ರಾಜ್ಯಸಭಾ ಚುನಾವಣೆ: ಕರ್ನಾಟಕದಿಂದ ನಾರಾಯಣಸಾ ಭಾಂಡಗೆಗೆ ಬಿಜೆಪಿ ಟಿಕೆಟ್ ಘೋಷಣೆ

ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕದಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಬಿಜೆಪಿ ಮಾಜಿ ರಾಜ್ಯ ಉಪಾಧ್ಯಕ್ಷ ನಾರಾಯಣ ಭಾಂಡಗೆ ಅವರಿಗೆ ಟಿಕೆಟ್‌ ನೀಡಲಾಗಿದೆ.
ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ನಿರಾಸೆಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸಿ ಸೋತಿದ್ದ ವಿ ಸೋಮಣ್ಣ ಅವರು ರಾಜ್ಯಸಭೆ ಟಿಕೆಟ್ ಸಿಗುವ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಸೋಮಣ್ಣ ಬದಲಿಗೆ ಎಬಿವಿಪಿ ಹಾಗೂ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದ ನಾರಾಯಣಸಾ ಭಾಂಡ ಅವರಿಗೆ ಅವರಿಗೆ ರಾಜ್ಯಸಭೆ ಟಿಕೆಟ್‌ ನೀಡಲಾಗಿದೆ.
ಕರ್ನಾಟಕದಲ್ಲಿ ಒಟ್ಟು ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ಬಿಜೆಪಿ ನಾರಾಯಣಸಾ ಭಾಂಡಗೆ ಅವರೊಬ್ಬರಿಗೆ ಮಾತ್ರ ಟಿಕೆಟ್ ಘೋಷಣೆ ಮಾಡಿದ್ದು, ಬಿಜೆಪಿಯ ಸಂಖ್ಯಾಬಲದ ಆಧಾರದಲ್ಲಿ ಬಾಂಡಗೆ ಅವರಿಗೆ ಮಾತ್ರ ಟಿಕೆಟ್‌ ನೀಡಿದೆ.

ರಾಜ್ಯದಲ್ಲಿ ರಾಜ್ಯಸಭೆ ಸ್ಥಾನದಿಂದ ನಿವೃತ್ತಿಯಾಗುವವರಲ್ಲಿ ಮೂವರು ಕಾಂಗ್ರೆಸ್ಸಿನವರು ಹಾಗೂ ಒಬ್ಬರು ಬಿಜೆಪಿಯವರಾಗಿದ್ದಾರೆ. ಕಾಂಗ್ರೆಸ್ಸಿನಿಂದ ಜಿ ಸಿ ಚಂದ್ರಶೇಖರ, ನಾಸೀರ್ ಹುಸೇನ್, ಎಲ್.ಹನುಮಂತಯ್ಯ ಹಾಗೂ ಬಿಜೆಪಿಯಿಂದ ರಾಜೀವ ಚಂದ್ರಶೇಖರ ಅವರು ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ.
ಇನ್ನುಳಿದಂತೆ ಬಿಹಾರದಿಂದ ಡಾ. ಧರ್ಮಶೀಲಾ ಗುಪ್ತಾ ಹಾಗೂ ಡಾ. ಭೀಮಸಿಂಗ್, ಛತ್ತೀಸ್​ಗಢದಿಂದ ರಾಜಾ ದೇವೇಂದ್ರ ಪ್ರತಾಪ ಸಿಂಗ್​, ಹರಿಯಾಣದಲ್ಲಿ ಸುಭಾಷ​ ಬಾರ್ಲಾ, ಉತ್ತರಾಖಂಡದಿಂದ ಮಹೇಂದ್ರ ಭಟ್, ಪಶ್ಚಿಮ ಬಂಗಾಳದಿಂದ ಸಮಿಕಾ ಭಟ್ಟಾಚಾರ್ಯ, ಉತ್ತರ ಪ್ರದೇಶದಿಂದ ಆರ್​.ಪಿ.ಎನ್​ ಸಿಂಗ್, ಸುಭಾಂಶು ತ್ರಿವೇದಿ, ಚೌಧರಿ ತೇಜ್​ವೀರ್ ಸಿಂಗ್, ಸಾಧನಾ ಸಿಂಗ್, ಅಮರಪಾಲ್ ಮೌರ್ಯ, ಸಂಗೀತಾ ಬಲ್ವಂತ್, ನವೀನ್ ಜೈನ್ ಅವರಿಗೆ ಟಿಕೆಟ್ ನೀಡಲಾಗಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ : ಗೃಹ ಸಚಿವ ಡಾ..ಪರಮೇಶ್ವರ

ನಾರಾಯಣಸಾ ಕೃಷ್ಣಸಾ ಭಾಂಡಗೆ…
ನಾರಾಯಣಸಾ ಕೃಷ್ಣಸಾ ಭಾಂಡಗೆ ಅವರು ಮೂಲತಃ ಬಾಗಲಕೋಟೆಯವರಾಗಿದ್ದು, ಆರ್.ಎಸ್.ಎಸ್. ಕಾರ್ಯಕರ್ತರಾಗಿದ್ದಾರೆ. ರಾಮ ಮಂದಿರ ಹೋರಾಟ, ಕಾಶ್ಮೀರ ತಿರಂಗ ಹೋರಾಟ ಸೇರಿ ಬಿಜೆಪಿಯ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಹಿಂದೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ನಾರಾಯಣ ಭಾಂಡಗೆ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಅವರು ಅವರು 2010 ರಿಂದ 2016 ರವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದರು. ಕರ್ನಾಟಕದ ಎಸ್‌ಎಸ್‌ಕೆ ಸಮಾಜದ ಮುಖಂಡರೂ ಆಗಿರುವ ಇವರು ಬಿಜೆಪಿಯ ಒಬಿಸಿ ಘಟಕದ ಪ್ರಮುಖ ನಾಯಕರೂ ಹೌದು. ಬಿಜೆಪಿ ರಾಜ್ಯ ಉಪಾಧ್ಯಕ್ಷ, ರಾಜ್ಯ ಕಾರ್ಯದರ್ಶಿಯಾಗಿಯೂ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement