ಅರುಣಾಚಲ ಪ್ರದೇಶ : ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಕಾಂಗ್ರೆಸ್, ಎನ್‌ಪಿಪಿಯ ನಾಲ್ವರು ಶಾಸಕರು

ಅಗರ್ತಲಾ : ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ವಿಪಕ್ಷವಾದ ಕಾಂಗ್ರೆಸ್‌ನ ಇಬ್ಬರು ಶಾಸಕರು ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಯ ಇಬ್ಬರು ಶಾಸಕರು ಮುಖ್ಯಮಂತ್ರಿ ಪೆಮಾ ಖಂಡು ಅವರ ಸಮ್ಮುಖದಲ್ಲಿ ಆಡಳಿತಾರೂಢ ಬಿಜೆಪಿ ಸೇರಿದ್ದಾರೆ.
ಇಟಾನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಶಾಸಕರಾದ ನಿನೊಂಗ್ ಎರಿಂಗ್, ವಾಂಗ್ಲಿಂಗ್ ಲೋವಾಂಗ್‌ಡಾಂಗ್ ಮತ್ತು ಎನ್‌ಪಿಪಿ ಶಾಸಕರಾದ ಮುಚು ಮಿಥಿ, ಗೋಕರ್ ಬಾಸರ್ ಅವರು ಬಿಜೆಪಿಗೆ ಸೇರ್ಪಡೆಯಾದರು.
ಎನ್‌ಪಿಪಿ ಅರುಣಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿದೆ. ಪಕ್ಷ ಸೇರ್ಪಡೆ ವೇಳೆ ಮುಖ್ಯಮಂತ್ರಿಯಲ್ಲದೆ, ಅಸ್ಸಾಂ ಸಚಿವರು ಮತ್ತು ಅರುಣಾಚಲ ಪ್ರದೇಶದ ಬಿಜೆಪಿಯ ಚುನಾವಣಾ ಉಸ್ತುವಾರಿ ಅಶೋಕ ಸಿಂಘಾಲ್ ಮತ್ತು ರಾಜ್ಯಾಧ್ಯಕ್ಷ ಬಿಯೂರಾಮ್ ವಾಹ್ಗೆ ಮೊದಲಾದವರು ಉಪಸ್ಥಿತರಿದ್ದರು.
60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭೆಗೆ ಲೋಕಸಭೆ ಚುನಾವಣೆ ಜತೆಗೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಭಾನುವಾರದ ಸೇರ್ಪಡೆಯೊಂದಿಗೆ, ರಾಜ್ಯ ವಿಧಾನಸಭೆಯ ಒಟ್ಟು 60 ಸದಸ್ಯರಲ್ಲಿ, ಮಿತ್ರಪಕ್ಷಗಳೊಂದಿಗೆ ಬಿಜೆಪಿಯ ಬಲ 56 ಕ್ಕೆ ಏರಿತು, ಆದರೆ ಕಾಂಗ್ರೆಸ್ ಶಾಸಕರ ಸಂಖ್ಯೆ ಎರಡಕ್ಕೆ ಇಳಿದಿದೆ ಮತ್ತು ಸದನದಲ್ಲಿ ಇಬ್ಬರು ಸ್ವತಂತ್ರ ಸದಸ್ಯರಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿ ಒಳಕ್ಕೆ ಚಪ್ಪಲಿ ತೆಗೆದು ಬರುವಂತೆ ಹೇಳಿದ್ದಕ್ಕೆ ವೈದ್ಯರಿಗೆ ಥಳಿಸಿದ ರೋಗಿಯ ಕುಟುಂಬ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement