ವೀಡಿಯೊ…| ಮೋದಿಪರ ಘೋಷಣೆ ಕೂಗುತ್ತಿದ್ದವರ ಜೊತೆ ಹಸ್ತಲಾಘವ ಮಾಡಿದ ರಾಹುಲ್ ಗಾಂಧಿ : ವೀಕ್ಷಿಸಿ

ಛತ್ತೀಸ್‌ಗಢ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದ ಜನಸಮೂಹದತ್ತ ನಡೆದು ಅವರ ಕೈಕುಲುಕಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಪಕ್ಷವು “ಪ್ರೀತಿಯಲ್ಲಿ ದೊಡ್ಡ ಶಕ್ತಿ ಇದೆ” ಎಂದು ಹೇಳಿಕೆ ನೀಡಿದೆ.
ಕಳೆದ ವಾರ ಒಡಿಶಾದ ಕೊರ್ಬಾದಿಂದ ಧೋಡಿಪಾರಾ ಮೂಲಕ ಕಟ್ಘೋರಾ ಮಾರ್ಗದಲ್ಲಿ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಛತ್ತೀಸ್‌ಗಢ ರಾಜ್ಯವನ್ನು ಪ್ರವೇಶಿಸಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, “ಪ್ರೀತಿಯಲ್ಲಿ ದೊಡ್ಡ ಶಕ್ತಿ ಇದೆ. ಬಿಜೆಪಿ ಕಾರ್ಯಕರ್ತರು ಭಾರತ ಜೋಡೋ ನ್ಯಾಯ ಯಾತ್ರೆ ವಿರುದ್ಧ ಪ್ರತಿಭಟನೆಗೆ ನಿಂತಿದ್ದರು. ಆದರೆ ಯಾತ್ರೆ ಅಲ್ಲಿಗೆ ಸಾಗಿದಾಗ, ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಈ ಸನ್ನಿವೇಶ ನಡೆಯಿತು ಎಂದು ಹೇಳಿದೆ.

ವೀಡಿಯೊದಲ್ಲಿ, ಕೇಸರಿ ಸ್ಕಾರ್ಫ್‌ಗಳನ್ನು ಧರಿಸಿರುವ ಗುಂಪು ಮತ್ತು ಭಗವಾನ್ ಹನುಮಾನ್ ಚಿತ್ರವನ್ನು ಹೊಂದಿರುವ ಧ್ವಜಗಳನ್ನು ಹಿಡಿದುಕೊಂಡು ‘ಜೈ ಶ್ರೀ ರಾಮ’ ಮತ್ತು ‘ಮೋದಿ ಮೋದಿ’ ಎಂದು ಘೋಷಣೆಗಳನ್ನು ಕೂಗುವ ಗುಂಪು ಸೇರಿದಂತೆ ದೊಡ್ಡ ಸಂಖ್ಯೆಯ ಜನರು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವುದನ್ನು ಕಾಣಬಹುದು. ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದವರನ್ನು ನೋಡಿದ ಗಾಂಧಿಯವರು ತಮ್ಮ ವಾಹನದಿಂದ ಇಳಿದು ಅವರ ಬಳಿಗೆ ನಡೆದು ಗುಂಪಿನಲ್ಲಿದ್ದ ಹಲವಾರು ಜನರೊಂದಿಗೆ ಹಸ್ತಲಾಘವ ಮಾಡಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ತಮಿಳುನಾಡಿನ ಶಾಸಕಿ...!

ಇದಕ್ಕೂ ಮುನ್ನ ಕೊರ್ಬಾದ ಸೀತಾಮಡಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಬಿಜೆಪಿ ಆಡಳಿತದಲ್ಲಿ ಜನರು ನಿರುದ್ಯೋಗ ಮತ್ತು ಹಣದುಬ್ಬರದಿಂದ ಕಂಗಾಲಾಗಿದ್ದಾರೆ. ಜನರು ಎಚ್ಚೆತ್ತುಕೊಳ್ಳಬೇಕಿದೆ. ಆಡಳಿತ ವ್ಯವಸ್ಥೆಯಿಂದ ಜನಸಾಮಾನ್ಯರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಹೇಳಿದರು.
ಜಾತಿ ಗಣತಿಯ ಮಾಡುವ ತಮ್ಮ ಪಕ್ಷದ ಬೇಡಿಕೆಯನ್ನು ಪುನರುಚ್ಚರಿಸಿದರು ಮತ್ತು ಅದನ್ನು ಜನರ ಬೆಂಬಲದೊಂದಿಗೆ ಮಾಡಲಾಗುತ್ತದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳು, ದಲಿತರು ಮತ್ತು ಆದಿವಾಸಿಗಳು (ಬುಡಕಟ್ಟುಗಳು) ದೇಶದ ಜನಸಂಖ್ಯೆಯ ಶೇಕಡಾ 74 ರಷ್ಟು ಇದ್ದಾರೆ, ಆದರೆ ಈ ಸಮುದಾಯಗಳ ಒಬ್ಬ ವ್ಯಕ್ತಿಯೂ “ದೇಶದ ಎಲ್ಲಾ ಹಣವನ್ನು ನೀಡುತ್ತಿರುವ ಭಾರತದ ಪ್ರಮುಖ 200 ಕಂಪನಿಗಳ ಮಾಲೀಕ ಅಥವಾ ನಿರ್ವಹಣೆಯಲ್ಲಿಲ್ಲ. ಎಂದು ಅವರು ಪ್ರತಿಪಾದಿಸಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ಜೊತೆ ಸೀಟು ಹಂಚಿಕೆ ಒಪ್ಪಂದದ ನಂತರ ರಾಹುಲ್ ಗಾಂಧಿ ಭಾರತ ಜೋಡಿ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡ ಅಖಿಲೇಶ ಯಾದವ್

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement