯಾತ್ರೆಯು ಇಂದು, ಸೋಮವಾರ ಬಿಹಾರವನ್ನು ಪ್ರವೇಶಿಸಿತು, ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್‌ ಮಿತ್ರ ಪಕ್ಷವಾಗಿದ್ದ ಜೆಡಿಯು ವಿರೋಧ ಪಕ್ಷಗಳೊಂದಿಗೆ ಸಂಬಂಧವನ್ನು ಕಡಿದುಕೊಂಡು ಬಿಜೆಪಿಯೊಂದಿಗೆ ಕೈಜೋಡಿಸಿ ಬಿಹಾರದಲ್ಲಿ ಸರ್ಕಾರ ರಚಿಸಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಭಾರತ ಜೋಡೋ ನ್ಯಾಯ ಯಾತ್ರೆ ಬಿಹಾರವನ್ನು ಪ್ರವೇಶಿಸಿದೆ.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement