ಬೆಳಗಾವಿ ಪಾಲಿಕೆ ಮೇಯರ್‌, ಉಪಪೇಯರ್‌ ಸ್ಥಾನಕ್ಕೆ ಚುನಾವಣೆ : ಎರಡರಲ್ಲೂ ಬಿಜೆಪಿ ಗೆಲುವು

ಬೆಳಗಾವಿ: ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಯಲ್ಲಿ ಬಿಜೆಪಿಯ ಸವಿತಾ ಕಾಂಬಳೆ ಮೇಯರ್ ಆಗಿ ಮತ್ತು ಆನಂದ ಚವ್ಹಾಣ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಎರಡೂ ಸ್ಥಾನಗಳಲ್ಲಿಯೂ ಬಿಜೆಪಿ ಜಯಗಳಿಸಿದೆ.
ಐದು ವರ್ಷದ ಬಳಿಕ ಪಾಲಿಕೆಯಲ್ಲಿ ಕನ್ನಡ ಭಾಷಿಕ ಸದಸ್ಯೆ ಮೇಯರ್ ಆಗಿ ಆಯ್ಕೆಯಾಗಿರುವುದು ಆಗಿರುವುದು ವಿಶೇಷವಾಗಿದೆ. ಮೇಯರ್ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದೆ. ಆಡಳಿತಾರೂಢ ಬಿಜೆಪಿಯ 17ನೇ ವಾರ್ಡ್ ಸದಸ್ಯೆ ಸವಿತಾ ಕಾಂಬಳೆ ಹಾಗೂ 35ನೇ ವಾರ್ಡ್ ಸದಸ್ಯೆ ಲಕ್ಷ್ಮಿ ರಾಠೋಡ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಲಕ್ಷ್ಮಿ ರಾಠೋಡ ಅವರು‌ ತಮ್ಮ ಉಮೇದುವಾರಿಕೆ‌ ಹಿಂದಕ್ಕೆ ಪಡೆದ ನಂತರ ಸವಿತಾ ಕಾಂಬಳೆ ಅವರು ಮೇಯರ್‌ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದರು.

ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿಯಿಂದ 44ನೇ ವಾರ್ಡ್ ಸದಸ್ಯ ಆನಂದ ಚವ್ಹಾಣ ಹಾಗೂ 54ನೇ ವಾರ್ಡ್ ಸದಸ್ಯ ಮಹಾದೇವಿ ರಾಗೋಚೆ ಅವರು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನಿಂದ ಶಹಮುದ್ದೀನ್ ಪಠಾಣ್‌ ಹಾಗೂ ಜ್ಯೋತಿ ಕಡೋಲ್ಕರ್ ಅವರು ನಾಮಪತ್ರ ಸಲ್ಲಿಸಿದ್ದರು. ಒಟ್ಟು ಪಾಲಿಕೆಯಲ್ಲಿ 58 ಸ್ಥಾನಗಳಲ್ಲಿ ಬಿಜೆಪಿ-35, ಕಾಂಗ್ರೆಸ್‌-10, ಪಕ್ಷೇತರರು-12 ಹಾಗೂ ಎಂಐಎಂಐಎಂ- 1 ಸ್ಥಾನವನ್ನು ಹೊಂದಿದೆ. ಉಪಮೇಯರಗೆ ಕೈ ಎತ್ತುವ ಮೂಲಕ ಮತದಾನ ನಡೆಯಿತು. ಆನಂದ ಚವ್ಹಾಣ ಉಪಮೇಯರ್‌ ಆಗಿ ಆಯ್ಕೆಯಾದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement