“ನಾನು ನಿಮ್ಮನ್ನು ಶಿಕ್ಷಿಸಲಿದ್ದೇನೆ….”: ಸಂಸತ್ತಿನ ಕ್ಯಾಂಟೀನ್‌ನಲ್ಲಿ ಸಂಸದರೊಂದಿಗೆ ಪ್ರಧಾನಿ ಮೋದಿ ಊಟ-ತಮಾಷೆ-ಮಾತುಕತೆ

ನವದೆಹಲಿ: ಕನಿಷ್ಠ ಎಂಟು ಸಂಸದರಿಗೆ ಶುಕ್ರವಾರ ಮಧ್ಯಾಹ್ನ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ಸಂಸತ್ತಿನಲ್ಲಿ ಭೇಟಿಯಾಗಲು ಬಯಸಿದ್ದಾರೆ ಎಂದು ಹೇಳಿದ್ದು ಅವರಿಗೆ ಅಚ್ಚರಿ ಮೂಡಿಸಿದೆ. ಸಂಸದರಲ್ಲಿ ಕೇಂದ್ರ ಸಚಿವ ಎಲ್ ಮುರುಗನ್, ಬಿಜೆಡಿ ರಾಜ್ಯಸಭಾ ಸಂಸದ ಸಸ್ಮಿತ್ ಬಾತ್ರಾ, ಲೋಕಸಭೆಯ ಹಿರಿಯ ಸಂಸದ ಎನ್‌.ಕೆ. ಪ್ರೇಮ ಚಂದ್ರನ್, ಟಿಡಿಪಿ ಸಂಸದ ರಾಮಮೋಹನ ನಾಯ್ಡು, ಬಿಎಸ್‌ಪಿ ಸಂಸದ ರಿತೇಶ್ ಪಾಂಡೆ, ಬಿಜೆಪಿಯ ಲಡಾಖ್ ಸಂಸದ ಜಮ್ಯಾಂಗ್ ತ್ಸೇರಿಂಗ್ ನಾಮ್‌ಗ್ಯಾಲ್ ಮತ್ತು ಬಿಜೆಪಿಯ ನಾಗಾಲ್ಯಾಂಡ್ ಸಂಸದ ಎಸ್ ಫಾಂಗ್ನಾನ್ ಕೊನ್ಯಾಕ್ ಸೇರಿದ್ದಾರೆ.
ಸಂಸದರು ಪಿಎಂಒ ತಲುಪಿದಾಗ, ಸ್ವಲ್ಪ ಸಮಯ ಕಾಯಲು ಅವರಿಗೆ ಸೂಚಿಸಲಾಯಿತು. ನಂತರ ಪ್ರಧಾನಿ ಮೋದಿ ಇವರ ಜೊತೆ ಸೇರಿಕೊಂಡರು. ಅವರ ಆಶ್ಚರ್ಯಕ್ಕೆ, ಪ್ರಧಾನಿ ಅವರನ್ನು ಉದ್ದೇಶಿಸಿ, “ನಾನು ನಿಮ್ಮನ್ನು ಶಿಕ್ಷೆ ನೀಡಲು ಕರೆದೊಯ್ಯಲು ಬಯಸುತ್ತೇನೆ!” ಎಂದು ಹೇಳಿದ್ದು ಅವರ ಅಚ್ಚರಿಗೆ ಕಾರಣವಾಯಿತು. ಸಂಸತ್ ಭವನದ ಮೊದಲ ಮಹಡಿಯಲ್ಲಿರುವ ಸಂಸದರ ಕ್ಯಾಂಟೀನ್‌ಗೆ ಪ್ರಧಾನಿಯವರು ಅವರನ್ನು ಕರೆದೊಯ್ಯುತ್ತಿರುವುದು ಅವರ ಕುತೂಹಲ ಇನ್ನಷ್ಟು ಹೆಚ್ಚಲು ಕಾರಣವಾಯಿತು.

ನಂತರ, ಸಂಸದರು ಪ್ರಧಾನಿ ಮೋದಿ ಜೊತೆ ಊಟಕ್ಕೆ ಕುಳಿತರು, ರಾಜಕೀಯ ಮತ್ತು ವೈಯಕ್ತಿಕ ಎರಡೂ ಸಂಭಾಷಣೆಗಳಿಂದ ಕೂಡದ ಊಟ ಸುಮಾರು ಒಂದು ಗಂಟೆಗಳ ಕಾಲ ನಡೆಯಿತು.
ಮೂಲಗಳು ಹೇಳುವಂತೆ ಸಂಸದರೊಬ್ಬರು ಪ್ರಧಾನಿ ಮೋದಿಗೆ ಕೇಳಿದ ಮೊದಲ ಪ್ರಶ್ನೆಯಲ್ಲಿ ‘ನಿಮ್ಮ ನೆಚ್ಚಿನ ಖಾದ್ಯ ಯಾವುದು’ ಎಂಬುದು. ಮತ್ತು ತಕ್ಷಣವೇ ಪ್ರಧಾನಿಯವರ ಉತ್ತರ ಬಂದಿತು – ಖಿಚಡಿ ಎಂಬುದಾಗಿ.
ಪ್ರಯಾಣ ಮಾಡುವಾಗ ಮತ್ತು ತಡವಾಗಿ ಕೆಲಸ ಮಾಡುವಾಗಲೂ ನೀವು ನಿಮ್ಮ ಸಮಯವನ್ನು ಹೇಗೆ ಹೊಂದಿಸುತ್ತೀರಿ ಮತ್ತು ಕೆಲಸದ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಅವರು, “ನಾನು ಅನೇಕ ಗಂಟೆಗಳ ಕಾಲ ಕೆಲಸ ಮಾಡುತ್ತೇನೆ; ಕೆಲವೊಮ್ಮೆ, ನಾನು ಇಡೀ ದಿನ ನಿದ್ದೆ ಮಾಡಿಲ್ಲ ಎಂದು ನನಗೆ ತಿಳಿದಿರುವುದಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ನನ್ನ ಅನುಭವವು ನನಗೆ ಉಪಯುಕ್ತವಾಗಿದೆ ಎಂದು ಪ್ರಧಾನಿ ಹೇಳಿದರು.

ಹೆಚ್ಚು ಗಂಭೀರವಾದ ಪ್ರಶ್ನೆಗಳ ಪೈಕಿ, 2015 ರಲ್ಲಿ ಪಾಕಿಸ್ತಾನದಲ್ಲಿ ನವಾಜ್ ಷರೀಫ್ ಅವರ ಮಗಳ ಮದುವೆಗೆ ಅವರ ನಿಗದಿತ ಭೇಟಿಯ ಬಗ್ಗೆ ಸಂಸದರೊಬ್ಬರು ಪ್ರಧಾನಿಯನ್ನು ಪ್ರಶ್ನಿಸಿದರು. ಹಠಾತ್ ಭೇಟಿಯ ಮುನ್ನಾದಿನ ನೆನಪಿಸಿಕೊಂಡ ಪ್ರಧಾನಿ ಮೋದಿ, ಆ ದಿನ ಮಧ್ಯಾಹ್ನ 2 ಗಂಟೆಯವರೆಗೆ ಸಂಸತ್ತಿನಲ್ಲಿದ್ದೆ ಮತ್ತು ನಂತರ ಅಫ್ಘಾನಿಸ್ತಾನಕ್ಕೆ ನಿಗದಿತ ಭೇಟಿಗೆ ತೆರಳಿದೆ. ಆದರೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಹಿಂತಿರುಗುವ ಮಾರ್ಗದ ಮಧ್ಯೆ ಪಾಕಿಸ್ತಾನದಲ್ಲಿ ಲ್ಯಾಂಡ್‌ ಆಗಲು ನಿರ್ಧರಿಸಿದೆ. ಆದರೆ ಎಸ್‌ಪಿಜಿ ಈ ನಿರ್ಧಾರ ಬೇಡ ಎಂದು ನಿರಾಕರಿಸಿದರು. ಆದರೂ ಷರೀಫ್‌ಗೆ ಕರೆ ಮಾಡಿ, ಪಾಕಿಸ್ತಾನದ ಪ್ರಧಾನಿ ಬರಮಾಡಿಕೊಳ್ಳಲು ಸಿದ್ಧರಿದ್ದಾರೆಯೇ ಎಂದು ಕೇಳಲಾಯಿತು. ಎರಡೂ ಕಡೆಯ ಭದ್ರತಾ ವ್ಯವಸ್ಥೆಗಳು ಸ್ಪಷ್ಟವಾದ ನಂತರ, ಪ್ರಧಾನಿ ಪಾಕಿಸ್ತಾನಕ್ಕೆ ಲ್ಯಾಂಡ್‌ ಆದೆ ಎಂದು ಆ ಭೇಟಿಯ ಬಗ್ಗೆ ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ಎನ್‌ಕೌಂಟರ್‌ನಲ್ಲಿ 12 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಕೆಲವು ಸಂಸದರು ಕೋವಿಡ್-19 ಬಿಕ್ಕಟ್ಟಿನ ನಿರ್ವಹಣೆ ಬಗ್ಗೆ ಪ್ರಧಾನಿ ಬಾಯಿಂದ ಕೇಳಲು ಬಯಸಿದ್ದರು. ಗುಜರಾತ್‌ನ ಭುಜ್‌ನಲ್ಲಿ 2001 ರ ವಿನಾಶಕಾರಿ ಭೂಕಂಪದ ನಂತರದ ಪರಿಸ್ಥಿತಿಯನ್ನು ನಿರ್ವಹಿಸಿದ ಅನುಭವವು ನನಗೆ ಕೋವಿಡ್-19 ಬಿಕ್ಕಟ್ಟಿನ ನಿರ್ವಹಣೆಗೆ ನೆರವಾಯಿತು ಎಂದು ಪ್ರಧಾನಿ ಮೋದಿ ಸಂಸದರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳುತ್ತವೆ. ನೇಪಾಳವನ್ನು ಅಪ್ಪಳಿಸಿದ ಏಪ್ರಿಲ್ 2015 ರ ಭೂಕಂಪದ ನಂತರ ನೇಪಾಳ ಸರ್ಕಾರಕ್ಕೆ ಸಲಹೆ ನೀಡಲು ಆ ಅನುಭವದಿಂದ ಸಾಧ್ಯವಾಯಿತು ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿಯೊಂದಿಗಿನ ಸಂಭಾಷಣೆಗೆ ಯಾವುದೇ ನಿಗದಿತ ಫಾರ್ಮ್ಯಾಟ್ ಇಲ್ಲದಿದ್ದರೂ, ನಾವು ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಲೇ ಇದ್ದಾಗ ಪ್ರಧಾನಿಯವರು ನಮ್ಮ ಮಾತು ಕೇಳುತ್ತಿದ್ದರು ಹಾಗೂ ಉತ್ತರಿಸುತ್ತಿದ್ದರು ಎಂದು ಸಂಸದರೊಬ್ಬರು ಹೇಳಿದರು ಎಂದು ನ್ಯೂಸ್ 18 ವರದಿ ಮಾಡಿದೆ.

ಮಾತುಕತೆಯ ಕೊನೆಯಲ್ಲಿ, ಸಂಸದರೊಬ್ಬರು ಪ್ರಧಾನಿಯವರಿಗೆ ನೀವು ಹೇಗೆ ವಿಶ್ರಾಂತಿ ಪಡೆಯುತ್ತೀರಿ ಎಂದು ಕೇಳಿದರು. “ನಾನು ಯೋಗವನ್ನು ತಪ್ಪದೆ ಮಾಡುತ್ತೇನೆ ಮತ್ತು ವಿವಿಧ ರೀತಿಯ ವ್ಯಾಯಾಮ ಮತ್ತು ಧ್ಯಾನದ ಮೂಲಕ ನನ್ನ ಮನಸ್ಸು ಮತ್ತು ದೇಹವನ್ನು ಆರಾಮವಾಗಿರಿಸಿಕೊಳ್ಳುತ್ತೇನೆ” ಎಂದು ಮೋದಿ ಉತ್ತರಿಸಿದರು.
ನೋಡಿ, ನಾನು ನಿಮ್ಮೊಂದಿಗೆ ಆಹಾರವನ್ನು ಸೇವಿಸುತ್ತಿದ್ದೇನೆ ಮತ್ತು ನಾನು ಸಂಪೂರ್ಣವಾಗಿ ಆರಾಮವಾಗಿದ್ದೇನೆ. ನಾನು ಪ್ರಧಾನಿ 24×7 ಅಥವಾ ನಾನು ಎಲ್ಲಿಗೆ ಹೋದರೂ ಅಲ್ಲ. ನಾನು ನಿಮ್ಮಲ್ಲಿ ಪ್ರತಿಯೊಬ್ಬರಂತೆ ಸಾಮಾನ್ಯ ಮನುಷ್ಯನಾಗಿದ್ದೇನೆ ಎಂದು ಉತ್ತರಿಸಿದ್ದಾರೆ.

ಪ್ರಮುಖ ಸುದ್ದಿ :-   50 ದಿನಗಳ ನಂತರ ಜೈಲಿನಿಂದ ಹೊರಬಂದ ಅರವಿಂದ ಕೇಜ್ರಿವಾಲ್ ; ಸರ್ವಾಧಿಕಾರದ ವಿರುದ್ಧ ಹೋರಾಡಬೇಕಿದೆ ಎಂದ ದೆಹಲಿ ಸಿಎಂ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement