ಕೋಲ್ಕತ್ತಾ : ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮದೇ ಪಕ್ಷದ ಸಂಸದ ಸುದೀಪ ಬ್ಯಾನರ್ಜಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐ ತನಿಖೆ ನಡೆಸಬೇಕು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ವಕ್ತಾರ ಕುನಾಲ ಘೋಷ್ ಶನಿವಾರ ಒತ್ತಾಯಿಸಿದ್ದಾರೆ.
X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಸಂಸದ ಸುದೀಪ ಬ್ಯಾನರ್ಜಿ ಬ್ಯಾಂಕ್ ಖಾತೆಗಳು ಮತ್ತು ಅವರ ಪರವಾಗಿ ಭುನೇಶ್ವರ ಅಪೋಲೋಕ್ಕೆ ಹಣ ಪಾವತಿಯಾದ ಬಗ್ಗೆ ತನಿಖೆಯಾಗಬೇಕು. ಅವರು ಕಸ್ಟಡಿಯಲ್ಲಿದ್ದಾಗ, ಅವರಿಗೆ ದೊಡ್ಡ ಮೊತ್ತವನ್ನು ಪಾವತಿಸಲಾಗಿದೆಯೇ ಅಥವಾ ಅವರ ಪರವಾಗಿ ಆಸ್ಪತ್ರೆಗೆ ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಟಿಎಂಸಿಯ ಸಂಸದ ಸುದೀಪ ಬ್ಯಾನರ್ಜಿಯನ್ನು ಬಂಧಿಸಬೇಕು ಎಂದು ಕುನಾಲ್ ಘೋಷ್ ಹೇಳಿದ್ದಾರೆ.
“ಇದು ನಿಜವೆಂದು ಕಂಡುಬಂದರೆ, ಅದು ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿರಬಹುದು ಮತ್ತು ಹೆಚ್ಚಿನ ತನಿಖೆಗಾಗಿ ಬ್ಯಾನರ್ಜಿಯನ್ನು ಬಂಧಿಸಬೇಕು. ಇದನ್ನು ತಪ್ಪಿಸಲು ಏಜೆನ್ಸಿಗಳು ಪ್ರಯತ್ನಿಸಿದರೆ ಈ ವಿಷಯದ ತನಿಖೆಗಾಗಿ ನಾನು ಎಲ್‌ಡಿ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ” ಎಂದು ಅವರು ಹೇಳಿದರು.
ಶುಕ್ರವಾರ (ಮಾರ್ಚ್ ೧) ಕುನಾಲ ಘೋಷ್ ಅವರು ಟಿಎಂಸಿ ವಕ್ತಾರ ಹುದ್ದೆಗೆ ರಾಜೀನಾಮೆ ನೀಡಿದರು. ಅವರು ಎಕ್ಸ್‌ನ ಅಧಿಕೃತ ಹ್ಯಾಂಡಲ್‌ನಲ್ಲಿ “ನಾನು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಹುದ್ದೆಯಲ್ಲಿ ಉಳಿಯಲು ಬಯಸುವುದಿಲ್ಲ. ನಾನು ವ್ಯವಸ್ಥೆಯಲ್ಲಿ ಅಸಮರ್ಥನಾಗಿದ್ದೇನೆ. ಹೀಗೆಯೇ ಮುಂದುವರೆಯಲು ನನಗೆ ಸಾಧ್ಯವಾಗುತ್ತಿಲ್ಲ. ನಾನು ಪಕ್ಷದ ಸೈನಿಕ ಮತ್ತು ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ, ನಾನು ಬೇರೆ ಪಕ್ಷಕ್ಕೆ ಸೇರಲು ಯೋಜಿಸುತ್ತಿದ್ದೇನೆ ಎಂಬ ವದಂತಿಯನ್ನು ದಯವಿಟ್ಟು ನಿಲ್ಲಿಸಿ ಎಂದು ಅವರು ಬರೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ