ರಾಜ್ಯಸಭೆ ಚುನಾವಣೆ | ನನಗೆ ಅನಾರೋಗ್ಯ ಇದ್ದ ಕಾರಣ ಮತದಾನ ಮಾಡ್ಲಿಕ್ಕೆ ಆಗ್ಲಿಲ್ಲ ; ಶಿವರಾಮ ಹೆಬ್ಬಾರ

ಯಲ್ಲಾಪುರ: ‘ಅನಾರೋಗ್ಯದ ಕಾರಣಕ್ಕೆ ರಾಜ್ಯಸಭೆ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆಸ್ಪತ್ರೆಯಲ್ಲಿ‌ ಚಿಕಿತ್ಸೆಗೆಂದು ದಾಖಲಾಗಿದ್ದೆ, ಮತದಾನ ಮಾಡಲು ಆಗದೇ ಇರುವುದಕ್ಕೆ ನನಗೆ ಬೇಸರವಿದೆ. ಮಂಗಳವಾರ ಮುಂಜಾನೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಅವರು ಮಧ್ಯಾಹ್ನದ ಒಳಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡುವುದಾಗಿ ಹೇಳಿದ್ದರು. ಆದರೆ, ಆರೋಗ್ಯ ಸ್ಥಿತಿ ಸ್ಥಿರವಾಗಲು ತಡವಾಗಿದ್ದರಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲು ತಡವಾಯಿತು ಎಂದು ಹೇಳಿದ್ದಾರೆ.

ನಾನು ಮತದಾನವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿದ್ದೇನೆ ಎಂದೆಲ್ಲ ಮಾಧ್ಯಮದಲ್ಲಿ ಪ್ರಕಟವಾಗಿದೆ. ಆದರೆ ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ನನಗೆ ಪಲಾಯನ ಮಾಡಬೇಕಾದ ಅವಶ್ಯಕತೆಯೂ ಇಲ್ಲ. ಊಹಾಪೋಹಗಳಿಗೆ ಉತ್ತರ ಕೊಡಬೇಕಾದ ಅವಶ್ಯಕತೆಯೂ ಇಲ್ಲ. ಡಿಕೆ ಶಿವಕುಮಾರ ನನ್ನ ಆತ್ಮೀಯ ಸ್ನೇಹಿತರು. ಶಿವಕುಮಾರ ಮತ್ತು ಸಿದ್ದರಾಮಯ್ಯ ಅವರ ಜತೆಗೆ ಹೊದ ಬಗ್ಗೆ ದಾಖಲೆ ಇದ್ದರೆ ತೋರಿಸಲಿ ಎಂದು ಹೇಳಿದರು. ಒಂದು ವೇಳೆ ಪಕ್ಷದ ವಿಪ್ ಉಲ್ಲಂಘನೆ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಂಡರೆ ಅದನ್ನು ಎದುರಿಸುತ್ತೇನೆ ಎಂದರು.

ಪ್ರಮುಖ ಸುದ್ದಿ :-   ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬೆಂಗಳೂರಲ್ಲಿ ಅಪಾರ್ಟ್ಮೆಂಟ್‌ ನಿಂದ ಬಿದ್ದು ಸಾವು ; ಆತ್ಮಹತ್ಯೆ ಶಂಕೆ

ಬಿಜೆಪಿಯಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಬಿಜೆಪಿಯಲ್ಲೇ ಕೆಲಸ ಮಾಡುತ್ತೇನೆ. ಪಕ್ಷ ಬಿಡುವ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಯೋಚನೆ ಮಾಡಿಲ್ಲ ಎಂದ ಅವರು ನನಗೆ ಪಕ್ಷದ ಮೇಲೆ ಬೇಸರವಿದೆ, ಆದರೆ ಅದು ಜಿಲ್ಲಾ ಮಟ್ಟದಲ್ಲಿ ಮಾತ್ರ. ಪಕ್ಷದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಮೇಲೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರ ಮೇಲೆ ಶಿಸ್ತು ಕ್ರಮ ಜರುಗಿಸದ ಕಾರಣಕ್ಕೆ ಪಕ್ಷದ ಕೆಲ ಮುಖಂಡರ ಮೇಲೆ ಬೇಸರವಿದೆ. ಈಚೆಗೆ ಜಿಲ್ಲೆ, ತಾಲ್ಲೂಕು ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜಿಲ್ಲೆ ಮತ್ತು ತಾಲೂಕಿನ ಬಿಜೆಪಿ ನಡೆಯ ಬಗ್ಗೆ ಚುನಾವಣೆ ಆದಾಗಿನಿಂದಲೂ ಬೇಸರ ವ್ಯಕ್ತಪಡಿಸುತ್ತ ಬಂದಿದ್ದೇಬನೆ. ಪಕ್ಷದಿಂದ ಅಮಾನತು ಮಾಡಿದವರಿಗೆ ಮತ್ತೆ ಪಕ್ಷದ ಹುದ್ದೆ ನೀಡಲಾಗಿದೆ. ಬಿಜೆಪಿಯ ಕೆಲ ಪದಾಧಿಕಾರಿಗಳೇ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದರ ಬಗ್ಗೆ ಬೇಸರ ಇದೆ, ನನಗೆ ಬೇಸರವಿರುವುದು ಜಿಲ್ಲಾ ಮಟ್ಟದ ಕೆಲವು ಮುಖಂಡರ ಮೇಲೆಯೇ ಹೊರತು ರಾಜ್ಯ ಹಾಗೂ ರಾಷ್ಟ್ರ ಮುಖಂಡರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಾಹನಗಳಿಗೆ ಕಣ್ಣುಕುಕ್ಕುವ ಎಲ್‌ಇಡಿ ಲೈಟ್‌ ಹಾಕಿಸಿದ್ದೀರಾ : ಜುಲೈ 1ರಿಂದ ಬೀಳಲಿದೆ ದಂಡ...

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement