ಜಿಪಿಎಸ್‌ ಪ್ರಮಾದ : ನಡೆದುಕೊಂಡು ಹೋಗಲು ಇದ್ದ ಮರದ ಸೇತುವೆಯ ಮೇಲೆ ಕಾರಿನಲ್ಲಿ ಸಿಕ್ಕಿಹಾಕಿಕೊಂಡ ಮಹಿಳೆ…!

ಜಿಪಿಎಸ್ ತಪ್ಪು ಮಾರ್ಗದರ್ಶನ ನೀಡಿದ ನಂತರ ನಂತರ ಥಾಯ್ ಮಹಿಳೆಯೊಬ್ಬರು ಯೋಮ್ ನದಿಯ ಮೇಲಿನ ಸಣ್ಣ ಸೇತುವೆಯ ಮೇಲೆ ಕಾರಿನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿರುವ ವರದಿಯಾಗಿದೆ.
ಈ ಘಟನೆಯು ಜನವರಿ 28 ರಂದು ಸುಮಾರು 5:40 PM ಕ್ಕೆ ಸಂಭವಿಸಿದೆ, ಥಾಯ್ಲೆಂಡಿನ ಫ್ರೇ ಪ್ರಾಂತ್ಯದ ವಿಯಾಂಗ್ ಥಾಂಗ್‌ನ 38 ವರ್ಷದ ಮಹಿಳೆ ಯೋಮ್ ನದಿಯ ಮೇಲಿನ ಹಳೆಯ ತೂಗು ಸೇತುವೆಯನ್ನು ದಾಟಲು ಪ್ರಯತ್ನಿಸಿದಾಗ ಇದು ಸಂಬವಿಸಿದೆ.
ಮಹಿಳೆಯು ಮಾರ್ಗದರ್ಶನಕ್ಕಾಗಿ ತನ್ನ ಜಿಪಿಎಸ್‌ (GPS) ಅನ್ನು ಮಾತ್ರ ಅವಲಂಬಿಸಿದ್ದರು ಹಾಗೂ ಜಿಪಿಎಸ್‌ ಮಾರ್ಗದರ್ಶನದಂತೆ ತನ್ನ ಬಿಳಿ ಬಣ್ಣದ ಹೋಂಡಾ ಸೆಡಾನ್‌ನೊಂದಿಗೆ “ವಿಯಾಂಗ್ ಥಾಂಗ್ ಸೇತುವೆ” ಯನ್ನು ದಾಟಲು ಪ್ರಯತ್ನಿಸಿದರು. ದುರದೃಷ್ಟವಶಾತ್, 120 ಮೀಟರ್ ಉದ್ದದ ಸೇತುವೆ ಕಾಲ್ನಡಿಗೆಯ ಸಂಚಾರಕ್ಕೆ ಮಾತ್ರ ಸೀಮಿತವಾಗಿತ್ತು, ಇದು ವಾಹನಗಳಿಗೆ ಸೂಕ್ತವಲ್ಲ ಎಂದು ಸಾಬೀತಾಗಿದ್ದರಿಂದ ಅದನ್ನು ಕಾಲ್ನಡಿಗೆಗೆ ಸೀಮಿತಗೊಳಿಸಿದ್ದರು. ಅನಾಹುತ ಸಂಭವಿಸುವ ಮೊದಲು ಕಾರು ಸರಿಸುಮಾರು 15 ಮೀಟರ್‌ಗಳಷ್ಟು ಸೇತುವೆ ಮೇಲೆ ಮುನ್ನಡೆದಿತ್ತು ಎಂದು ಪಟ್ಟಾಯ ನ್ಯೂಸ್ ವರದಿ ಮಾಡಿದೆ, ಮುಂಭಾಗದ ಎಡ ಚಕ್ರವು ಸೇತುವೆಯ ಗ್ಯಾಪ್‌ನಲ್ಲಿ ಸಿಲುಕಿಕೊಂಡಿತು ಮತ್ತು ವಾಹನವನ್ನು ಅಲ್ಲಿಯೇ ಸಿಕ್ಕಿಹಾಕಿಕೊಳ್ಳುವಂತೆ ಮಾಡಿತು.

ಅದೃಷ್ಟವಶಾತ್, ಚಾಲಕನ ಸಂಕಟವನ್ನು ದಾರಿಹೋಕ ಮಕುನ್ ಇಂಚನ್ ನೋಡಿದರು, ಅವರು ತಕ್ಷಣ ತುರ್ತು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದರು. ಭೀಕರ ಪರಿಸ್ಥಿತಿ ಗಮನಿಸಿ, ರಕ್ಷಣಾ ತಂಡಗಳು ತಕ್ಷಣವೇ ಆಗಮಿಸಿದವು. ಮತ್ತು ಸೇತುವೆಗೆ ಹೆಚ್ಚಿನ ಹಾನಿಯಾಗದಂತೆ ಕಾರನ್ನು ಹೊರತೆಗೆಯುವ ಯೋಜನೆ ರೂಪಿಸಲು ಮುಂದಾದವು.
ಅಪರಿಚಿತ ಥಾಯ್ ಮಹಿಳಾ ಚಾಲಕರೊಂದಿಗಿನ ಸಂದರ್ಶನದಲ್ಲಿ, ಮಹಿಳೆ ನಾಂಗ್ ಮುವಾಂಗ್ ಖೈ ಜಿಲ್ಲೆಯವರು ಮತ್ತು ಸಂಗ್ ಮೆನ್‌ನಲ್ಲಿರುವ ಸ್ನೇಹಿತರನ್ನು ಭೇಟಿ ಮಾಡಲು ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಪ್ರದೇಶದ ಪರಿಚಯವಿಲ್ಲ, ಅವರು ತನ್ನ ಸ್ನೇಹಿತರು ಕಳುಹಿಸಿದ ನಿರ್ದಿಷ್ಟ ಸ್ಥಳಕ್ಕೆ ನ್ಯಾವಿಗೇಟ್ ಮಾಡಲು GPS ವ್ಯವಸ್ಥೆಯನ್ನು ಹೆಚ್ಚು ಅವಲಂಬಿಸಿದ್ದರು. ಇದು ಎಡವಟ್ಟಿಗೆ ಕಾರಣವಾಯಿತು.
ಮಹಿಳೆ ಈ ಪ್ರದೇಶಕ್ಕೆ ಹಿಂದೆಂದೂ ಹೋಗಿರಲಿಲ್ಲ ಮತ್ತು ಜಿಪಿಎಸ್ ಸೂಚನೆಗಳನ್ನು ಮಾತ್ರ ಅವಲಂಬಿಸಿದ್ದರು ಎಂದು ಹಂಚಿಕೊಂಡಿದ್ದಾರೆ. ಆದಾಗ್ಯೂ, ವಿಯಾಂಗ್ ಥಾಂಗ್ ಸೇತುವೆಯನ್ನು ದಾಟಲು GPS ಮಾರ್ಗದರ್ಶನ ನೀಡಿತು ಎಂದು ಮಹಿಳೆ ಹೇಳಿಕೊಂಡಿದ್ದಾರೆ, ಸ್ಥಳದಲ್ಲಿ ಯಾವುದೇ ನಿರ್ಬಂಧಗಳಿರುವ ಬಗ್ಗೆ ತಿಳಿದಿರಲಿಲ್ಲವಂತೆ.

“ನಾನು ಜಿಪಿಎಸ್ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೆ. ಹೀಗಾಗಿ ಸುತ್ತಲೂ ನೋಡಲಿಲ್ಲ. ಸೇತುವೆಯು ಗಟ್ಟಿಮುಟ್ಟಾಗಿದೆ ಮತ್ತು ಇತರರು ಬಳಸಬಹುದೆಂದು ನಾನು ಭಾವಿಸಿದೆ. ನಾನು ಸಿಲುಕಿಕೊಂಡಾಗ, ನಾನು ಯೋಮ್ ನದಿಯ ಮಧ್ಯದಲ್ಲಿದ್ದ ಕಾರಣ ನಾನು ತುಂಬಾ ಹೆದರಿಕೊಂಡಿದ್ದೆ. ನಾನು ಕಾರು ನದಿಗೆ ಬೀಳಬಹುದು ಎಂದು ಹೆದರಿದ್ದೆ. ಆದ್ದರಿಂದ ನಾನು ಸಹಾಯ ಕೇಳಳು ಕಾರಿನಿಂದ ಇಳಿದೆ ಎಂದು ಮಹಿಳೆ ಹೇಳಿದ್ದಾರೆ.
ವರದಿಗಳ ಪ್ರಕಾರ, 120 ಮೀಟರ್ ಉದ್ದದ ಸೇತುವೆಯನ್ನು ಪಾದಚಾರಿಗಳಿಗಾಗಿ ಮಾತ್ರ ಬಹಳ ಬಹಳ ಮೊದಲೇ ನಿಗದಿ ಮಾಡಲಾಗಿದೆ. ಅದರ ಕಿರಿದಾದ ಮೇಲ್ಮೈಯಿಂದಾಗಿ ಅದು ದೊಡ್ಡ ವಾಹನಗಳಿಗೆ ಅನರ್ಹವೆಂದು ಪರಿಗಣಿಸಲಾಗಿದೆ.
ಜಾಹೀರಾತು
ಕಾರು ಸೇತುವೆಯ ಮೇಲೆ ಸರಿಸುಮಾರು 15 ಮೀಟರ್ ಮುಂದೆ ಇತ್ತು, ಅದರ ಮುಂಭಾಗದ ಎಡ ಚಕ್ರವು ಗ್ಯಾಪ್‌ನಲ್ಲಿ ಸಿಲುಕಿಕೊಂಡಿತ್ತು. ಅದೃಷ್ಟವಶಾತ್, ರಕ್ಷಣಾ ತಂಡದವರು ಎರಡು ಟ್ರಾಕ್ಟರುಗಳನ್ನು ಬಳಸಿ, ಯಾವುದೇ ಹಾನಿಯಾಗದಂತೆ ಕಾರನ್ನು ಸುರಕ್ಷಿತವಾಗಿ ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement