ಲೋಕಸಭೆ ಚುನಾವಣೆ : ಟೈಮ್ಸ್​ ನೌ-ಇಟಿಜಿ ಸಮೀಕ್ಷೆ ವರದಿ ಪ್ರಕಟ; ಕಾಂಗ್ರೆಸ್ಸಿಗೆ ಕಳೆದ ಚುನಾವಣೆಗಿಂತಲೂ ಕಡಿಮೆ ಸ್ಥಾನ ಎಂದ ಸಮೀಕ್ಷೆ; ಬಿಜೆಪಿಗೆ ಎಷ್ಟು ಸ್ಥಾನ..?

ನವದೆಹಲಿ: ಈಗ ದೇಶದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ಈಗ ಮತ್ತೊಂದು ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಈಗಲೇ ದೇಶದಲ್ಲಿ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 358-398 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಟೈಮ್ಸ್​ ನೌ ಸುದ್ದಿ ವಾಹಿನಿ- ಇಟಿಜಿ ನಡೆಸಿರುವ ಸಮೀಕ್ಷೆಯಲ್ಲಿ ಒಟ್ಟು 543 ಕ್ಷೇತ್ರಗಳಲ್ಲಿ … Continued

ಜ್ಞಾನವಾಪಿ ಮಸೀದಿ ಮುಚ್ಚಿದ ನೆಲಮಾಳಿಗೆಗಳ ಎಎಸ್ಐ ಸಮೀಕ್ಷೆಗೆ ಅವಕಾಶ ನೀಡಿ : ವಾರಾಣಸಿ ನ್ಯಾಯಾಲಯಕ್ಕೆ ಹಿಂದೂ ದಾವೆದಾರರ ಮನವಿ

ವಾರಾಣಸಿ : ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಹಾಗೂ ಈ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಸಮೀಕ್ಷೆ ವ್ಯಾಪ್ತಿಗೆ ಒಳಪಡದ ನೆಲಮಾಳಿಗೆಗಳ ಸಮೀಕ್ಷೆಯನ್ನು ನಡೆಸಬೇಕೆಂದು ಕೋರಿ ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. 2022ರ ಶೃಂಗಾರ ಗೌರಿ ಪೂಜೆ ದಾವೆಯಲ್ಲಿ ಮೊದಲ ದಾವೆದಾರೆಯಾಗಿರುವ ರಾಖಿ ಸಿಂಗ್ ಈ ಕುರಿತ ಅರ್ಜಿ ಸಲ್ಲಿಸಿದ್ದಾರೆ. ಜ್ಞಾನವಾಪಿ ಆವರಣದ … Continued

ನ್ಯಾಯಾಲಯಕ್ಕೆ ವಾರಾಣಸಿ ಜ್ಞಾನವಾಪಿ ಮಸೀದಿ ಸರ್ವೆ ವರದಿ ಸಲ್ಲಿಸಿದ ಪುರಾತತ್ವ ಇಲಾಖೆ

ನವದೆಹಲಿ : ಭಾರತೀಯ ಪುರಾತತ್ವ ಇಲಾಖೆಯು ಉತ್ತರ ಪ್ರದೇಶದ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿ ‘ವೈಜ್ಞಾನಿಕ ಸಮೀಕ್ಷೆ’ ವರದಿಯನ್ನು ಸಲ್ಲಿಸಿದೆ. ಸೋಮವಾರ ಮಧ್ಯಾಹ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಯಿತು. ಇದನ್ನು ಸಾರ್ವಜನಿಕಗೊಳಿಸಲಾಗುತ್ತದೆಯೇ ಅಥವಾ ಅರ್ಜಿದಾರರಾದ ಹಿಂದೂ ಪಕ್ಷದೊಂದಿಗೆ ಹಂಚಿಕೊಳ್ಳಲಾಗುತ್ತದೆಯೇ ಅಥವಾ ಮುಸ್ಲಿಂ ಪಕ್ಷದೊಂದಿಗೆ ಹಂಚಿಕೊಳ್ಳಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ. … Continued

ಮಥುರಾ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣ: ಶಾಹಿ ಈದ್ಗಾ ಸಂಕೀರ್ಣದ ಸರ್ವೆ ನಡೆಸಲು ಅಲಹಾಬಾದ್ ಹೈಕೋರ್ಟ್ ಅನುಮತಿ

ಪ್ರಯಾಗರಾಜ್‌ : ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ಅಲಹಾಬಾದ್ ಹೈಕೋರ್ಟ್ ಗುರುವಾರ ಮಥುರಾದ ಶಾಹಿ ಈದ್ಗಾ ಸಂಕೀರ್ಣದ ಸರ್ವೆ ನಡೆಸಲು ಅನುಮೋದನೆ ನೀಡಿದೆ. ಹಿಂದೂಪರ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿರುವ ಅಲಹಾಬಾದ್ ಹೈಕೋರ್ಟ್ ವಿವಾದಿತ ಶಾಹಿ ಈದ್ಗಾ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ. ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ … Continued

ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ನಂ.1 : ಅನುಮೋದನೆ ರೇಟಿಂಗ್‌ ಎಷ್ಟು ಗೊತ್ತಾ…?

ಅಮೆರಿಕ ಮೂಲದ ಸಲಹಾ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು 76% ರಷ್ಟು ಅನುಮೋದನೆ ರೇಟಿಂಗ್‌ ಪಡೆದ ನಂತರ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಭಾರತದ ಪ್ರಧಾನ ಮಂತ್ರಿಯ ಅನುಮೋದನೆಯ ರೇಟಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಿಶ್ವದ ಜನಪ್ರಿಯ ನಾಯಕನಿಗಿಂತ 10% ಕ್ಕಿಂತ ಹೆಚ್ಚು ಅಂಕಗಳಿಂದ ಮುಂದಿದ್ದಾರೆ. … Continued

ಅತ್ಯಂತ ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗೆ ಮತ್ತೆ ಅಗ್ರಸ್ಥಾನ: ಜಾಗತಿಕ ನಾಯಕರ ಪಟ್ಟಿ ಇಲ್ಲಿದೆ

ನವದೆಹಲಿ: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಜಾಗತಿಕ ನಾಯಕರ ಪ್ರಮುಖ ನಿರ್ಧಾರಗಳನ್ನು ಟ್ರ್ಯಾಕ್ ಮಾಡುವ ಸಂಸ್ಥೆಯಾದ ಮಾರ್ನಿಂಗ್ ಕನ್ಸಲ್ಟ್ ಈ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟರ್‌ನಲ್ಲಿ … Continued

ಮಹಾತ್ಮಾ ಗಾಂಧಿ, ಭಗತ್ ಸಿಂಗ್ ಭಾರತೀಯ ವಿದ್ಯಾರ್ಥಿಗಳ ನೆಚ್ಚಿನ ರಾಷ್ಟ್ರನಾಯಕರು: ಸಮೀಕ್ಷೆ

ನವದೆಹಲಿ: ಈ ಆಗಸ್ಟ್ 15ರಂದು ಭಾರತವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ 7೬ನೇ ವರ್ಷಕ್ಕೆ ಕಾಲಿಟ್ಟಿತು. ಸಂಭ್ರಮದ ಆಚರಣೆಗಳಿಂದ ತುಂಬಿದ ಈ ದಿನವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಧೀರ ಹಾಗೂ ತ್ಯಾಗದ ಸಂಕೇತವಾಗಿ ಗುರುತಿಸಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಸಂದರ್ಭದಲ್ಲಿ, 5.5 ಕೋಟಿಗೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಬಳಕೆದಾರರ ನೆಲೆಯನ್ನು ಹೊಂದಿರುವ ಬ್ರೈನ್ಲಿ ಆನ್‌ಲೈನ್ ಕಲಿಕಾ ವೇದಿಕೆಯು … Continued

59% ಭಾರತೀಯ ಉದ್ಯೋಗದಾತರು ರಿಮೋಟ್‌ ವರ್ಕಿಂಗ್‌ ಪರ ಇಲ್ಲ: ಸಮೀಕ್ಷೆಯಲ್ಲಿ ಬೆಳಕಿಗೆ

ನವ ದೆಹಲಿ: ಸಾಂಕ್ರಾಮಿಕ ರೋಗವು ಕಚೇರಿಯಿಂದ ಕೆಲಸ ಮಾಡುವುದಕ್ಕೆ ಅಡ್ಡಿಪಡಿಸುತ್ತಿದ್ದರೂ ಭಾರತದಲ್ಲಿ ಶೇ 59 ರಷ್ಟು ಉದ್ಯೋಗದಾತರು ದೂರಸ್ಥ (ರಿಮೋಟ್‌ ವರ್ಕಿಂಗ್‌) ಕೆಲಸದ ಪರ ಇಲ್ಲ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಜಾಬ್ ಸೈಟ್ ನಡೆಸಿದ ಸಮೀಕ್ಷೆಯ ಪ್ರಕಾರ, 67 ಪ್ರತಿಶತದಷ್ಟು ದೊಡ್ಡದಾದ ಮತ್ತು 70 ಪ್ರತಿಶತದಷ್ಟು ಮಧ್ಯಮ ಗಾತ್ರದ ಭಾರತೀಯ ಸಂಸ್ಥೆಗಳು ತಮ್ಮ ಜಾಗತಿಕ … Continued