ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕ ಸಿಡಿಸಿ ಬ್ರಾಡ್ಮನ್, ಕೊಹ್ಲಿ ಹಿಂದಿಕ್ಕಿದ ಕೇನ್ ವಿಲಿಯಮ್ಸನ್‌ : ಟೆಸ್ಟ್ ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿ..

ಮೌಂಟ್‌ ಮೌಂಗನುಯಿ : ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌ ಭಾನುವಾರ ಮೌಂಟ್‌ ಮೌಂಗನುಯಿ ಬೇ ಓವಲ್‌ನಲ್ಲಿ ಕಿವೀಸ್‌ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ನ 1ನೇ ದಿನದಂದು 30ನೇ ಟೆಸ್ಟ್‌ ಶತಕ ಸಿಡಿಸಿದ್ದಾರೆ. ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಹಾಗೂ ಕ್ರಿಕೆಟ್‌ ದಂತಕತೆ ಸರ್‌ ಡಾನ್ ಬ್ರಾಡ್‌ಮನ್ ಅವರನ್ನು ಹಿಂದಿಕ್ಕಿದ್ದಾರೆ.
ವಿಲಿಯಮ್ಸನ್ ಅವರು ರಚಿನ್ ರವೀಂದ್ರ ಅವರೊಂದಿಗೆ ಸೇರಿ 1 ನೇ ದಿನದ ಆಟದ ಮುಕ್ತಾಯದಲ್ಲಿ ನ್ಯೂಜಿಲ್ಯಾಂಡ್‌ ತಂಡವು 258/2 ರನ್‌ ಗಳಿಸಲು ಸಹಾಯ ಮಾಡಿದರು. ವಿಲಿಯಮ್ಸನ್ ಅವರು ರಚಿನ್‌ ರವೀಂದ್ರ ಜೊತೆಗೂಡಿ ತಂಡವನ್ನು ಮೇಲಕ್ಕೆತ್ತಿದರು. ಕಿವೀಸ್ ತಮ್ಮ ಆರಂಭಿಕರಾದ ಟಾಮ್ ಲ್ಯಾಥಮ್ (20) ಮತ್ತು ಡೆವೊನ್ ಕಾನ್ವೇ (1) ಇಬ್ಬರನ್ನೂ ಬೇಗನ ಕಳೆದುಕೊಂಡು ದುಸ್ಥಿತಿಯಲ್ಲಿತ್ತು. ಇವರಿಬ್ಬರು ತಲಾ ಶತಕಗಳನ್ನು ಸಿಡಿಸಿದರು ಮತ್ತು 219 ರನ್‌ಗಳ ಅಜೇಯ ಜೊತೆಯಾಟವನ್ನು ಹಂಚಿಕೊಂಡರು,

ವಿಲಿಯಮ್ಸನ್ 112 ರನ್ ಗಳಿಸಿ ಅಜೇಯರಾಗಿ ಉಳಿದರೆ, ರಚಿನ್‌ ರವೀಂದ್ರ ಔಟಾಗದೆ 118 ರನ್ ಗಳಿಸಿದರು. ಇದು ವಿಲಿಯಮ್ಸನ್ ಅವರ ಟೆಸ್ಟ್ ಕ್ರಿಕೆಟ್‌ನಲ್ಲಿ 30 ನೇ ಶತಕವಾಗಿದ್ದು, ಅವರು ಕೊಹ್ಲಿ ಮತ್ತು ಬ್ರಾಡ್‌ಮನ್ ಇಬ್ಬರನ್ನೂ ಹಿಂದಿಕ್ಕಿದರು. ಬ್ರಾಡ್‌ಮನ್ 52 ಪಂದ್ಯಗಳಿಂದ 29 ಶತಕಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪೂರ್ಣಗೊಳಿಸಿದರೆ, ಕೊಹ್ಲಿ ಇದುವರೆಗೆ ಭಾರತಕ್ಕಾಗಿ 113 ಟೆಸ್ಟ್ ಪಂದ್ಯಗಳಲ್ಲಿ 29 ಶತಕಗಳನ್ನು ಗಳಿಸಿದ್ದಾರೆ. ವಿಲಿಯಮ್ಸನ್ ನ್ಯೂಜಿಲೆಂಡ್ ಪರ ತಮ್ಮ 97ನೇ ಟೆಸ್ಟ್‌ನಲ್ಲಿ ಇವರಿಬ್ಬರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳು…
ಸಚಿನ್ ತೆಂಡೂಲ್ಕರ್ (ಭಾರತ): 51
ಜಾಕ್ ಕಾಲಿಸ್ (ದ.ಆಫ್ರಿಕಾ): 45
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 41
ಕುಮಾರ ಸಂಗಕ್ಕಾರ (ಶ್ರೀಲಂಕಾ): 38
ರಾಹುಲ್ ದ್ರಾವಿಡ್ (ಭಾರತ): 36
ಯೂನಿಸ್ ಖಾನ್ (ಪಾಕಿಸ್ತಾನ): 34
ಸುನಿಲ ಗವಾಸ್ಕರ್ (ಭಾರತ): 34
ಬ್ರಿಯಾನ್ ಲಾರಾ (ವೆಸ್ಟ್‌ ಇಂಡೀಸ್): 34
ಮಹೇಲಾ ಜಯವರ್ಧನೆ (ಶ್ರೀಲಂಕಾ): 34
ಅಲಿಸ್ಟಾರ್ ಕುಕ್ (ಇಂಗ್ಲೆಂಡ್): 33
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 32
ಸ್ಟೀವ್‌ ವಾ (ಆಸ್ಟ್ರೇಲಿಯಾ): 32
ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 30
ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ): 30
ಜೋ ರೂಟ್ (ಇಂಗ್ಲೆಂಡ್): 30
ಶಿವನಾರಾಯಣ ಚಂದ್ರಪಾಲ್ (ವೆಸ್ಟ್ ಇಂಡೀಸ್): 30
ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ): 29
ವಿರಾಟ್ ಕೊಹ್ಲಿ (ಭಾರತ): 29

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement