ಡಾ ಸರ್ವಪಲ್ಲಿ ರಾಧಾಕೃಷ್ಣನ್‌ ರಿಂದ ಎಲ್‌.ಕೆ. ಅಡ್ವಾಣಿ ವರೆಗೆ: 1954 ರಿಂದ 2024ರ ವರೆಗಿನ ʼಭಾರತ ರತ್ನʼ ಪ್ರಶಸ್ತಿ ಪುರಸ್ಕೃತರ ಪಟ್ಟಿ

ನವದೆಹಲಿ : ಬಿಜೆಪಿ ದಿಗ್ಗಜ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು 1954 ರಲ್ಲಿ ಸ್ಥಾಪಿಸಲಾಯಿತು. ಮಾನವ ಪ್ರಯತ್ನದ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಣಿಯ ಅಸಾಧಾರಣ ಸೇವೆ/ಕಾರ್ಯನಿರ್ವಹಣೆಯನ್ನು ಗುರುತಿಸಿ ಇದನ್ನು ನೀಡಲಾಗುತ್ತದೆ. 1954 ರಿಂದ 2024 ರವರೆಗೆ ಡಾ ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಂದ ಎಲ್‌.ಕೆ. ಅಡ್ವಾಣಿಯ ವರೆಗೆ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಇಲ್ಲಿದೆ.
ಚಕ್ರವರ್ತಿ ರಾಜಗೋಪಾಲಾಚಾರಿ (1878-1972)-ಭಾರತ ರತ್ನ-1954
ಡಾ. ಸರ್ವಪಲ್ಲಿ ರಾಧಾಕೃಷ್ಣನ್ (1888-1975)-ಭಾರತ ರತ್ನ-1954
ಡಾ. ಸಿ.ವಿ ರಾಮನ್ (1888-1970)-ಭಾರತ ರತ್ನ-1954
ಡಾ. ಭಗವಾನ ದಾಸ್ (1869-1958)-ಭಾರತ ರತ್ನ- 1955
ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯ (1861-1962)-ಭಾರತ ರತ್ನ- 1955
ಪಂ. ಜವಾಹರಲಾಲ್ ನೆಹರು (1889 -1964)-ಭಾರತ ರತ್ನ-1955
ಪಂ. ಗೋವಿಂದ ಬಲ್ಲಭ್ ಪಂತ್ (1887-1961)-ಭಾರತ ರತ್ನ-1957
ಡಾ. ಧೋಂಡೋ ಕೇಶವ ಕರ್ವೆ (1858-1962)-ಭಾರತ ರತ್ನ-1958
ಡಾ. ಬಿಧನ್ ಚಂದ್ರ ರಾಯ್ (1882-1962)-ಭಾರತ ರತ್ನ-1961
ಪುರುಷೋತ್ತಮ್ ದಾಸ ಟಂಡನ್ (1882-1962)-ಭಾರತ ರತ್ನ-1961
ಡಾ. ರಾಜೇಂದ್ರ ಪ್ರಸಾದ (1884-1963)-ಭಾರತ ರತ್ನ- 1962
ಡಾ. ಜಾಕಿರ್ ಹುಸೇನ್ (1897-1969) -ಭಾರತ ರತ್ನ-1963
ಡಾ. ಪಾಂಡುರಂಗವಾಮನ್ ಕೇನ್ (1880-1972)-ಭಾರತ ರತ್ನ-1963

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

ಲಾಲ ಬಹದ್ದೂರ ಶಾಸ್ತ್ರಿ (ಮರಣೋತ್ತರ) (1904-1966)-ಭಾರತ ರತ್ನ-1966
ಇಂದಿರಾ ಗಾಂಧಿ (1917-1984)-ಭಾರತ ರತ್ನ-1971
ವಿ.ವಿ. ಗಿರಿ (1894-1980)-ಭಾರತ ರತ್ನ- 1975
ಕುಮಾರಸ್ವಾಮಿ ಕಾಮರಾಜ (ಮರಣೋತ್ತರ) (1903-1975)- 1976
ಮದರ್ ತೆರೇಸಾ (ಮದರ್ ತೆರೇಸಾ) (1910- 1997)-ಭಾರತ ರತ್ನ-1980
ಆಚಾರ್ಯ ವಿನೋಬಾಭಾವೆ (ಮರಣೋತ್ತರ) (1895-1982)-ಭಾರತ ರತ್ನ-1983
ಖಾನ್ ಅಬ್ದುಲ್ ಗಫಾರ್ ಖಾನ್ (1890-1988)-ಭಾರತ ರತ್ನ- 1987
ಎಂ.ಜಿ. ರಾಮಚಂದ್ರನ್ (ಮರಣೋತ್ತರ) (1917-1987)-ಭಾರತ ರತ್ನ- 1988
ಡಾ.ಬಿ.ಆರ್‌. ಅಂಬೇಡ್ಕರ್ (ಮರಣೋತ್ತರ) (1891-1956)-ಭಾರತ ರತ್ನ- 1990
ಡಾ. ನೆಲ್ಸನ್ ಮಂಡೇಲಾ (1918-2013)-ಭಾರತ ರತ್ನ-1990
ರಾಜೀವ್ ಗಾಂಧಿ (ಮರಣೋತ್ತರ) (1944-1991)-ಭಾರತ ರತ್ನ-1991
ಸರ್ದಾರ್ ವಲ್ಲಭಭಾಯಿ ಪಟೇಲ್ (ಮರಣೋತ್ತರ) (1875-1950)-ಭಾರತ ರತ್ನ-1991
ಮೊರಾರ್ಜಿ ದೇಸಾಯಿ (1896-1995)-ಭಾರತ ರತ್ನ-1991

ಮೌಲಾನಾ ಅಬುಲ್ ಕಲಾಂ ಆಜಾದ್ (ಮರಣೋತ್ತರ) (1888-1958)-ಭಾರತ ರತ್ನ-1992
ಜೆ.ಆರ್‌.ಡಿ. ಟಾಟಾ (1904-1993)-ಭಾರತ ರತ್ನ-1992
ಸತ್ಯಜಿತ್ ರೇ (1922-1992)-ಭಾರತ ರತ್ನ-1992
ಗುಲ್ಜಾರಿಲಾಲ್ ನಂದಾ (1898-1998)-ಭಾರತ ರತ್ನ-1997
ಅರುಣಾ ಅಸಫ್ ಅಲಿ (ಮರಣೋತ್ತರ) (1909-1996)-ಭಾರತ ರತ್ನ-1997
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ (1931-2015)-ಭಾರತ ರತ್ನ-1997
ಎಂ.ಎಸ್‌. ಸುಬ್ಬುಲಕ್ಷ್ಮಿ (1916- 2005)-ಭಾರತ ರತ್ನ- 1998
ಚಿದಂಬರಂ ಸುಬ್ರಮಣ್ಯಂ (1910-2000)-ಭಾರತ ರತ್ನ- 1998
ಜಯಪ್ರಕಾಶ ನಾರಾಯಣ (ಮರಣೋತ್ತರ) (1902-1979)- 1999
ಪ್ರೊಫೆಸರ್ ಅಮರ್ತ್ಯ ಸೇನ್ (b-1933)–ಭಾರತ ರತ್ನ- 1999
ಲೋಕಪ್ರಿಯಾ ಗೋಪಿನಾಥ ಬೊರ್ಡೊಲೊಯ್ (ಮರಣೋತ್ತರ) (1890-1950)-ಭಾರತ ರತ್ನ- 1999
ಪಂಡಿತ್ ರವಿಶಂಕರ್ (1920-2012)-ಭಾರತ ರತ್ನ- 1999
ಲತಾ ದೀನಾನಾಥ್ ಮಂಗೇಶ್ಕರ್ (b-1929)-ಭಾರತ ರತ್ನ-2001
ಉಸ್ತಾದ್ ಬಿಸ್ಮಿಲ್ಲಾ ಖಾನ್ (1916-2006)-ಭಾರತ ರತ್ನ-2001

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

ಪಂಡಿತ್ ಭೀಮಸೇನ್ ಜೋಶಿ (1922-2011)-ಭಾರತ ರತ್ನ-2009
ಪ್ರೊ.ಸಿ.ಎನ್.ಆರ್.ರಾವ್ (b-1934)-ಭಾರತ ರತ್ನ-2014
ಸಚಿನ್ ರಮೇಶ್ ತೆಂಡೂಲ್ಕರ್ (b-1973)-ಭಾರತ ರತ್ನ-2014
ಅಟಲ್ ಬಿಹಾರಿ ವಾಜಪೇಯಿ (1924-2018)-ಭಾರತ ರತ್ನ-2015
ಪಂಡಿತ್ ಮದನಮೋಹನ ಮಾಳವೀಯ (ಮರಣೋತ್ತರ)(1861-1946)-ಭಾರತ ರತ್ನ-2015
ನಾನಾಜಿದೇಶಮುಖ್ (ಮರಣೋತ್ತರ)(1916-2010)-ಭಾರತ ರತ್ನ-2019
ಡಾ. ಭೂಪೇಂದ್ರ ಕುಮಾರ್ ಹಜಾರಿಕಾ (ಮರಣೋತ್ತರ)(1926-2011)-ಭಾರತ ರತ್ನ-2019
ಪ್ರಣಬ್ ಮುಖರ್ಜಿ (b-1935)-ಭಾರತ ರತ್ನ-2019
ಕರ್ಪೂರಿ ಠಾಕೂರ್ (ಮರಣೋತ್ತರ) (1924-1988)-ಭಾರತ ರತ್ನ-2024
ಲಾಲ ಕೃಷ್ಣ ಅಡ್ವಾಣಿ (b-1927)-ಭಾರತ ರತ್ನ- 2024

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement