ಬ್ರಿಟನ್‌ ರಾಜ ಚಾರ್ಲ್ಸ್‌ಗೆ ಕ್ಯಾನ್ಸರ್ ಇರುವುದು ಪತ್ತೆ: ಬಕಿಂಗ್‌ಹ್ಯಾಮ್ ಅರಮನೆಯಲ್ಲೇ ಚಿಕಿತ್ಸೆ

ಲಂಡನ್ : ಬ್ರಿಟನ್ ರಾಜ ಚಾರ್ಲ್ಸ್ -3 (King Charles III) ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಕಿಂಗ್‌ ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ.
75 ವರ್ಷದ ರಾಜ ಚಾರ್ಲ್ಸ್ -3 ಅವರಿಗೆ ಯಾವ ಕ್ಯಾನ್ಸರ್ ಇದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾದ ಕ್ಯಾನ್ಸರ್ ರೋಗಲಕ್ಷಣ ಕಂಡುಬಂದಿದೆ ಎಂದು ಅರಮೆನಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ.
ಕ್ಯಾನ್ಸರ್‌ಗೆ ಒಳಗಾಗಿರುವ ಕಿಂಗ್ ಚಾರ್ಲ್ಸ್ III ಸಾರ್ವಜನಿಕ ಭೇಟಿ ರದ್ದು ಮಾಡಿದ್ದು, ಅವರಿಗೆ ಅರಮನೆಯಲ್ಲಿ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ.

ಅವರ ಮೆಜೆಸ್ಟಿ ನಿಯಮಿತ ಚಿಕಿತ್ಸೆಗಳ ವೇಳಾಪಟ್ಟಿಯನ್ನು ಪ್ರಾರಂಭಿಸಿದ್ದಾರೆ, ಈ ಸಮಯದಲ್ಲಿ ಅವರ ಸಾರ್ವಜನಿ ಕರ್ತವ್ಯಗಳನ್ನು ಮುಂದೂಡಲು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ” ಎಂದು ಅರಮನೆ ಹೇಳಿದೆ.
ಚಿಕಿತ್ಸೆ ಸಂದರ್ಭ ಸಾರ್ವಜನಿಕರಿಂದ ದೂರವಿದ್ದರೂ, ಎಂದಿನಂತೆ ರಾಜ್ಯ ವ್ಯವಹಾರ ಮತ್ತು ಅಧಿಕೃತ ದಾಖಲೆಗಳನ್ನು ಸಹಿ ಹಾಕುವುದು ಇತ್ಯಾದಿಗಳನ್ನು ಮುಂದುವರಿಸುತ್ತಾರೆ ಎಂದು ಹೇಳಿಕೆ ತಿಳಿಸಿದೆ. ಚಾರ್ಲ್ಸ್ “ಅವರ ಚಿಕಿತ್ಸೆಯ ಬಗ್ಗೆ ಸಂಪೂರ್ಣವಾಗಿ ಸಕಾರಾತ್ಮಕವಾಗಿ ಉಳಿದಿದ್ದಾರೆ ಮತ್ತು ಸಾಧ್ಯವಾದಷ್ಟು ಬೇಗ ಸಂಪೂರ್ಣವಾಗಿ ಸಾರ್ವಜನಿಕ ಕರ್ತವ್ಯಕ್ಕೆ ಮರಳಲು ಎದುರು ನೋಡುತ್ತಿದ್ದಾರೆ” ಎಂದು ಅದು ಹೇಳಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement