ಶಿರಸಿ : ನರೆಬೈಲ್ ಸೋಮೇಶ್ವರ ದೇವಾಲಯದ ಶಿವಲಿಂಗದ ಮೇಲೆ ಗೀಚಿ ಕಿಡಿಗೇಡಿಗಳಿಂದ ವಿಕೃತಿ

ಶಿರಸಿ: ದೇವಸ್ಥಾನದ ಒಳ ಪ್ರವೇಶಿಸಿದ ಕಿಡಿಗೇಡಿಗಳು ದೇವರ ಮೂರ್ತಿಯ ಮೇಲೆ ಸುಣ್ಣದ ಪೀಸ್‌ನಿಂದ ಬರೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೆಬೈಲ್ ಗ್ರಾಮದ ಸೋಮೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಸೋಮೇಶ್ವರ ದೇವಸ್ಥಾನದ ಶಿವಲಿಂಗದ ಮೇಲೆ ಶಿವಲಿಂಗದ ಮೇಲೆ ಜೆಸಿಸಿ 1026 ಎಂದು   ಕಿಡಿಗೇಡಿಗಳು ಇಂಗ್ಲಿಷ್‌ನಲ್ಲಿ ಬರೆದಂತೆ ತೋರುತ್ತದೆ.. ದೇವಾಲಯದಲ್ಲಿ ಯಾವುದೇ ಕಳ್ಳತನ ನಡೆದಿಲ್ಲ. ಹೀಗಾಗಿ ಯಾವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ದೇವಾಲಯದ ಅರ್ಚಕರು ಭಾನುವಾರ ಬೆಳಗ್ಗೆ 9ರ ಸುಮಾರಿಗೆ ದೈನಂದಿನ ಪೂಜೆಗೆಂದು ದೇವಸ್ಥಾನಕ್ಕೆ ಬಂದಾಗ ಈ ಘಟನೆ ಈ ಕೃತ್ಯ ಗೊತ್ತಾಗಿದೆ. ಈ ದೇವಾಲಯದ ಬಾಗಿಲೂ ಸಹ ಭದ್ರವಾಗಿರಲಿಲ್ಲ. ಚಾವಿ ಹಾಕಿದ್ದರೂ ಬಾಗಿಲು ದೂಡಿದರೆ ಅದು ತೆದುಕೊಳ್ಳುವಂತಿತ್ತು ಎಂದು ಹೇಳಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಶಿರಸಿ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement