ಫಾಸ್ಟ್‌ ಟ್ಯಾಗ್‌: ಕೆವೈಸಿ ಪೂರ್ಣಕ್ಕೆ ಗಡುವು ವಿಸ್ತರಣೆ

ನವದೆಹಲಿ: ಬ್ಯಾಂಕ್‌ ಖಾತೆಯಲ್ಲಿ ಹಣ ಹೊಂದಿದ್ದರೂ ಕೆವೈಸಿ ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲು ನೀಡಿದ್ದ ಗಡುವನ್ನು ಫೆಬ್ರುವರಿ 29ರ ವರೆಗೆ ವಿಸ್ತರಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ.
ವಿಸ್ತರಣೆಯ ಮೊದಲು, ಫಾಸ್ಟ್ಯಾಗ್‌ಗಳಿಗಾಗಿ KYC ಪೂರ್ಣಗೊಳಿಸಲು ಜನವರಿ 31 ಕೊನೆಯ ದಿನಾಂಕವಾಗಿತ್ತು. ಎನ್‌ಎಚ್‌ಎಐ ಅಡಿಯಲ್ಲಿರುವ ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್, ಫಾಸ್ಟ್‌ಟ್ಯಾಗ್ ಕೆವೈಸಿ ಅನುಸರಣೆಯಿಂದ ಇನ್ನೂ ಹೊರಗಿರುವ ಗ್ರಾಹಕರ ಸಂಖ್ಯೆಯನ್ನು ನಿರ್ಣಯಿಸುತ್ತಿದೆ

. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆದೇಶ ಉಲ್ಲಂಘಿಸಿ ನಿರ್ದಿಷ್ಟ ವಾಹನಕ್ಕೆ ಬಹು ಫಾಸ್ಟ್ಯಾಗ್‌ಗಳನ್ನು ಬಳಕೆ ಮಾಡಲಾಗುತ್ತಿತ್ತು. ಅಲ್ಲದೇ, ಕೆವೈಸಿ ಇಲ್ಲದೆಯೇ ಫಾಸ್ಟ್‌ ಟ್ಯಾಗ್‌ಗಳನ್ನು ನೀಡಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಪ್ರಾಧಿಕಾರವು ಈ ಕ್ರಮ ಕೈಗೊಂಡಿದೆ. ಆದಾಗ್ಯೂ, ಮೂಲಗಳ ಪ್ರಕಾರ, ಸುಮಾರು 1.3 ಕೋಟಿ ಅಂತಹ ಟ್ಯಾಗ್‌ಗಳಲ್ಲಿ ಇದುವರೆಗೆ ಏಳು ಲಕ್ಷ ಮಲ್ಟಿಪಲ್ ಟ್ಯಾಗ್‌ಗಳನ್ನು ಮಾತ್ರ ಸರೆಂಡರ್ ಮಾಡಲಾಗಿದೆ.

ದೇಶದಲ್ಲಿ ಕೆವೈಸಿ ಪೂರ್ಣಗೊಳಿಸದ ಸುಮಾರು 1.3 ಕೋಟಿ ಫಾಸ್ಟ್ಯಾಗ್‌ಗಳಲ್ಲಿ ಜನವರಿ 31ರವರೆಗೆ ನೀಡಿದ್ದ ಗಡುವಿನೊಳಗೆ ಕೇವಲ 7 ಲಕ್ಷ ಕೆವೈಸಿಗಳಷ್ಟೇ ಪೂರ್ಣಗೊಂಡಿವೆ. ಹಾಗಾಗಿ, ಅವಧಿ ವಿಸ್ತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement