ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ…!

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಐದನೇ ಅಭ್ಯರ್ಥಿಗೆ ಬಿಜೆಪಿ ಶಾಸಕ ಎಸ್‌. ಟಿ. ಸೋಮಶೇಖರ ಕಾಂಗ್ರೆಸ್‌ ಅಡ್ಡ ಮತದಾನ ಮಾಡುವ ಮೂಲಕ ಶಾಕ್‌ ನೀಡಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್‌ ಸಿ ಸೋಮಶೇಖರ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ ಎಂಬುದನ್ನು ಬಿಜೆಪಿ ಚುನಾವಣಾ ಏಜೆಂಟ್‌ರೊಬ್ಬರು ಖಚಿತಪಡಿಸಿದ್ದಾರೆ.
ಮತದಾನ ಮಾಡಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಸ್ ಟಿ ಸೋಮಶೇಖರ ಅವರು, ಅನುದಾನ ನೀಡುವವರಿಗೆ ಆತ್ಮಸಾಕ್ಷಿ ಮತ ಹಾಕಿದ್ದೇನೆ. 11 ವರ್ಷದಿಂದ ಎಲ್ಲರಿಗೂ ಹಾಕಿದ್ದೇನೆ. ರಾಜ್ಯಸಭೆಗೆ ಆಯ್ಕೆಯಾದವರು ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ಹೀಗಾಗಿ ಆತ್ಮಸಾಕ್ಷಿಯಂತೆ ಮತ ಹಾಕಿದ್ದೇನೆ ಎಂದು ತಿಳಿಸಿದರು.
ಕಳೆದ ಸಾರಿ ನಿರ್ಮಲಾ ಸೀತಾರಾಮನ್ ಅವರಿಗೆ ಹಾಕಿದ್ದೆ, ಆಮೇಲೆ ನಿರ್ಮಲಾ ಸೀತಾರಾಮನ್ ನನಗೆ ಅಪಾಯಿಟ್ಮೆಂಟ್ ಕೊಡಲೇ ಇಲ್ಲ.ನನಗೆ ಯಾರು ಭರವಸೆ ಕೊಡುತ್ತಾರೆಯೋ ಅವರಿಗೆ ಮತಕೊಡುತ್ತೇನೆ ಎಂದು ಹೇಳಿದರು

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement