ಲೋಕಸಭೆ ಚುನಾವಣೆ : ಟೈಮ್ಸ್​ ನೌ-ಇಟಿಜಿ ಸಮೀಕ್ಷೆ ವರದಿ ಪ್ರಕಟ; ಕಾಂಗ್ರೆಸ್ಸಿಗೆ ಕಳೆದ ಚುನಾವಣೆಗಿಂತಲೂ ಕಡಿಮೆ ಸ್ಥಾನ ಎಂದ ಸಮೀಕ್ಷೆ; ಬಿಜೆಪಿಗೆ ಎಷ್ಟು ಸ್ಥಾನ..?

ನವದೆಹಲಿ: ಈಗ ದೇಶದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ಈಗ ಮತ್ತೊಂದು ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಈಗಲೇ ದೇಶದಲ್ಲಿ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 358-398 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಟೈಮ್ಸ್​ ನೌ ಸುದ್ದಿ ವಾಹಿನಿ- ಇಟಿಜಿ ನಡೆಸಿರುವ ಸಮೀಕ್ಷೆಯಲ್ಲಿ ಒಟ್ಟು 543 ಕ್ಷೇತ್ರಗಳಲ್ಲಿ ಎನ್​ಡಿಎ ಮೈತ್ರಿಕೂಟ 358-398 ಸ್ಥಾನಗಳು, ವಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟಕ್ಕೆ 110-130 ಸ್ಥಾನಗಳು, , ವೈಎಸ್‌ಆರ್‌ಸಿಪಿ 21-22, ಬಿಜೆಡಿ 10-11, ಇತರರು 11-15 ಸ್ಥಾನ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
2019ರ ಚುನಾವಣೆಯಲ್ಲಿ ಎನ್‌ಡಿಎ 303, ಇಂಡಿಯಾ (INDIA) ಒಕ್ಕೂಟ 116, ಇತರರು 44 ಸ್ಥಾನವನ್ನು ಗೆದ್ದಿದ್ದವು.

ಕರ್ನಾಟಕದ ಬಗ್ಗೆ ಸಮೀಕ್ಷೆ ಏನು ಹೇಳುತ್ತದೆ..?
ಬಿಜೆಪಿ 21-23, ಕಾಂಗ್ರೆಸ್‌ 4-6, ಜೆಡಿಎಸ್‌ 1-2 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನವನ್ನು ಗೆದ್ದಿತ್ತು. ಬೆಂಗಳೂರು ಗ್ರಾಮಾಂತರದಿಂದ ಡಿಕೆ ಸುರೇಶ, ಹಾಸನದಿಂದ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ, ಮಂಡ್ಯದಿಂದ ಸುಮಲತಾ ಅಂಬರೀಷ ಗೆಲುವು ಸಾಧಿಸಿದ್ದರು.
ಟೈಮ್ಸ್​ ನೌ ಸುದ್ದಿ ವಾಹಿನಿ- ಇಟಿಜಿ ಪ್ರಕಸಿರುವ ಸಮೀಕ್ಷೆ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಎನ್‌ಡಿಎ 20-24, ಟಿಎಂಸಿ 17-21, ಇಂಡಿಯಾ 0-2, ತಮಿಳುನಾಡಿನಲ್ಲಿ ಇಂಡಿಯಾ ಒಕ್ಕೂಟದಲ್ಲಿ 29-35, ಮಹಾರಾಷ್ಟ್ರದಲ್ಲಿ ಎನ್‌ಡಿಎ 34-38 ಇಂಡಿಯಾ ಒಕ್ಕೂಟ 9-13, ಬಿಜೆಪಿ 2-6, ಎಐಎಡಿಎಂಕೆ 1-3, ಆಂಧ್ರಪ್ರದೇಶ ವೈಎಸ್‌ಆರ್‌ ಕಾಂಗ್ರೆಸ್‌ 21-22, ಟಿಡಿಪಿ-ಜನಸೇನಾ 3-4, ಮಧ್ಯಪ್ರದೇಶ-ಬಿಜೆಪಿ-28-29, ಇಂಡಿಯಾ 0-1, ರಾಜಸ್ಥಾನ-ಬಿಜೆಪಿ 20-24, ಇಂಡಿಯಾ 0-1, ಬಿಹಾರ-ಎನ್‌ಡಿಎ 34-39, ಇಂಡಿಯಾ 0-2, ಜಾರ್ಖಂಡ್‌-ಎನ್‌ಡಿಎ 12-14, ಇಂಡಿಯಾ 0-2, ಒಡಿಶಾ-ಬಿಜೆಪಿ 10-11, ಬಿಜೆಡಿ 10-11, ಇಂಡಿಯಾ 0-1 ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಲಾಗಿದೆ. ಆದರೆ, ವಿಪಕ್ಷ ಕಾಂಗ್ರೆಸ್​ ಕಳೆದ ಸಲಕ್ಕಿಂತ ಕಡಿಮೆ ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement