ಬಾಲಿವುಡ್ ನಟ ಅಮಿರ್ ಖಾನ್ ನಟನೆಯ ದಂಗಲ್ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಸುಹಾಸಿನಿ ಭಟ್ನಾಗರ್(19) ಇಂದು ನಿಧನರಾಗಿದ್ದಾರೆ.
ದಂಗಲ್ ಸಿನಿಮಾದಲ್ಲಿ ಅಮಿರ್ ಖಾನ್ ಅವರ ಪುತ್ರಿ ಬಬಿತಾ ಪೋಗಟ್ ಪಾತ್ರ ನಿರ್ವಹಿಸಿದ್ದ ಸುಹಾಸಿನಿ ಭಟ್ನಾಗರ್ ಅವರು ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದರು. ಆದರೆ ಸುಹಾಸಿನಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ನಿಧನರಾಗಿದ್ದಾರೆ.
ಅವರ ಅಕಾಲಿಕ ನಿಧನದ ಸುದ್ದಿ ಚಿತ್ರರಂಗದಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ದುಃಖದ ಛಾಯೆ ಆವರಿಸುವಂತೆ ಮಾಡಿದೆ. ಕೆಲವು ಸಮಯದ ಹಿಂದೆ ಕಾಲು ಮುರಿತಕ್ಕೆ ಒಳಗಾಗಿದ್ದ ಸುಹಾನಿ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿದ್ದರು.
ಮೂಲತಃ ಹರಿಯಾಣಾದ ಫರೀದಾಬಾದ್ ನವರಾದ ಸುಹಾಸಿನಿ ಭಟ್ನಾಗರ್ ಅವರು ಸಣ್ಣ ವಯಸ್ಸಿನಲ್ಲೇ ಹಲವಾರು ಜಾಹಿರಾತುಗಳಲ್ಲಿ ನಟಿಸಿದ್ದಾರೆ. ದಂಗಲ್’ ನಂತರ ತನ್ನ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಲು ಸುಹಾನಿ ನಿರ್ಧರಿಸಿದರು ಮತ್ತು ಹಲವಾರು ವರದಿಗಳ ಪ್ರಕಾರ, ಅವರು ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ