ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಶನಿವಾರ 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲೆ ಮೂರು ವರ್ಷಗಳ ಗರಿಷ್ಠ ಬಡ್ಡಿ ದರ ಶೇ.8.25 ನಿಗದಿಪಡಿಸಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2021-22 ರಲ್ಲಿ 8.10 ಶೇಕಡಾದಿಂದ 2022-23 ಕ್ಕೆ EPF ಮೇಲಿನ ಬಡ್ಡಿ ದರವನ್ನು 8.15 ಶೇಕಡಾಕ್ಕೆ ಸ್ವಲ್ಪಮಟ್ಟಿಗೆ ಹೆಚ್ಚಿಸಿತ್ತು.
2021-22ನೇ ಸಾಲಿನಲ್ಲಿ ಇದು ಶೇ 8.10ರಷ್ಟಿತ್ತು. 6 ಕೋಟಿ ಠೇವಣಿದಾರರಿಗೆ ಸಿಗುತ್ತಿದ್ದ ಬಡ್ಡಿದರ ಕಳೆದ ನಾಲ್ಕು ದಶಕಗಳ ಹೋಲಿಸಿದಲ್ಲಿ 2021-22ರಲ್ಲಿ ಅತ್ಯಂತ ಕನಿಷ್ಠ ಶೇ 8.10ಕ್ಕೆ ನಿಗದಿಪಡಿಸಲಾಗಿತ್ತು. 2020-21ರಲ್ಲಿ ಇದು ಶೇ 8.5ರಷ್ಟಿತ್ತು. 1977-78ರಲ್ಲಿ ಇಪಿಎಫ್ ಮೇಲಿನ ಬಡ್ಡಿದರ ಶೇ 8ರಷ್ಟಿತ್ತು.
ಇಪಿಎಫ್‌ಒದ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (ಸಿಬಿಟಿ) ಶನಿವಾರ ನಡೆದ ಸಭೆಯಲ್ಲಿ 2023-24ಕ್ಕೆ ಇಪಿಎಫ್‌ನಲ್ಲಿ ಶೇಕಡಾ 8.25 ಬಡ್ಡಿದರ ನಿಗದಿಪಡಿಸಲು ನಿರ್ಧರಿಸಿದೆ” ಎಂದು ಮೂಲವೊಂದು ತಿಳಿಸಿದೆ.
ಸಿಬಿಟಿ(CBT)ಯ ನಿರ್ಧಾರದ ನಂತರ, 2023-24ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.
ಸರ್ಕಾರದ ಅನುಮೋದನೆಯ ನಂತರ, 2023-24ರ EPF ಮೇಲಿನ ಬಡ್ಡಿ ದರವನ್ನು ಇಪಿಎಫ್‌ಒ(EPFO)ದ ಆರು ಕೋಟಿ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಈ ಕುರಿತಂತೆ ಕಾರ್ಮಿಕ ಇಲಾಖೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ನೀತಿ ನಿರ್ಧಾರದ ಉನ್ನತ ಸಮಿತಿಯಾಗಿರುವ, ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು ತನ್ನ 235ನೇ ಸಭೆಯಲ್ಲಿ 2023-24ನೇ ಸಾಲಿನ ಬಡ್ಡಿ ದರವನ್ನು ನಿಗದಿಪಡಿಸಿದೆ. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಕಾರ್ಮಿಕ ಸಚಿವ ಭುಪೇಂದ್ರ ಯಾದವ್ ವಹಿಸಿದ್ದರು.
ಆರ್ಥಿಕ ವರ್ಷ 2024ಕ್ಕೆ ಮಂಡಳಿಯು ಈ ವರ್ಷ ಇಪಿಎಫ್ ಸದಸ್ಯರ ಖಾತೆಗಳಿಗೆ ₹1.07 ಲಕ್ಷ ಕೋಟಿಯನ್ನು ಹಂಚಲು ನಿರ್ಧರಿಸಿದೆ. ಈ ಹಣವು ಮೂಲ ಮೊತ್ತವಾದ ₹13 ಲಕ್ಷ ಕೋಟಿಗೆ ಬಂದ ಬಡ್ಡಿಯ ದರ ಇದಾಗಿದೆ. 2022-23ನೇ ಸಾಲಿನಲ್ಲಿದ್ದ ಮೂಲ ಮೊತ್ತ ₹ 11.02 ಲಕ್ಷ ಕೋಟಿಗೆ ಕಳೆದ ಸಾಲಿನಲ್ಲಿ ₹91.15 ಸಾವಿರ ಕೋಟಿ ಬಡ್ಡಿ ದೊರಕಿತ್ತು.ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಆದಾಯ ಶೇ 17.39ರಷ್ಟು ಹೆಚ್ಚಾಗಿದೆ. ಮತ್ತೊಂದೆಡೆ ಮೂಲ ಮೊತ್ತವು ಶೇ 17.97ರಷ್ಟು ಹೆಚ್ಚಳವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ