ವೀಡಿಯೊ..| ಕೊಳೆ ಬಟ್ಟೆ ಧರಿಸಿ ಬಂದಿದ್ದ ವ್ಯಕ್ತಿಗೆ ʼನಮ್ಮ ಮೆಟ್ರೋʼ ಮೆಟ್ರೋ ಒಳಗೆ ಬಿಡದ ಸಿಬ್ಬಂದಿ: ಸೇವೆಯಿಂದ ಉದ್ಯೋಗಿ ವಜಾ

ಬೆಂಗಳೂರು: ಮಾಸಲು ಹಾಗೂ ಕೊಳೆಯಾದ ಉಡುಪು ಧರಿಸಿ ಬಟ್ಟೆಗಳ ಗಂಟು ಹೊತ್ತು ‘ನಮ್ಮ ಮೆಟ್ರೋ’ ದಲ್ಲಿ ಪ್ರಯಾಣಿಸಲು ಬಂದಿದ್ದ ರೈತರೊಬ್ಬರಿಗೆ ಒಳ ಪ್ರವೇಶಿಸಲು ಭದ್ರತಾ ಸಿಬ್ಬಂದಿ ನಿರಾಕರಿಸಿದ ನಂತರ ವಿವಾದ ಸೃಷ್ಟಿಯಾಗಿದ್ದು, ಈಗ ಭದ್ರತಾ ಸಿಬ್ಬಂದಿ ವಿರುದ್ಧ ಬಿಎಂಆರ್‌ಸಿಎಲ್ ಕ್ರಮ ಕೈಗೊಂಡಿದೆ.
ಪ್ರಯಾಣಿಕನನ್ನು ಅವಮಾನಿಸಿದ್ದ ಭದ್ರತಾ ಮೇಲ್ವಿಚಾರಕರನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ಬಿಎಂಆರ್‌ಸಿಎಲ್ ಸೋಮವಾರ ತಿಳಿಸಿದೆ. ಮಾಸಲು ಬಟ್ಟೆ ಧರಿಸಿ ಬಂದಿದ್ದ ವೃದ್ಧನನ್ನು ಮೆಟ್ರೋ ಒಳಗೆ ಬಿಡಲು ನಿರಾಕರಿಸಿದ್ದ ಭದ್ರತಾ ಅಧಿಕಾರಿಯನ್ನು ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ವೈರಲ್ ಆಗಿ ಇದಕ್ಕೆ ಆಕ್ಷೇಪ ವ್ಯಕ್ತವಾದ ನಂತರ ಬಿಎಂಆರ್‌ಸಿಎಲ್ ಕ್ರಮ ತೆಗೆದುಕೊಂಡಿದೆ.
“ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ, ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ” ಎಂದು ಬಿಎಂಆರ್‌ಸಿಎಲ್ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

ಘಟನೆ ಹಿನ್ನೆಲೆ…
ಬೆಂಗಳೂರಿನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮಾಸಲು ಬಟ್ಟೆ ಧರಿಸಿದ ವೃದ್ಧರೊಬ್ಬರನ್ನು ಒಳಗೆ ಪ್ರವೇಶ ನೀಡಲು ನಿರಾಕರಿಸಿದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಬೇರೆ ರಾಜ್ಯದಿಂದ ಬಂದವರಂತೆ ಕಾಣಿಸುತ್ತಿದ್ದ ವೃದ್ಧ ಕೊಳೆ ಧರಿಸಿದ ಕಾರಣ ಹಾಗೂ ಗಂಟಿನೊಳಗೆ ಮಾಸಲು ಬಟ್ಟೆ ಇದ್ದ ಕಾರಣ ಅವರಿಗೆ ನಮ್ಮ ಮೆಟ್ರೊಗೆ ಪ್ರವೇಶ ನಿರಾಕರಣೆಗೆ ಕಾರಣವಾಗಿತ್ತು.
ಆದರೆ ಅಲ್ಲಿದ್ದ ಕೆಲವು ಪ್ರಯಾಣಿಕರು ಭದ್ರತಾ ಮೇಲ್ವಿಚಾರಣಾ ಸಿಬ್ಬಂದಿಯ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಮ್ಮ ಮೆಟ್ರೋ ಇರುವುದು ಸಾರ್ವಜನಿಕರ ಸೇವೆಗಾಗಿ, ಕೊಳೆ ಬಟ್ಟೆ ಧರಿಸಿ ಬಂದವರನ್ನು ಒಳಗೆ ಸೇರಿಸಬಾರದು ಎಂಬ ನಿಯಮವಿದೆಯೇ? ಎಂದು ಅಲ್ಲಿದ್ದವರು ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಘಟನೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿತ್ತು.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

“ವ್ಯಕ್ತಿಯೊಬ್ಬರ ಬಟ್ಟೆ ಗಲೀಜು ಇದೆ ಎಂದು ನಮ್ಮ ಮೆಟ್ರೋದ ಒಳಗೆ ಬಿಡುತ್ತಿಲ್ಲ. ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಬಟ್ಟೆಗಳ ಹೊರತಾಗಿ ಬೇರೇನೂ ಇಲ್ಲ. ಬೇರೆ ಪ್ರಯಾಣಿಕರಿಗೆ ಅಸಹ್ಯ ಆಗುತ್ತದೆ ಎಂದು ಅವರನ್ನು ಬಿಡುತ್ತಿಲ್ಲವಂತೆ. ಇದು ವಿಐಪಿ ಸಾರಿಗೆಯೇ ? ಅವರ ಬಳಿ ಟಿಕೆಟ್ ಇದೆ. ಗಲೀಜು ಬಟ್ಟೆ ಹಾಕಿದವರಿಗೆ ಬಿಡುವುಲ್ಲ ಎಂಬ ಬೋರ್ಡ್ ಇದೆಯಂತೆ. ಎಲ್ಲಿದೆ ತೋರಿಸಿ? ಅವರ ಬಳಿ ದುಡ್ಡಿಲ್ಲ, ಹಾಗಾಗಿ ಈ ಬಟ್ಟೆ ಹಾಕಿದ್ದಾರೆ. ನಾನು ಸಫಾರಿ ಹಾಕಿದ್ದೀನಿ ಎಂದು ಉಚಿತವಾಗಿ ಬಿಡುತ್ತಾರೆಯೇ?” ಎಂದು ಪ್ರಯಾಣಿಕರೊಬ್ಬರು ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ವೀಡಿಯೊದಲ್ಲಿದೆ.

ಅನೇಕ ಪ್ರಯಾಣಿಕರು ಭದ್ರತಾ ಸಿಬ್ಬಂದಿ ಕ್ರಮಕ್ಕೆ ಆಕ್ಷೇಪಿಸದರೂ ಮೆಟ್ರೋ ಸಿಬ್ಬಂದಿ ತಕರಾರು ಮಾಡಿದ್ದರು. ಆಗ ಆ ವೃದ್ಧನನ್ನು ಕಾರ್ತಿಕ ಎಂಬವರು ನಮ್ಮ ಮೆಟ್ರೋ ಒಳಗೆ ಕರೆದುಕೊಂಡು ಹೋಗಿದ್ದರು. ದೀಪಕ್ ಎನ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಬಿಎಂಆರ್‌ಸಿಎಲ್ ಅನ್ನು ಟ್ಯಾಗ್ ಮಾಡಿದ್ದರು. ಈ ಮೆಟ್ರೋ ವಿಐಪಿಗಳಿಗೆ ಮಾತ್ರವೇ? ಮೆಟ್ರೋ ಬಳಸಲು ವಸ್ತ್ರ ಸಂಹಿತೆ ಇದೆಯೇ?” ಎಂದು ಬಿಎಂಆರ್‌ಸಿಎಲ್ ಅನ್ನು ಅವರು ಪ್ರಶ್ನಿಸಿದ್ದರು. ಈಗ ಬಿಎಂಆರ್‌ಸಿಎಲ್ ಈ ಬಗ್ಗೆ ಕ್ರಮ ಕೈಗೊಂಡಿರುವುದಾಗಿ ಎಕ್ಸ್‌ನಲ್ಲಿ ಹೇಳಿದ್ದು, ಭದ್ರತಾ ಅಧಿಕಾರಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement