‘ಸಂಪಾದಿತಲೇ ಪರಾಕ್…’: ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿದ ಗೊರವಯ್ಯ; ಇದರ ಅರ್ಥವೇನು..?

ವಿಜಯನಗರ: ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ ಹೊರಬಿದ್ದಿದೆ. ಸೋಮವಾರ ಹೂವಿನಹಡಗಲಿಯಲ್ಲಿನ ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಿತು. ಕಾರ್ಣಿಕೋತ್ಸವದಲ್ಲಿ “ಸಂಪಾದಿತಲೇ ಪರಾಕ್” ಎಂಬುದಾಗಿ ಗೊರವಯ್ಯ ರಾಮಣ್ಣ ಕಾರ್ಣಿಕ ನುಡಿದ್ದಾರೆ.
ಗೊರವಯ್ಯನ ಕಾರ್ಣಿಕ ನುಡಿಯಾದ ಸಂಪಾದಿತಲೇ ಪರಾಕ್ ಎಂಬುದನ್ನು ವಿಶ್ಲೇಷಿಸಿರುವ ಕೆಲವರು ಈ ಸಲ ಮಳೆ, ಬೆಳೆ ಚೆನ್ನಾಗಿ ಆಗಿ, ರೈತರ ಬಾಳು ಹಸನಾಗಲಿದೆ ಎಂಬುದು ಕಾರ್ಣಿಕದ ಅರ್ಥವಾಗಿದೆ ಎಂದು ಹೇಳಿದ್ದಾರೆ.
ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕವನ್ನು ರಾಜ್ಯದಲ್ಲಿ ಬರಗಾಲ ಕಡಿಮೆಯಾಗಲಿದೆ. ಮಳೆ ಬೆಳೆ ಚೆನ್ನಾಗಿ ಆಗಲಿದೆ. ಸುಭಿಕ್ಷೆಯಿಂದ ರೈತರು ಸಂತಸ ಪಡಲಿದ್ದಾರೆ ಎಂಬುದಾಗಿ ಅರ್ಥೈಸಲಾಗಿದೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ನಿಮ್ಮ ಕಾಮೆಂಟ್ ಬರೆಯಿರಿ

advertisement