ಜ್ಞಾನವಾಪಿ ಮಸೀದಿ ಮುಚ್ಚಿದ ನೆಲಮಾಳಿಗೆಗಳ ಎಎಸ್ಐ ಸಮೀಕ್ಷೆಗೆ ಅವಕಾಶ ನೀಡಿ : ವಾರಾಣಸಿ ನ್ಯಾಯಾಲಯಕ್ಕೆ ಹಿಂದೂ ದಾವೆದಾರರ ಮನವಿ

ವಾರಾಣಸಿ : ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಹಾಗೂ ಈ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಸಮೀಕ್ಷೆ ವ್ಯಾಪ್ತಿಗೆ ಒಳಪಡದ ನೆಲಮಾಳಿಗೆಗಳ ಸಮೀಕ್ಷೆಯನ್ನು ನಡೆಸಬೇಕೆಂದು ಕೋರಿ ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
2022ರ ಶೃಂಗಾರ ಗೌರಿ ಪೂಜೆ ದಾವೆಯಲ್ಲಿ ಮೊದಲ ದಾವೆದಾರೆಯಾಗಿರುವ ರಾಖಿ ಸಿಂಗ್ ಈ ಕುರಿತ ಅರ್ಜಿ ಸಲ್ಲಿಸಿದ್ದಾರೆ. ಜ್ಞಾನವಾಪಿ ಆವರಣದ ಧಾರ್ಮಿಕ ಸ್ವರೂಪ ಸಾಬೀತುಪಡಿಸುವುದಕ್ಕಾಗಿ ಈ ನೆಲಮಾಳಿಗೆಗಳ ಸಮೀಕ್ಷೆ ಮಾಡುವುದು ಅಗತ್ಯ ಎಂದು ಅರ್ಜಿದಾರರು ವಾದಿಸಿದ್ದಾರೆ.

ಆವರಣದ ಉತ್ತರ ಭಾಗದಲ್ಲಿ ನೆಲಮಾಳಿಗೆಗಳಾದ ಎನ್ 1 ರಿಂದ ಎನ್ 5 ಮತ್ತು ದಕ್ಷಿಣ ಭಾಗದಲ್ಲಿ ನೆಲಮಾಳಿಗೆಗಳಾದ ಎಸ್ 1ರಿಂದ ಎಸ್ 3 ಅನ್ನು ಸಮೀಕ್ಷೆ ಮಾಡಬೇಕಾಗಿದೆ. ನೆಲಮಾಳಿಗೆಗಳಾದ ಎನ್ 1 ಮತ್ತು ಎಸ್ 1ನ ಪ್ರವೇಶದ್ವಾರಗಳು ಸಂಪೂರ್ಣ ನಿರ್ಬಂಧಿತವಾಗಿದ್ದು ಅವುಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿಂದೆಯೂ ಎಎಸ್‌ಐ ಸಮೀಕ್ಷೆ ಮಾಡಲು ಸಾಧ್ಯವಾಗಿರಲಿಲ್ಲ.
ಪ್ರವೇಶದ್ವಾರವನ್ನು ಇಟ್ಟಿಗೆ ಮತ್ತು ಕಲ್ಲಿನಿಂದ ಮುಚ್ಚಲಾಗಿದ್ದು ಕಟ್ಟಡದ ಭಾರ ಅದನ್ನು ಆಧರಿಸಿಲ್ಲವಾದ್ದರಿಂದ ಎಎಸ್‌ಐ ತಜ್ಞರು ತಮ್ಮ ಪರಿಣತಿ ಬಳಸಿ ಅದನ್ನು ತೆಗೆದರೆ ಮಸೀದಿಯ ಕಟ್ಟಡಕ್ಕೆ ಹಾನಿಯಾಗುವುದಿಲ್ಲ. ಕಟ್ಟಡಕ್ಕೆ ಹಾನಿಯಾಗದಂತೆ ಪ್ರವೇಶದ್ವಾರ ತೆರೆದು ನೆಲಮಾಳಿಗೆ ಸಮೀಕ್ಷೆ ನಡೆಸಲು ಎಎಸ್‌ಐ ಆಧುನಿಕ ತಂತ್ರಜ್ಞಾನ ಬಳಸಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ...?

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement