2500 ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಮಿಕ್ಕುಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆಗಳು, ಸ್ಥಳೀಯ ವೃಂದದಲ್ಲಿ 214 ( ಹಿಂಬಾಕಿ 15 ಹುದ್ದೆ ಸೇರಿ) ಹುದ್ದೆಗಳು ಇವೆ. ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಉದ್ಯೋಗ ಸಂಸ್ಥೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆಯ ಹೆಸರು : ನಿರ್ವಾಹಕ (ಕಂಡಕ್ಟರ್)
ಹುದ್ದೆಗಳ ಒಟ್ಟು ಸಂಖ್ಯೆ : 2500.
ಮಾಸಿಕ ಸಂಬಳ : 18660-25300 ರೂ.
ವೆಬ್‌ಸೈಟ್‌https://mybmtc.karnataka.gov.in/english

ಶೈಕ್ಷಣಿಕ ವಿದ್ಯಾರ್ಹತೆ
ದ್ವಿತೀಯ ಪಿಯುಸಿ (PUC) ಪಾಸ್ ಅಥವಾ ಐಸಿಎಸ್‌ಇ / ಸಿಬಿಎಸ್‌ಇ 12ನೇ ತರಗತಿ ಪಾಸ್. ಅಥವಾ 3 ವರ್ಷ ಡಿಪ್ಲೊಮ ಉತ್ತೀರ್ಣರಾಗಿರಬೇಕು.
ಮುಕ್ತ ಶಾಲೆ / ಮುಕ್ತ ವಿವಿಯಿಂದ ದ್ವಿತೀಯ ಪಿಯುಸಿ/ 12ನೇ ತರಗತಿ/ ಜೆಒಸಿ / ಜೆಎಲ್‌ಸಿ ಕೋರ್ಸ್‌ಗಳು ಮಾನ್ಯವಿಲ್ಲ. ಇವರು ಅರ್ಜಿ ಹಾಕಲು ಅರ್ಹರಾಗಿರುವುದಿಲ್ಲ.
ಇತರೆ ಅರ್ಹತೆ
ಮಾನ್ಯತೆ ಪಡೆದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ & ಬ್ಯಾಡ್ಜ್‌ ಅನ್ನು ಹೊಂದಿರತಕ್ಕದ್ದು.
ಪುರುಷರ ಎತ್ತರ 160 CM, ಮಹಿಳೆಯರ ಎತ್ತರ 150 CM ಇರಬೇಕಾಗುತ್ತದೆ.
ವಯೋಮಿತಿ: ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 10-04-2024 ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು
ಸಾಮಾನ್ಯ ವರ್ಗಕ್ಕೆ 35 ವರ್ಷ, 2A / 2B / 3A / 3B ಅಭ್ಯರ್ಥಿಗಳಿಗೆ 38 ವರ್ಷ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ & ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ, ಮಾಜಿ ಸೈನಿಕ /ಇಲಾಖಾ ಅಭ್ಯರ್ಥಿಗಳಿಗೆ 45 ವರ್ಷ.
ತರಬೇತಿ ಅವಧಿ ಭತ್ಯೆ ಮತ್ತು ವೇತನ ಶ್ರೇಣಿ
ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು 1 ವರ್ಷ ಕಾಲ ವೃತ್ತಿ ತರಬೇತಿಯನ್ನು ನಿಯೋಜಿಸಲಾಗುತ್ತದೆ. ಈ ತರಬೇತಿ ಅವಧಿಯಲ್ಲಿ ಮಾಸಿಕ ಸಮಗ್ರ ತರಬೇತಿ ಭತ್ಯೆಯಾಗಿ 9,100 ರೂ. ನೀಡಲಾಗುತ್ತದೆ.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

ಅರ್ಜಿ ಸಲ್ಲಿಸುವ ವಿಧಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್‌ http://kea.kar.nic.in ನಲ್ಲಿ ಮಾರ್ಚ್‌ 10 ರಂದು ತೋರಿಸುವ ಲಿಂಕ್‌ ಅನ್ನು ಆಯ್ಕೆ ಮಾಡಬೇಕು. ಆನ್‌ಲೈನ್‌ ಮೂಲಕ ಅರ್ಜಿ ಭರ್ತಿ ಮಾಡಬೇಕಾಗುತ್ತದೆ.
ಅಪ್ಲಿಕೇಶನ್‌ ಶುಲ್ಕದ ವಿವರ : ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ಪ್ರವರ್ಗಗಳಿಗೆ ಅರ್ಜಿ ಶುಲ್ಕವು 750 ರೂ.,
ಪರಿಶಿಷ್ಟ ಜಾತಿ/ ಪ್ರವರ್ಗ-1, ಪರಿಶಿಷ್ಟ ಪಂಗಡ, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 500.ರೂ.

ಮಹತ್ವದ ದಿನಾಂಕ…
ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ : 10-03-2024
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 10-04-2024
ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ : 13-04-2024
ಹೆಚ್ಚಿನ ಮಾಹಿತಿ ಹಾಗೂ ಅಧಿಸೂಚನೆ ನೋಡಲು ಇಲ್ಲಿ BMTC_SD_final_Detailed_Notification1kannada    ಕ್ಲಿಕ್‌ ಮಾಡಬಹುದಾಗಿದೆ.
ಬಿಎಂಟಿಸಿ (BMTC) ನಿರ್ವಾಹಕರ ನೇಮಕಾತಿ ವಿಧಾನ
ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು 2 ಪತ್ರಿಕೆಗಳಿಗೆ ತಲಾ 100 ಗಳಿಗೆ ನಡೆಸಲಾಗುತ್ತದೆ. ನಂತರ ಅದರ 75% ಅಂಕಗಳು ಮತ್ತು ಶೈಕ್ಷಣಿಕ ಅರ್ಹತೆಯ 25% ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿಕೊಂಡು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement