ಕೇಂದ್ರ ಸರ್ಕಾರದ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಇಂದಿನಿಂದ 29 ರೂ.ಗೆ ಲಭ್ಯ

ನವದೆಹಲಿ: ಏರುತ್ತಿರುವ ಅಕ್ಕಿ ಬೆಲೆಯ ಹೊರೆ ಕಡಿಮೆ ಮಾಡುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವು ‘ಭಾರತ್ ರೈಸ್’ ಎಂಬ ಹೊಸ ಅಕ್ಕಿ ಬ್ರಾಂಡ್ ಅನ್ನು ಪ್ರಾರಂಭಿಸಿದೆ. ಪ್ರತಿ ಕಿಲೋಗ್ರಾಂಗೆ 29 ರೂ. ಬೆಲೆಯಲ್ಲಿ ಮಾರಾಟವನ್ನು ಇಂದು, ಮಂಗಳವಾರ ಪ್ರಾರಂಭುಸಲಾಯಿತು. ಇದು ಗ್ರಾಹಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಅಕ್ಕಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
‘ಭಾರತ್ ರೈಸ್’ ವಿತರಣೆಯನ್ನು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED), ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF), ಮತ್ತು ಕೇಂದ್ರೀಯ ಭಂಡಾರದ ಮಾರಾಟ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಹೆಚ್ಚುವರಿಯಾಗಿ, ಅಕ್ಕಿಯನ್ನು ವಿವಿಧ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಲು ಲಭ್ಯವಾಗುವಂತೆ ಮಾಡಲಾಗುತ್ತದೆ. ಗ್ರಾಹಕರು ‘ಭಾರತ್ ರೈಸ್’ ಅನ್ನು 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಖರೀದಿಸಬಹುದು.
ಭಾರತದಲ್ಲಿ ಅಕ್ಕಿಯ ಸರಾಸರಿ ಚಿಲ್ಲರೆ ಬೆಲೆ ಪ್ರಸ್ತುತ ಪ್ರತಿ ಕೆಜಿಗೆ ರೂ 43.3 ರಷ್ಟಿದೆ, ಇದು ಹಿಂದಿನ ವರ್ಷಕ್ಕಿಂತ 14.1% ಹೆಚ್ಚಳವನ್ನು ಕಂಡಿದೆ. ಕೇಂದ್ರ ಸರ್ಕಾರದ ಭಾರತ್‌ ರೈಸ್‌ ಬಿಡುಗಡೆಯ ಉಪಕ್ರಮವು ಕೇಂದ್ರ ಸರ್ಕಾರವು ನವೆಂಬರ್‌ನಲ್ಲಿ ‘ಭಾರತ್ ಅಟ್ಟಾ’ವನ್ನು ಗೋಧಿಯನ್ನು ಬಿಡುಗಡೆ ಮಾಡಿದ ನಂತರ ಬಂದಿದೆ. ಭಾರತ್‌ ಅಟ್ಟಾ ಬ್ರ್ಯಾಂಡ್‌ ಗೋಧಿ ಬೆಲೆ ಪ್ರತಿ ಕೆಜಿಗೆ 27.50 ರೂ.ಗಳಾಗಿದೆ.

ಪ್ರಮುಖ ಸುದ್ದಿ :-   ಚಿನ್ನಾಭರಣ ನಗದು ಸೇರಿ ಒಂದೇ ತಿಂಗಳಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಬಂದ ದೇಣಿಗೆ ಹಣವೆಷ್ಟು ಗೊತ್ತಾ..?

5 / 5. 3

ಶೇರ್ ಮಾಡಿ :

  1. [email protected]

    Govt has to publish in News papers where Common Man can purchase.So far we have not seen Bharat Atta .Like this it should not happen to today’s RICE also.

ನಿಮ್ಮ ಕಾಮೆಂಟ್ ಬರೆಯಿರಿ

advertisement